ಲೋಕದರ್ಶನವರದಿ
ಶಿಗ್ಗಾವಿ : ಯುವ ಸಮೂಹ ರಕ್ತದ ಅನಿವಾರ್ಯತೆ ಮತ್ತು ರಕ್ತದ ಮಹತ್ವವನ್ನು ಅರಿತು ರಕ್ತದಾನ ಮಾಡಬೇಕೆಂದು ಹಾವೇರಿ ಜಿಲ್ಲಾಸ್ಪತ್ರೆಯ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಹೇಳಿದರು.
ಗುರುವಾರ ಪಟ್ಟಣದ ರಂಭಾಪುರಿ ಕಾಲೇಜಿನಲ್ಲಿ ರಂಭಾಪುರಿ ಕಾಲೇಜು ಶಿಗ್ಗಾವಿ, ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಜೆಸಿಐ ಶಿಗ್ಗಾವಿ ಜನಪದ ವಲಯ, ಜಿಲ್ಲಾಸ್ಪತ್ರೆ ಹಾವೇರಿ, ತಾಲೂಕಾ ಆಸ್ಪತ್ರೆ ಶಿಗ್ಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲೇಜು ವಿದ್ಯಾಥರ್ಿಗಳು ರಕ್ತಧಾನದ ಮಹತ್ವ ಅರಿತು ಜೀವ ಉಳಿಸುವ ಸದುದ್ಧೇಶದಿಂದ ರಕ್ತದಾನ ಮಾಡಬೇಕು, ಅದು ನಮ್ಮ ಆಯುಷ್ಯವನ್ನ ಹೆಚ್ಚಿಗೆ ಮಾಡುತ್ತದೆ, ದೇಹದ ತೂಕ ಕಡಿಮೆ ಮಾಡಲು ಸಹಾಯವಾಗುತ್ತದೆ, ದಾನ ಮಾಡಿದ ರಕ್ತ ಎಂದೂ ವ್ಯರ್ಥವಾಗುವುದಿಲ್ಲ ಅದು ಇನ್ನೊಂದು ಜೀವಕ್ಕೆ ನೆರವಾಗುತ್ತದೆ ಎಂದು ಮನವರಿಕೆ ಮಾಡಿದರು.
ಹಾವೇರಿ ಜಿಲ್ಲಾಸ್ಪತ್ರೆಯ ರಕ್ತ ಭಂಡಾರ ಪ್ರಯೋಗಾಲಯದ ಹಿರಿಯ ತಂತ್ರಜ್ಞರಾದ ಬಸವರಾಜ ಕಮತದ ಮಾತನಾಡಿ ಇಂದು ಪೌಷ್ಟಿಕಾಂಶಗಳ ಕೊರತೆಯಿಂದ ರಕ್ತದಾನಿಗಳ ಕೊರತೆಯೂ ಹೆಚ್ಚಾಗಿದೆ, ಇದನ್ನ ನೀಗಿಸುವ ನಿಟ್ಟಿನಲ್ಲಿ ಕಾಲೇಜು ವಿದ್ಯಾಥರ್ಿಗಳು ಸೇರಿದಂತೆ ಯುವ ಸಮೂಹಕ್ಕೆ ಇದರ ಅರಿವು ಅವಶ್ಯವಾಗಿದೆ ಎಂದರು.
ರಂಭಾಪುರಿ ಕಾಲೇಜಿನ ಪದವಿ ಪ್ರಾಚಾರ್ಯ ಪ್ರೋ. ಪಿ. ಸಿ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನ ಬಹಳ ಒಳ್ಳೆಯ ಅವಕಾಶ ಇದನ್ನು ಯುವಕರು ಇನ್ನೊಂದು ಜೀವಕ್ಕೆ ನೆರವಾಗುತ್ತದೆ ಎಂದರೆ ಏಕೆ ನೀಡಬಾರದು ? ಇದೊಂದು ಮಾನವೀಯ ಕಾರ್ಯವಾಗಿದ್ದು ಯುವಕರ ಪ್ರೇರೆಣೆ ದೇಶದ ಏಳಿಗೆಗೆ ಹೇಗೆ ನೆರವಾಗುತ್ತದೆ ಎಂಬುದಕ್ಕೆ ರಕ್ತದಾನ ಮಾಡುವ ಮೂಲಕ ಯುವಕರು ತಮ್ಮ ಕರ್ತವ್ಯ ಏನೆಂಬುದನ್ನು ಈ ಮೂಲಕ ಸಾಬೀತುಪಡಿಸಬೇಕಿದೆ ಎಂದು ವಿದ್ಯಾಥರ್ಿಗಳನ್ನು ರಕ್ತದಾನಕ್ಕೆ ಪ್ರೇರೇಪಿಸಿದರು.
ಶಿಬಿರದಲ್ಲಿ 30 ಕ್ಕೂ ಹೆಚ್ಚು ವಿದ್ಯಾಥರ್ಿಗಳು ರಕ್ತದಾನ ಮಾಡಿದರು, ಜೆಸಿಐ ಅದ್ಯಕ್ಷ ಹರೀಶ ಬಂಡಿವಡ್ಡರ, ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಡಿ ಎ ಗೊಬ್ಬರಗುಂಪಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಶ್ರೀಶೈಲ್ ಹುದ್ದಾರ, ಪ್ರೋ ಎಚ್ ಡಿ ದೇವಿಹೊಸೂರ, ಬಿ ವಾಯ್ ತೊಂಡಿಹಾಳ, ಡಾ. ಕುಮಾರಗೌಡ ಪಾಟೀಲ, ರಾಘವೇಂದ್ರ ದೇಶಪಾಂಡೆ, ಸೌಭಾಗ್ಯ ದೊಡ್ಡಮನಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವೈದ್ಯರು, ವಿದ್ಯಾಥರ್ಿಗಳು ಇದ್ದರು.