ಅಕ್ಟೋಬರ್ 12ರಂದು ವಧು-ವರರ ಸಮಾವೇಶ
Bride and groom's meeting on October 12th
ವಿಜಯಪುರ 27: :ಗದಗ ನಗರದ ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದ ವತಿಯಿಂದ ಸಮಾಜದ ಸಂಚಾಲಕರಾದ ದೇವೇಂದ್ರ ಅಂಬಿಗೇರ ಇವರು ಇದೇ 12ನೇ ಆಕ್ಟೋಬರ್ 2025ರ ರವಿವಾರ ರಂದು ವಧು-ವರರ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ವಧು-ವರ ಸಮಾವೇಶವು ಗದಗ ನಗರದ ಹುಬ್ಬಳ್ಳಿ ರಸ್ತೆಯ ಮಾರ್ಗದಲ್ಲಿರುವ ಮುಳಗುಂದ ನಾಕಾ ಹತ್ತಿರದ ಹೊಟೆಲ್ ಕ್ಲಾರ್ಕ್‌ಇನ್ ಸ್ಟಾರ್ ಹೊಟೆಲ್‌ನಲ್ಲಿ ನಡೆಸಲಾಗುತ್ತಿದೆ.
ಸಮಾವೇಶದಲ್ಲಿ ವಧು-ವರರ ಫೋಟೊ ಮೂಲಕ ಇಮೇಜ್ ಹಾಗೂ ವೀಡಿಯೋ ಮೂಲಕ ಪ್ರದರ್ಶನ ಮಾಡಲಾಗುವುದು. 2025ನೇ ಆಕ್ಟೋಬರ 1ರ ವರೆಗೆ ವಧು-ವರರು ತಮ್ಮ ಹೆಸರುಗಳನ್ನು ನೋಂದಣಿ ಮಾಡಬಹುದಾಗಿದೆ. ಆಸಕ್ತ ಯುವಕ-ಯುವತಿಯರ, ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದ ಸಂಚಾಲಕರಾದ ದೇವೇಂದ್ರ ಅಂಬಿಗೇರ ಇವರ ವಾಟ್ಸ್‌ಆಪ್ ನಂಬರ 9880638379ಗೆ ತಮ್ಮ ಇತ್ತೀಚಿನ ಫೋಟೊ ಹಾಗೂ ಬಯೋಡಾಟಾವನ್ನು ಕಳುಹಿಸಿಕೊಡುವಂತೆ ಕೋರಿರುವುರು. ಸಮಾವೇಶದಲ್ಲಿ ವಧು-ವರರ ಜೊತೆಗೆ ಪಾಲಕರು ಭಾಗವಹಿಸಬಹುದಾಗಿದೆ.
ವಿಜಯಪುರ ಜಿಲ್ಲೆಯಿಂದ ವಧು-ವರರು ಹಾಗೂ ಅವರೊಂದಿಗೆ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಜಯಪುರ ಜ್ಞಾನಗಂಗಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಸ್.ಎಮ್ ಗಾಣೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 