ಮಹಾಲಿಂಗೇಶ್ವರ ಸ್ವಾಮೀಜಿ ಜನ್ಮಶತಾಬ್ದಿ ಅಂಗವಾಗಿ ಅಯ್ಯಾಚಾರ
ಲೋಕದರ್ಶನ ವರದಿ
ಮಹಾಲಿಂಗಪುರ 25: ‘ಪಟ್ಟಣದ ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗುರುಲಿಂಗೇಶ್ವರ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ಮೇ 6 ರಂದು ಮಹಾಲಿಂಗೇಶ್ವರ ಸಂಸ್ಥಾನಮಠದಲ್ಲಿ ಜಂಗಮ ವಟುಗಳಿಗೆ ಅಯ್ಯಾಚಾರ, ಮಹಾಲಿಂಗೇಶ್ವರ ಸ್ವಾಮೀಜಿ ಜನ್ಮಶತಾಬ್ದಿ ಮತ್ತು ತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ಅಧ್ಯಕ್ಷ ಗುರುಪಾದಯ್ಯ ಚಟ್ಟಿಮಠ ಹೇಳಿದರು.
ಈ ಕುರಿತು ಮಂಗಳವಾರ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಅವರು ಮಾತನಾಡಿ, ‘ಅಂದು ಬೆಳಿಗ್ಗೆ 6 ಗಂಟೆಗೆ ಗುರುಲಿಂಗೇಶ್ವರ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ, 7 ಗಂಟೆಗೆ ಜಂಗಮ ವಟುಗಳಿಗೆ ಅಯ್ಯಾಚಾರ ನಡೆಯಲಿದೆ. 10 ಗಂಟೆಗೆ ನಡೆಯುವ ಮಹಾಲಿಂಗೇಶ್ವರ ಸ್ವಾಮೀಜಿ ಜನ್ಮಶತಾಬ್ದಿ ಮತ್ತು ತುಲಾಭಾರ ಕಾರ್ಯಕ್ರಮದ ಸಾನಿಧ್ಯವನ್ನು ಚಿಪ್ಪಲಕಟ್ಟಿಯ ಸಿದ್ಧಲಿಂಗ ಶಿವಾಚಾರ್ಯರು ವಹಿಸುವರು. ಗುರುಪಾದಯ್ಯ ಚಟ್ಟಿಮಠ ಅಧ್ಯಕ್ಷತೆ ವಹಿಸುವರು ಎಂದರು.
ಸಮಾಜದ ಪ್ರಮುಖರಾದ ಮಹಾಂತೇಶ ಮನ್ನಯ್ಯನವರಮಠ, ಸಾಗರ ಮಠದ, ಬಸವರಾಜ ಹಿಟ್ಟಿನಮಠ, ಗುರುಲಿಂಗಯ್ಯ ಮಠಪತಿ, ಕುಮಾರ ಮನ್ನಯ್ಯನವರಮಠ, ಚನ್ನಯ್ಯ ಮಸಗುಪ್ಪಿಮಠ ಇದ್ದರು.
ಅಯ್ಯಾಚಾರ ಮಾಡಿಸುವವರು ಸಂಪರ್ಕಿಸುವ ಮೋಬೈಲ್ ನಂಬರ್ ಗಳು :9481010444,8618022827,9880076986,9845533416.