ಬಳ್ಳಾರಿ 03: ತುಂಗಭದ್ರ ರೈತ ಸಂಘದ ಅಧ್ಯಕ್ಷರಾದ ದರೂರು ಪುರೋಷತ್ತಮ ಗೌಡ ಮತ್ತು ಇತರ ಪದಾಧಿಕಾರಿಗಳು ಸಣ್ಣ ನೀರಾವರಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಮಾಧವಸ್ವಾಮಿ ಶಾಸಕ ಸೋಮಶೇಖರ್ ರೆಡ್ಡಿ ಅವರ ನಿವಾಸಕ್ಕೆ ಆಗಮಿಸಿದ ಸಮಯದಲ್ಲಿ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರದಲ್ಲಿ ತಿಳಿಸಿರುವಂತೆ ಜಿಲ್ಲೆಯು 20,50,000 ಎಕರೆಗಳಷ್ಟು ವಿಸ್ತೀರ್ಣಯಿದ್ದು 2.5 ಲಕ್ಷದಷ್ಟು ಅರಣ್ಯ, 4 ಲಕ್ಷ ಎಕರೆ ಬಂಜರು, 3 ಲಕ್ಷ ಎಕರೆ ಬೀಳುಭೂಮಿ, 5 ಲಕ್ಷ ಎಕರೆ ಮಳೆಯಾಶ್ರಿತ ಜಮೀನು ಹಾಗೂ 4.5 ಲಕ್ಷ ಎಕರೆ ನೀರಾವರಿ ಭೂಮಿ ಹಾಗೂ 1.5 ಲಕ್ಷ ಎಕರೆ ನಗರ ಮತ್ತು ಗ್ರಾಮ ಜನವಸತಿ ಹೊಂದಿರುತ್ತದೆ. ಜಿಲ್ಲೆಯಲ್ಲಿ 250 ಕೆರೆಗಳು, 8000 ಬಾವಿಗಳು, 18 ಸಾವಿರ ಕೊಳವೆಬಾವಿಗಳು, 4 ಸಾವಿರ ಏತ ನೀರಾವರಿ ಹೊಂದಿರುತ್ತದೆ.
ಕರ್ನಾಟಕ, ಆಂಧ್ರಾ ಮತ್ತು ತೆಲಂಗಾಣ ರಾಜ್ಯಗಳಿಗೆ ನೀರು ಪೂರೈಕೆಗೆ ತುಂಗಭದ್ರಾ ಜಲಶಾಯವು ಹೊಂದಿರುತ್ತದೆ. ಆದರೆ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಕೆರೆಗಳ, ಬಾವಿಗಳ ಪುನಶ್ಚೇತನಗೊಳಿಸದೆ ಮತ್ತು ತುಂಗಭದ್ರಾ ಜಲಾಶಯದ ಹೂಳು ಎತ್ತದೆ ಜಿಲ್ಲೆಯಲ್ಲಿ ಅಂತರ್ಜಲ ಕಡಿಮೆಯಾಗಿ ಜನ ಸಾಮಾನ್ಯರಿಗೆ ಮತ್ತು ಕುಡಿಯುವ ಮತ್ತು ರೈತರ ಜಮೀನುಗಳಿಗೆ ಬಳಸುವ ನೀರಿನ ಕೊರತೆಯಾಗುತ್ತಿದೆ. ತುಂಗಭದ್ರಾ ಜಲಾಶಯದ ಹೂಳು ಎತ್ತಿಸುವ ಎಲ್ಲಾ ಕೆರೆಗಳ ಹಾಗೂ ಬಾವಿಗಳ ಮತ್ತು ಕೊಳವೆಬಾವಿಗಳ ಪುನಶ್ಚೇತನಗಳಿಸಲು ಮುಂಗಡಪತ್ರದಲ್ಲಿ ಹಣವನ್ನು ಮೀಸಲಿಡಲು ಕ್ರಮಕೈಗೊಳ್ಳಬೇಕೆಂದು ತುಂಗಭದ್ರ ರೈತ ಸಂಘದ ವತಿಯಿಂದ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ದರೂರು ಪುರುಷೋತ್ತಮ ಗೌಡ, ಗಂಗಾವತಿ ವೀರೇಶ್, ಪ್ರಧಾನಕಾರ್ಯದರ್ಶಿ, ಜಿಲ್ಲಾ ಪದಾಧಿಕಾರಿಗಳಾದ ಶ್ರೀಧರಗಡ್ಡೆ ವೀರನಗೌಡ, ಶಾನವಾಸಪುರ, ಸಂಗನಕಲ್ಲು ದೊಡ್ಡದಾಸಪ್ಪ, ಮಲ್ಲಿಕಾರ್ಜುನ ಶಂಕರಬಂಡೆ ಮತ್ತಿತರರು ಭಾಗವಹಿಸಿದ್ದರು.