ತಡವಲಗಾದಲ್ಲಿ ಎತ್ತಿನ ಗಾಡಿ ಸ್ಪರ್ಧೆ

ತಡವಲಗಾದಲ್ಲಿ ಎತ್ತಿನ ಗಾಡಿ ಸ್ಪರ್ಧೆ  Bullock cart race in Tadavalaga


 ಇಂಡಿ  06: ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಶ್ರೀ ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಎತ್ತಿನ ಗಾಡಿ (ಟೋಚನ್ ಖಣ) ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.  ಸಚೀನ ಕೂಡಗಿ ಹಾಗೂ ಮರುಳಸಿದ್ದೇಶ್ವರ ಟ್ರ್ಯಕ್ಟರ್ ಮತ್ತು ಜೆಸಿಬಿ ಮಾಲೀಕರ ಬಳಗದವರು ತಮ್ಮ ಸ್ವಂತ ಖರ್ಚಿನಲ್ಲಿ ಜಾತ್ರಾ ಸಮಿತಿಯ ಸಹಯೋಗದೊಂದಿಗೆ ಸ್ಪರ್ಧೆಯನ್ನು ಆಯೋಜಿಸಿದ್ದರು.  

 ಈ ಸಂದರ್ಭದಲ್ಲಿ ಮಾತನಾಡಿದ ತಡವಲಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಹೊಸಮನಿ, ಎತ್ತಿನ ಗಾಡಿ ಸ್ಪರ್ಧೆ ಕೇವಲ ಕ್ರೀಡೆಯಲ್ಲ. ಇದು ಗ್ರಾಮೀಣ ಜನರ ಜಾನಪದ ಸಂಸ್ಕೃತಿ ಹಾಗೂ ಕೃಷಿ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.  

 ಸ್ಪರ್ಧೆಯಲ್ಲಿ ರೈತರು ತಮ್ಮ ಎತ್ತುಗಳನ್ನು ಬಣ್ಣಬಣ್ಣದ ಹೂವು, ಗೆಜ್ಜೆ, ಜೂಲು ಹಾಗೂ ವಿವಿಧ ಬಣ್ಣಗಳಿಂದ ಅಲಂಕರಿಸಿ ಭಾಗವಹಿಸಿದ್ದರು. ನಿಗದಿತ ದೂರವನ್ನು ಕಡಿಮೆ ಅವಧಿಯಲ್ಲಿ ಕ್ರಮಿಸಿದ ತಂಡಗಳಿಗೆ ಬಹುಮಾನ ನೀಡಲಾಯಿತು.