ಕುರಬತಹಳ್ಳಿಯಲ್ಲಿ ಸಮುದಾಯ ಭವನಕ್ಕೆ ಭೂಮಿ ಪೂಜೆ
ಲೋಕದರ್ಶನ ವರದಿ
ಆಲಮೇಲ 12: ತಾಲೂಕಿನ ಕುರಬತಹಳ್ಳಿ ಗ್ರಾಮದ-25-26ನೇ ಸಾಲಿನ ಮುಖ್ಯಮಂತ್ರಿ ಸಿದ್ದಾರಾಮಯ್ಯವರ ಅವಧಿಯಲ್ಲಿ ಮಂಜೂರಾದ ಮೂಲ ಸೌಕರ್ಯ ಅಬಿವೃದ್ಧಿ ಯೋಜನೆಯಡಿಯಲ್ಲಿ ಲೋಕೋಪಯೋಗಿ ಉಪ ವಿಭಾಗ ಸಿಂದಗಿ ಲಕ್ಕಮ್ಮ ದೇವಿಯ ವಿಶಾಲವಾದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣ ಅಂದಾಜು ಮೊತ್ತ 20 ಲಕ್ಷ ಕಟ್ಟಡ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಬಳಿಕ ಶಾಸಕರು ಮಾತನಾಡಿದರು ದೇವಿಯ ಕಂಪಾಡ ಕಾಮಗಾರಿಗೆ 10 ಲಕ್ಷ ರೂಪಾಯಿಗಳು ಹಣ ಮಂಜೂರ ಮಾಡಿದ್ದು ಕಾಮಗಾರಿ ಪೂರ್ತಿ ಸುಂದರವಾಗಿ ನಿರ್ಮಸಿದ ಸಂತಾಸ ತಂದಿದೆ ಎಂದರು. ಗ್ರಾಮದ ಬೇಡಿಕೆಗಳು ಕುಬತಹಳ್ಳಿಯಿಂದ- ಆಲಮೇಲಕ್ಕೆ ತೆರಳಲು 4 ಕಿಲೋಮೀಟರ ಉದ್ದನ ರಸ್ತೆ ಇದ್ದು 3 ಕಿಲೋ ಮೀಟರ ರಸ್ತೆ ಕಾಮಗಾರಿ ಆಗಿದೆ. ಇನ್ನೂಳಿದ 1 ಕಿಲೋ ಡಾಂಬರಿಕರಣ ರಸ್ತೆ ನಿರ್ಮಾಣ ಮಾಡಲು ಸಂ 5 ಸಂ 6 ಭೂಮಿ ಮಾಲಕರ ತಕರಾರು ಮಾಡಿದ್ದರಿಂದ ಕಾಮಗಾರಿ ಸ್ಥಗಿತಮಾಡಿದ್ದು ಈಗಾಗಾಲೆ ಈ ರಸ್ತೆಗೆ 1 ಕೋಟಿ ಖರ್ಚು ಆಗಿದ್ದು ಶಾಸಕರ ಗಮನಕ್ಕೆ ಗ್ರಾಮಸ್ಥರು ತಂದಿದ್ದಾರೆ. 2 ತಿಂಗಳಲ್ಲಿಸುಂದರವಾದ ರಸ್ತೆ ಮಾಡಿಸಿಕೊಡುತ್ತೇನೆ ಎಂದು ಇಲ್ಲಿನ ಜನರಿಗೆ ಭರವಸೆ ನೀಡಿದರು. ಒಂದು ಶಾಲೆಯ ಕೋಣೆ ನಿರ್ಮಸಿ ಕೋಡುತ್ತೇನೆ. ನಿಮ್ಮ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಿಮ್ಮ ಸಹಕಾರ ಇರಲಿ ಎಂದರು. ರಾಜಕೀಯ ಮುಖಂಡ ರಮೇಶ ಬಂಟನೂರ, ಪ.ಪಂ ಅಧ್ಯಕ್ಷ ಸಾದೀಕ ಸುಂಬಡ, ಮಾಜಿ ಅಧ್ಯಕ್ಷ ಪ್ರಭು ವಾಲಿಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಪಿಎಮ್‌ಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ಯಲ್ಲಪ್ಪ ಬುರುಡ, ಬಸುಗೌಡ ಪಾಟೀಲ, ಸಿದ್ದಪ ಬಳೂಂಡಿಗಿ, ದಯಾನಂದ ನಾಗಠಾಣ, ಬಸವರಾಜ ಹಳಿಮನಿ, ಪಪಂ ಸದಸ್ಯ ಚೆಂದು ಹಳಿಮನಿ, ದ್ಯಾವಪ್ಪಗೌಡ ಸಿದ್ದಾರಾಮ ಬಿರಾದಾರ, ಸಾಯಬಗೌಡ ಬಿರಾದಾರ, ರಾಜು ರೋಡಗಿ ಬಾಷ್ಯ ವಸ್ತದಾ ಸಂಗಪ್ಪ ಹುಲ್ಲುರ, ಶ್ರೀಮಂತ ಹೊಸಮನಿ, ರಾಚಪ್ಪ ದೇಸಾಯಿ, ಮಲಕಪ್ಪ ಬಳೊಂಡಗಿ, ರೇವಣಸಿದ್ದಯ್ಯ ಮಠ, ಚಿದನಂದ ಪೂಜಾರಿ, ಬಿಂದು ಪೂಜಾರಿ, ಗೋಪಾಲ ಸಾಲೂಟಗಿ, ರಾಹುಲ್ ಸಾಲಟೂಗಿ, ಶಿವಪುತ್ರಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ರುದ್ರ ಅಂಬಗೋಳ, ಖಾದೀರ ವಾಲಿಕರ, ಶಕೀಲ ಡಾಂಗೆ, ಬುರನ ಪಟೇಲ, ಸಯಿಪನ ತಡ್ಲಗಿ ಇದ್ದರು.