ಬೀರಪ್ಪ ಉಗಾರ ಜಿಲ್ಲಾ ಮಟ್ಟದ ಆನಲೈನ್ ಕ್ವೀಝ್ ನಲ್ಲಿ ಪ್ರಥಮ ಸ್ಥಾನ

Birappa Ugar wins first place in district level online quiz

ವಿಜಯಪುರ 07: ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ. ಸ್ನಾತಕೋತ್ತರ ವಿಭಾಗವು ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಆನಲೈನ್ ಕ್ವೀಝ್ ನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಬಿ.ಕಾಂ 6 ನೇಯ ಸೆಮೆಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಬೀರಪ್ಪ. ಉಗಾರ ಈತನು ಜಿಲ್ಲಾ ಮಟ್ಟದ ಕ್ವೀಝ್ ನಲ್ಲಿ ಪ್ರಥಮ ಸ್ಥಾನ ಪಡದಿದ್ದಾನೆ.  

ಈ ವಿದ್ಯಾರ್ಥಿಯ ಸಾಧನೆಗೆ ಪ್ರಾಂಶುಪಾಲ ಡಾ. ಎ.ಐ.ಹಂಜಗಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್‌.ಖೊದ್ನಾಪೂರ, ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ. ಸಂತೋಷ ಕಬಾಡೆ ಹಾಗೂ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.