ರಜಾ ದಿನಗಳಲ್ಲಿಯೂ ಶಾಲಾ ಮಕ್ಕಳಿಗೆ ಬಿಸಿ ಊಟ

ಬಾಗಲಕೋಟೆ 14:  ಬರದ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಬೇಸಿಗೆ ರಜಾ ದಿನಗಳಲ್ಲಿ ಎಪ್ರೀಲ್11 ರಿಂದ ಮೇ 28 ವರೆಗೆ ಒಟ್ಟು 41 ದಿನಗಳ 1ನೇ ತರಗತಿಯಿಂದ 10ನೇ ತರಗತಿ ಸರಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಊಟ ವಿತರಿಸಲಾಗುತ್ತಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ತಿಳಿಸಿದ್ದಾರೆ. 

ಈ ಕುರಿತು ಶುಕ್ರವಾರ ಗೂಗಲ್ ಮೀಟ್ ಮೂಲಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 1033 ಕೇಂದ್ರ ಶಾಲೆಗಳು, 1033 ಮುಖ್ಯ ಶಿಕ್ಷಕರು, 79 ನೋಡಲ್ ಶಿಕ್ಷಕರು, 2601 ಅಡುಗೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು 1,29,189 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಮಧ್ಯಾಹ್ನದ ಬಿಸಿ ಊಟದ ಜೊತೆಗೆ 9ನೇ ತರಗತಿ ಪಾಸಾಗಿರುವ ವಿದ್ಯಾರ್ಥಿಗಳಿಗೆ ಕ್ರೀಯಾತ್ಮಕ ಚಟುವಟಿಕೆ ಮೂಲಕ ಪಾಠ ಬೋದಿಸಲು ಹಾಗೂ ಲೈಬ್ರರಿಗಳನ್ನು ಉಪಯೋಗಿಸಲು ತಿಳಿಸಿದರು. 

ಮತಗಟ್ಟೆ ಇರುವ ಮತ್ತು ಅಡುಗೆ ಕೇಂದ್ರ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಯಾ ತಾಲೂಕಾವಾರು ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಜಿಲ್ಲೆಯ ಎಲ್ಲ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಪಿಡಿಓಗಳಿಗೆ ತಿಳಿಸಲಾಗಿದೆ. ಓದಿನಲ್ಲಿ ಹಿಂದೆ ಇರುವ ಮಕ್ಕಳಿಗೆ ವಿಶೇಷ ತರಗತಿ ನಡೆಸಲು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.  

ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ, ಪಿ.ಎಂ ಪೋಷನ್ ಶಕ್ತಿ ನಿರ್ಮಾಣ ಜಿಲ್ಲಾ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆಯಾ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಎಂ ಪೋಷಣ ಸಹಾಯಕ ನಿರ್ದೇಶಕರು, ಸಿಆರ್‌ಪಿ, ಬಿ.ಆರಿ​‍್ಪ, ದೈಹಿಕ ಶಿಕ್ಷಣಾಧಿಕಾರಿಗಳು ಪಾಲ್ಗೊಂಡಿದ್ದರು