ಬಳ್ಳಾರಿ: ಕೃಷಿಯ ಕಡೆ ಒಲವು ತೋರಬೇಕು: ವಿಶ್ವೇಶ್ವರ
ಲೋಕದರ್ಶನ ವರದಿ
ಬಳ್ಳಾರಿ 02: ಹಸಿರು ಕ್ರಾಂತಿ ಬಂದ ಮೇಲೆ ದೇಶದಲ್ಲಿನ ಕೃಷಿಯು ಕ್ಷೀಣಿಸುತ್ತಾ ಬಂದಿದೆ ನಮ್ಮ ರೈತರು ವಿದೇಶಗಳ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ, ಈಗಿನ ಮಕ್ಕಳು ವಿಧ್ಯಬ್ಯಾಸ ಮುಗಿಸಿದ ಮೇಲೆ ಯಾರು ಕೃಷಿ ಕಡೆ ಮುಖಮಾಡುತ್ತಿಲ್ಲ, ಬುದ್ದಿ ಜೀವಿಗಳು ಕೃಷಿಯ ಕಡೆ ಒಲವು ತೋರಿಸಬೇಕು ಎಂದು ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಸಾವಯವ ರೈತ ವಿಶ್ವೇಶ್ವರ ಸಜ್ಜನ್ ಪ್ರಸ್ತುತ ಕೃಷಿಯ ತವಕ ತಲ್ಲಣಗಳ ವಿಷಯದ ಕುರಿತು ತಿಳಿಸಿದರು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ 21ನೇ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎರಡನೇ ದಿನವಾದ ಭಾನುವಾರದಂದು ಕೃಷಿ ಮತ್ತು ಕೈಗಾರಿಕೆ ಗೋಷ್ಠಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಗೋಷ್ಠಿಯಲ್ಲಿ ರೈತ ಧುರೀಣರಾದ ಜೆ.ಎಂ.ವೀರಸಂಗಯ್ಯ ಅವರು ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು, ಹಾಗೂ ಬಳ್ಳಾರಿ ವೀರಶೈವ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ರಾಜಶ್ರೀ ಪಾಟೀಲ್ ಅವರು ಆಶಯ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ದರೂರು ಪುರುಗಫೀತ್ತಮಗೌಡ, ಕೆ.ಚೆನ್ನಪ್ಪ, ಬಿ.ಮಹಾರುದ್ರ ಗೌಡ, ಕೆ.ಎಂ.ಹೇಮಯ್ಯ ಸ್ವಾಮಿ, ವಿ.ಎಸ್.ಶಿವಶಂಕರ್, ಜೆ.ಕಾರ್ತಿಕ್, ಎಂ.ಶರಣಬಸವನಗೌಡ, ಬಿ.ಎಂ.ವೀರಪ್ಪಯ್ಯ, ಎನ್.ಎಮ್.ಶಿವಪ್ರಕಾಶ್, ಕ.ಸಾ.ಪ ಜಿಲ್ಲಾಧ್ಯಕ್ಷರಾದ ಸಿದ್ದರಾಮ ಕಲ್ಮಠ, ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 