ವೈದ್ಯರಿಂದ ಆರೋಗ್ಯವಂತ ಸಮಾಜ ನಿರ್ಮಾಣ: ಶ್ವೇತಾ ಬೀಡಿಕರ
Building a Healthy Society by Doctors: Shweta Beedikar
ಜಮಖಂಡಿ 02: ದೇಶದಲ್ಲಿ ಆರ್ಯುವೇದ, ಆಲೋಪತಿ ವೈದ್ಯರು ಕೆಲಸ ಮಾಡುತ್ತಾರೆ. ಡಾಕ್ಟರ್ ಇಲ್ಲದೆ ಇದ್ದರೆ ಜನತೆ ಅನಾರೋಗ್ಯದಿಂದ ತುಂಬುತ್ತಿತು. ಆರೋಗ್ಯವಂತ ಸಮಾಜವನ್ನು ನಿರ್ಮಾಣವನ್ನು ವೈದ್ಯರು ಮಾಡುತ್ತಾರೆ ಎಂದು ಎಸಿ ಶ್ವೇತಾ ಬೀಡಿಕರ ಹೇಳಿದರು.
ನಗರದ ಬಸವ ಭವನದಲ್ಲಿ ನಡೆದ ಇಂಡಿಯನ್ ಮೇಡಿಕಲ್ ಅಸೋಸಿಯೇಶನ್ ಜಮಖಂಡಿ ಸಹಯೋಗದಲ್ಲಿ ವೈದ್ಯರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವೈದ್ಯರಿಗೆ ಬಹಳ ಪ್ರಾಮುಖ್ಯತೆ ಇದೆ. ಅವರಿಗೆ ವೈದೋ ನಾರಾಯಣ ಹರಿಯೋ ಎಂದು ವೈದ್ಯರನ್ನು ಕರೆಯುತ್ತಾರೆ. ಆರೋಗ್ಯದ ಭಾಗ್ಯವನ್ನು ನೀಡುವ ವೈದ್ಯರ ಕೆಲಸ ಬಹಳ ಮುಖ್ಯವಾಗಿದೆ ಎಂದರು.
ಡಾಕ್ಟರ್, ಪೋಲಿಸ್, ಕಂದಾಯ ಇಲಾಖೆ ಇದ್ದರೆ ಮಾತ್ರ ತಾಲೂಕು ಮತ್ತು ಉಪವಿಭಾಗವು ಸುರಕ್ಷಿತವಾಗಿ ಇರುತ್ತದೆ. ಕೋವಿಡ್-19 ಬಂದ ಸಂದರ್ಭದಲ್ಲಿ ತಕ್ಷಣ ಎಲ್ಲರಿಗೂ ಅರಿವು ಮೂಡಿಸುವ ಕೆಲಸವನ್ನು ಮಾಡಿದರು. ಕೋವಿಡ್ ಸಮಯದಲ್ಲಿ ಡಾಕ್ಟರ್‌ಗಳು ಸತತವಾಗಿ ಕಾರ್ಯನಿರ್ವಹಿಸಿ ರೋಗಿಯನ್ನು ಗುಣಪಡಿಸುವ ಕೆಲಸ ಮಾಡಿದ್ದು ಶ್ಲಾಘನೀಯವಾಗಿದೆ ಎಂದರು.
ಡಿಎಸ್‌ಪಿ ರೋಷನ್ ಜಮೀರ ಮಾತನಾಡಿ, ವೈದ್ಯಕೀಯ ವೃತ್ತಿಯಲ್ಲಿ ಬಹಳ ಪ್ರಾಮುಖ್ಯತೆ ಹೊಂದಿದ ವೃತ್ತಿಯಾಗಿದೆ. ನಾಗರಿಕರು ಅವರ ಮೇಲೆ ಬಹಳ ವಿಶ್ವಾಸ ಇಟ್ಟಿರುತ್ತಾರೆ. ವ್ಯಕ್ತಿಗೆ ಕಾಯಿಲೆ ಬಂದ ಮೇಲೆ ವೈದ್ಯರು ನೆನಪಾಗುತ್ತಾರೆ. ಕೋವಿಡ್- 19 ಸಮಯದಲ್ಲಿ ಪೋಲಿಸ್ ಹಾಗೂ ವೈದ್ಯರು ಬಹಳ ಕಾರ್ಯನಿರ್ವಹಿಸುವ ಜೊತೆಗೆ ಕೋವಿಡ್‌ವನ್ನು ನಿಯಂತ್ರಿಸಿದರು ಎಂದರು.
ಡಾ, ಶಿವಾನಂದ ಕುಬಸದ ಮಾತನಾಡಿ, ಗಂಗಾ ಜಲವೂ ಕೂಡಾ ಓಷಧೀಯಾಗುತ್ತದೆ. ಯಾಕೆಂದರೆ ನಂಬಿಕೆ ಇದ್ದರೆ ಯಾವುದೆ ರೋಗವನ್ನು ಸಹ ನಿವಾರಿಸಬಹುದು ಶಕ್ತಿ ಇದೆ. ಆದರೆ ವೈದ್ಯ ನಾರಾಯಣ ಹರಿ ಎನ್ನುತ್ತಾರೆ. ಅದು ತಪ್ಪು ಕಲ್ಪನೆ. ನಾರಾಯಣ ವೈದ್ಯೋ ಹರಿ ಎಂದು ಇದೆ. ವೈದ್ಯ ವೃತ್ತಿ ಅತ್ಯಂತ ಸಂತೋಷ ಪಡುವ ವೃತ್ತಿ. ಇಂದಿನ ದಿನಮಾನದಲ್ಲಿ ವೈದ್ಯಕೀಯಕ್ಷೇತ್ರ ಮತ್ತು ವೈದ್ಯಕೀಯ ಶಿಕ್ಷಣ ಮಾರಾಟವಾಗುತ್ತಿದೆ. ವೈದ್ಯಕೀಯ ಕ್ಷೇತ್ರ ಮತ್ತು ವೈದ್ಯಕೀಯಶಿಕ್ಷಣ ಇವುಗಳು ಉಚಿತವಾಗಿ ಮಾಡುವ ಕೆಲಸ ಸರಕಾರ ಹೊಣೆಯಾಗಿದೆ. ಸರಕಾರ ಮಟ್ಟದಲ್ಲಿ ಉಚಿತವಾದರೆ ಮಾತ್ರ ವೈದ್ಯಕೀಯ ವೃತ್ತಿಗೆ ಉತ್ತಮ ಹೆಸರು ಬರಲು ಸಾಧ್ಯವಾಗುತ್ತದೆ. ರೋಗಿಯನ್ನು ವ್ಯಾಪಾರ ಮಾಡುವ ಹಂತಕ್ಕೆ ಸಲುಪಿದೆ ವ್ಯದ್ಯಕೀಯ ಕ್ಷೇತ್ರವಾಗಿದೆ. ರೋಗಿ ಆಸ್ಪತ್ರೆಗೆ ಬಂದರೆ ವ್ಯದೈರು ಆತನಿಗೆ ಯಾವುದೊಂದು ಕಾಯಿಲೆ ಬಂದಿದೆ ಎಂದು ತಿಳಿಸಿದರೆ. ರೋಗಿಯು ಯಾವುದೇ ಸ್ಕ್ಯಾನಿಂಗ್ ಮಾಡಿಲ್ಲ ಅಂತ ಹೇಳುತ್ತಾನೆ. ರೋಗಿ ಮತ್ತು ವ್ಯದ್ಯರ ನಡುವೆ ಸಾಕ್ಷಿಗಳು ಶುರುವಾಗುತ್ತಿದೆ ಇದು ಮೊದಲು ನಿಲ್ಲಬೇಕು. ಇತ್ತಿಚೀನ ದಿನಗಳಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿವೆ ಅದು ನಿಲ್ಲಬೇಕು. ಶೇ, 20 ಉಚಿತವಾಗಿ ಸೇವೆಯನ್ನು ನೀಡುವ ಕೆಲಸ ವ್ಯದ್ಯರು ಮಾಡಬೇಕು ಎಂದರು.
ಡಾ.ಎಚ್.ಜಿ. ದಡ್ಡಿ ಮಾತನಾಡಿದರು. ಡಾ. ವ್ಹಿ. ಎಸ್. ಬಿರಾದರ, ಡಾ. ಮಹೇಶ ಪಾಟೀಲ, ಡಾ. ವ್ಹಿ. ಸಿ. ಮುದ್ದಿಗೌಡರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಡಿ.ಕೆ.ಕೊಕ್ಕನೂರ, ಡಾ.ಮಾಳೇಶ ಪೂಜಾರ, ಡಾ.ಎ.ಆರ್.ದೇವರಡ್ಡಿ, ಡಾ.ಗುರು ಜಾಲಿಹಾಳ ಅತಿಥಿಗಳ ಪರಿಚಯ ಮಾಡಿದರು. ಡಾ. ವೀರಣ ಜತ್ತಿ ನಿರೂಪಿಸಿ, ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 