ಬೆಟಗೇರಿ ಗ್ರಾಮ ಶಿಕ್ಷಣಪ್ರೇಮಿಗಳ ತಾಣ: ರಮೇಶ ಅಳಗುಂಡಿ
Betageri Village Educator's Site: Ramesh Alagundi
ಲೋಕದರ್ಶನ ವರದಿ
ಬೆಟಗೇರಿ 17 : ಶಾಲೆಯ ಸಮಗ್ರ ಪ್ರಗತಿಗೆ ಸ್ಥಳೀಯರು ನೀಡುತ್ತಿರುವ ಸಹಾಯ, ಸಹಕಾರ ಶ್ಲಾಘನೀಯವಾಗಿದೆ. ಬೆಟಗೇರಿ ಗ್ರಾಮ ಶಿಕ್ಷಣಪ್ರೇಮಿಗಳ ತಾಣವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಜೂನ್.15 ರಂದು ಸ್ಥಳೀಯ ಶಿಕ್ಷಣಪ್ರೇಮಿ ಹಾಲಪ್ಪ ಖಿಲಾರಿ ಅವರು ನೀಡಿದ ನೋಟಬುಕ್ಕ್ ಮತ್ತು ಪೆನ್ನು ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಥಳೀಯ ಶಿಕ್ಷಣಪ್ರೇಮಿ ಹಾಲಪ್ಪ ಖಿಲಾರಿ ಅವರು ಕಳೆದ ನಾಲ್ಕೈದು ವರ್ಷಗಳಿಂದ ಶಾಲಾ ಮಕ್ಕಳಿಗೆ ನೀಡುತ್ತಿರುವ ಕೊಡುಗೆ ಮೆಚ್ಚುವಂತಹದ್ದಾಗಿದೆ ಎಂದರು.
ಸ್ಥಳೀಯ ಶಿಕ್ಷಣಪ್ರೇಮಿ ಹಾಲಪ್ಪ ಖಿಲಾರಿ ಅವರು ಒಟ್ಟು ಸುಮಾರು 50 ಸಾವಿರ ರೂಪಾಯಿಗಳ ಮೌಲ್ಯದ ನೋಟಬುಕ್ಕ್ ಮತ್ತು ಪೆನ್ನು ಶಾಲೆಯ ಪ್ರತಿ ವಿದ್ಯಾರ್ಥಿಗೆ ಒಟ್ಟು 850 ಮಕ್ಕಳಿಗೆ ವಿತರಣೆ ಮಾಡಿದರು.
ಮುತ್ತಪ್ಪ ಕುರಬರ, ಮುತ್ತೆಪ್ಪ ಮಾಕಾಳಿ, ಈರಣ್ಣ ಪಟಗುಂದಿ, ಪ್ರಕಾಶ ಕುರಬೇಟ, ಸದಾನಂದ ತೆರಣೆ, ವೈ.ಎಂ.ವಗ್ಗರ, ರಾಕೇಶ ನಡೋಣೆ, ಭಾಗ್ಯಶ್ರೀ ನಾಯಕ, ಗಣಪತಿ ಭಾಗೋಜಿ, ಸಿರಾಜಅಹ್ಮದ ಜಿಡ್ಡಿಮನಿ, ಶುಭಾ ಬಿ., ಶಾಲೆಯ ಸಹ ಶಿಕ್ಷಕರು, ಅತಿಥಿ ಶಿಕ್ಷಕರು, ಪಾಲಕರು, ಶಾಲೆಯ ಎಸ್‌ಡಿಎಂಸಿ ಸದಸ್ಯರು, ಮತ್ತೀತರರು ಇದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 