ಮುದ್ದೆಬಿಹಾಲ್

ನದಾಫ್ ಸಂಘದ ಸಂಸ್ಥಾಪಕರ ಜನ್ಮದಿನ ಆಚರಣೆ

ನದಾಫ್ ಸಂಘದ ಸಂಸ್ಥಾಪಕರ ಜನ್ಮದಿನ ಆಚರಣೆ

ಲೋಕದರ್ಶನ ವರದಿ 

ಮುದ್ದೇಬಿಹಾಳ  12: ಪಟ್ಟಣದ ಕರ್ನಾಟಕ ರಾಜ್ಯ ನದಾಫ್‌/ಪಿಂಜಾರ ಸಂಘದ ವತಿಯಿಂದ ವಿದ್ಯಾನಿಕೇತನ ಶಾಲೆಯಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಪಿಂಜಾರ ರತ್ನ ದಿ. ಹಾಜಿ ಹೆಚ್‌. ಇಬ್ರಾಹಿಂ ಸಾಹೇಬರ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕ ಟಿ.ಎನ್‌. ರೂಡಗಿ, ಸಮಾಜವನ್ನು ಒಗ್ಗೂಡಿಸಿ ಸಂಘಟನೆಯ ಬಲವರ್ಧನೆಗೆ ಶ್ರಮಿಸಿದ ಹಾಜಿ ಇಬ್ರಾಹಿಂ ಸಾಹೇಬರು ಪ್ರವರ್ಗ-1 ಮೀಸಲಾತಿ ಸೌಲಭ್ಯ ದೊರಕಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.ಸಂಘದ ತಾಲೂಕು ಘಟಕದ ಅಧ್ಯಕ್ಷ ಮಲಿಕಸಾಬ ನದಾಫ್, ಪ್ರಧಾನ ಕಾರ್ಯದರ್ಶಿ ಬಾಬು ದಿಡ್ಡಿಮನಿ, ಉಪಾಧ್ಯಕ್ಷರಾದ ಮಕ್ತುಮಸಾಬ ನದಾಫ್, ಮೌಲಾಸಾಬ ನದಾಫ್, ಲಾಡ್ಲೇಮಶಾಕ್ ನದಾಫ್, ಟಿ.ಎನ್‌. ರೂಡಗಿ, ಎನ್‌.ಬಿ. ಪಿಂಜಾರ, ದಾವಲಸಾಬ ವಾಲಿಕಾರ, ಹಸನಸಾಬ ಕವಡಿಮಟ್ಟಿ, ಬಾಬು ತಮದಡ್ಡಿ, ರಜಾಕ್ ಭೈರವಾಡಗಿ, ಹೆಚ್‌.ಐ. ಢವಳಗಿ, ಲಾಳೆಸಾಬ ದಿಡ್ಡಿಮನಿ ಹಾಗೂ ಅಬ್ದುಲ್ ರಜಾಕ್ ಮುದ್ನಾಳ ಉಪಸ್ಥಿತರಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ಬಾಬು ದಿಡ್ಡಿಮನಿ ಸ್ವಾಗತಿಸಿ, ವಂದಿಸಿದರು. 


ಸುದ್ದಿ ಓದಿ