ಸಿಡಿಲು ಬಡಿದು ಎಮ್ಮೆ ಸಾವು
ಕೊಲ್ಹಾರ 15: ಪಟ್ಟಣದಲ್ಲಿ ಸುರಿದ ಗುಡುಗು ಸಹಿತ ಮಳೆಯಿಂದಾಗಿ ಸಿಡಿಲು ಬಡಿದು ಎಮ್ಮೆ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ.ಪಟ್ಟಣದ ಎರಡನೇ ವಾರ್ಡಿನ ಕಲ್ಲಪ್ಪ ಸಂಗಪ್ಪ ಗಣಿ ಅವರಿಗೆ ಸೇರಿದ್ದ ಎಮ್ಮೆಯನ್ನು ಪಕ್ಕದ ಹಣಮಂತ ದೇವಸ್ಥಾನ ಸಮೀಪ ಗಿಡದ ಕೆಳಗೆ ಕಟ್ಟಿದ್ದಾರೆ. ತೆಂಗಿನ ಗಿಡಕ್ಕೆ ಸಿಡಿಲು ಬಡಿದ ಪರಿಣಾಮ ತೀವ್ರತೆಗೆ ಪಕ್ಕದಲ್ಲಿದ್ದ ಎಮ್ಮೆ ಕೂಡಾ ಸಾವನ್ನಪ್ಪಿದ ಘಟನೆ ರಾತ್ರಿ 8:30 ರ ಸುಮಾರಿಗೆ ನಡೆದಿದೆ. ಸಿಡಿಲು ಬಡೆದು ತೆಂಗಿನಗಿಡ ಹೊತ್ತಿ ಉರಿಯುತ್ತಿದ್ದಂತೆ ಸ್ಥಳಿಯರು ಅಗ್ನಿ ಶಾಮಕ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ಬೀಳಗಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕೊಲ್ಹಾರ ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ತೆಂಗಿನ ಗಿಡಕ್ಕೆ ಹೊತ್ತಿಕೊಂಡ ಬೆಂಕಿ ಸಂಪೂರ್ಣ ಆರಿ ಹೋಗಿತ್ತು. ಎಮ್ಮೆ ಸಾವಿಗೆ ಸಂಬಂಧಿಸಿದಂತೆ ಶುಕ್ರವಾರ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.