ಬಳ್ಳಾರಿ: ಮನ್-ಧನ್ ಯೋಜನೆ ಜಾಗೃತಿ ಅಭಿಯಾನ
ಲೋಕದರ್ಶನ ವರದಿ
ಬಳ್ಳಾರಿ 20: ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರಿಗೆ 60 ವರ್ಷಗಳ ನಂತರ ಪಿಂಚಣಿ ಸೌಲಭ್ಯದಿಂದ ಜೀವನ ರೂಪಿಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮನ್-ಧನ್ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಚಂದ್ರಶೇಖರ್ ಎನ್.ಐಲಿ ಹೇಳಿದರು.
ಕಾಮರ್ಿಕ ಇಲಾಖೆಯ ವತಿಯಿಂದ ಬಳ್ಳಾರಿ ಸಮೀಪದ ಅಂದ್ರಾಳ್ ಗ್ರಾಮ ಸರಕಾರಿ ಶಾಲಾ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಧಾನ ಮಂತ್ರಿ ಶ್ರಮಯೋಗಿ ಮನ್-ಧನ್ ಯೋಜನೆ ಮತ್ತು ಅಸಂಘಟಿತ ಕಾಮರ್ಿಕರು ಅರಕುಶಲ ಕಾಮರ್ಿಕರನ್ನು ನೊಂದಾಯಿಸುವ ಅಭಿಯಾನಕ್ಕೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಯೋಜನಗೆ ಒಳಪಡಬೇಕಾದರೇ ಅಸಂಘಟಿತ ಕಾಮರ್ಿಕರಾಗಿದ್ದು 18 ರಿಂದ 40ವರ್ಷ ವಯೋಮಿತಿ ಇರಬೇಕು, ಮಾಸಿಕ ಅದಾಯ 15ಸಾವಿರ ರೂ.ಗಳು ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಈ ಯೋಜನೆ ಅಡಿಯಲ್ಲಿ ಅಸಂಘಟಿತ ಕಾಮರ್ಿಕರಾದ ಗೃಹ, ಬೀದಿ ಬದಿ ವ್ಯಾಪಾರಿಗಳು, ಬೀಡಿ, ಚಿಂದಿ ಆಯುವವರು, ನರೇಗಾ ಅಕುಶಲ ಹಾಗೂ ಮುಂತಾದ ಅಸಂಘಟಿತ ಕಾಮರ್ಿಕರು ಈ ಯೋಜನೆಗೆ ಒಳಪಟ್ಟಿರುತ್ತಾರೆ ಎಂದರು.
ಪ್ರಧಾನಮಂತ್ರಿ ಶ್ರಮಯೋಗಿ ಮನ್-ಧನ್ ಯೋಜನೆಯ ಮಾಹಿತಿಹೊತ್ತ ಹಾಗೂ ಧ್ವನಿವರ್ಧಕಗಳೊಂದಿಗೆ ವಾಹನವು ಇಡೀ ಗ್ರಾಮದಾದ್ಯಂತ ಸಂಚರಿಸಿತು. ಇದೇ ಸಂದರ್ಭದಲ್ಲಿ ಈ ಯೋಜನೆಗೆ ಸಂಬಂಧಿಸಿದ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆಯ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕ ಸಿ.ಎನ್.ರಾಜೇಶ್, ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕ ಶಿವರಾಜ್ ಆರ್.ಎನ್, ಕಾರ್ಮಿಕ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 