ಬಸ್‌ಗೆ ಬೈಕ್ ಮುಖಾಮುಖಿ ಡಿಕ್ಕಿ: ವ್ಯಕ್ತಿಗೆ ಗಂಭೀರ ಗಾಯ
Bike collides head-on with bus: Person seriously injured
ಲೋಕದರ್ಶನ ವರದಿ
ಜಮಖಂಡಿ 19: ನಗರದ ವಿಜಯಪುರ ರಸ್ತೆಯ ಶಾಂತಿ ಬಾರ್ ಹತ್ತಿರ ಕೆಎಸ್‌ಆರ್‌ಟಿಸಿ ಬಸ್‌ಗೆ ಹಾಗೂ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿಯೋರ್ವನು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಜಮಖಂಡಿಯಿಂದ ವಿಜಯಪುರ ಕಡೆಗೆ ಹೊರಟಿರುವ ಹುಬ್ಬಳ್ಳಿ, ವಿಜಯಪುರ ಬಸ್ ಹಾಗೂ ವಿಜಯಪುರ ಕಡೆಯಿಂದ ಜಮಖಂಡಿ ಕಡೆಗೆ ಬರುತ್ತಿರುವ ಬೈಕ್ ಸವಾರನಿಗೆ ಡಿಕ್ಕಿ ಹೊಡಿದಿದ್ದು. ಬೈಕ್ ಬಸ್ಸಿನ ಕೆಳಭಾಗಕ್ಕೆ ಸಿಲಿಕಿಕೊಂಡಿದ್ದು. ಬೈಕ್ ಸವಾರ ತಲೆಗೆ ಹೆಲ್ಮೇಟ್ ಧರಿಸಿದ ಕಾರಣ ಪ್ರಾಣಾಪಾಯದಿಂದ ಉಳಿದಿರುವ ಘಟನೆ ಸಂಭವಿಸಿದೆ.
ಬೈಕ್ ಸವಾರ ಅಥಣಿ ತಾಲೂಕಿನ ಸಂತಿಊರ ಗ್ರಾಮದ ಬಸವರಾಜ ಹನುಮಂತ ಮಡಿವಾಳರ (33) ಎಂದು ಗುರುತಿಸಲಾಗಿದೆ.
ಬೈಕ್ ಸವಾರ ತಲೆಗೆ ಹೆಲ್ಮೇಟ್ ಧರಿಸಿದ ಕಾರಣ ವ್ಯಕ್ತಿ ಬದುಕುಳಿದಿರುತ್ತಾನೆ. ಬಸವರಾಜ ಹನುಮಂತ ಮಡಿವಾಳರನಿಗೆ ಕೈ ಭಾಗಕ್ಕೆ ಹಾಗೂ ಕಾಲಿಗೆ ಗಂಭೀರವಾದ ಪೆಟ್ಟಾಗಿದ್ದು. 108 ವಾಹನದ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 