ಲೋಕದರ್ಶನ ವರದಿ
ಬೆಳಗಾವಿ 26: ನಾನು ತುಂಬ ಕಷ್ಟ ಜೀವನದಿಂದ ಬಂದವನು. ಚರ್ಮ ವೃತ್ತಿಯನ್ನು ಮಾಡಿ ಸಂಪಾದಿಸಿದ ಹಣದಿಂದ ನಾನು ಎಂ. ಎ. ಪದವಿಯನ್ನು ಪಡೆದೆ. ಮುಂದೆ ಸಕರ್ಾರಿ ಸೇವೆಯಲ್ಲಿ ದೊಡ್ಡ ಹುದ್ದೆಯಲ್ಲಿದರೂ ನನಗೆ ಜೀವನವನ್ನು ಕಟ್ಟಿಕೊಟ್ಟ ಚರ್ಮ ಉದ್ಯೋಗವನ್ನು ಮರೆಯಲಿಲ್ಲ. ಜೊತೆ ಜೊತೆ ಕೊಲ್ಲಾಪುರಿ ಚಪ್ಪಲಿ ಹಾಗೂ ವಿಶೇಷ ವಿನ್ಯಾಸದ ಬಂಟು ಬೂಟ್ ವಿಶ್ವ ಪ್ರಸದ್ದಿಯನ್ನು ಪಡೆದಿದೆ. ನನ್ನ ಕೆಲಸವನ್ನು ಗುರುತಿಸಿದ ಬೇರೆ ಬೇರೆ ರಾಷ್ಟ್ರ, ಅಂತರಾಷ್ಟ್ರೀಯ ಸಂಸ್ಥೆಗಳು ಗೌರವಿಸಿವೆ ತವರು ಜಿಲ್ಲೆಯ ಸಂಸ್ಥೆಯಾದ ಲೆದರ್ ಆಟರ್ಿಜನ್ಸ್ ಅಸೋಸಿಯೇಶನ್ಸ ಆಪ್ ಕನರ್ಾಟಕ ದವರು ನೀಡುತ್ತಿರುವ "ಚರ್ಮಶ್ರೀ' ಪ್ರಶಸ್ತಿ ನನಗೆ ತುಂಬ ಸಂತೋಷವನ್ನುಂಟು ಮಾಡಿದೆ ಎಂದು ಮಾರುತಿ ಭಂಡಾರೆ ಇಂದಿಲ್ಲಿ ಹೇಳಿದರು.
ಲೆದರ್ ಆಟರ್ಿಜನ್ಸ ಅಸೋಸಿಯೇಶನ್ಸ ಆಫ್ ಕರ್ನಾಟಕ ದವರು ಶಹಪೂರದ ಸರಸ್ವತಿ ರಸ್ತೆಯಲ್ಲಿರುವ ಲೋಕಪ್ರಿಯ ಜನಸೇವಾ ಸಂಸ್ಥೆಯ ಆವರಣದಲ್ಲಿ 'ಚರ್ಮಶ್ರೀ' ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ 'ಚರ್ಮಶ್ರೀ' ಪ್ರಶಸ್ತಿಗೆ ಭಾಜನರಾದ ಮಾರುತಿ ಭಂಡಾರೆಯವರಿಗೆ ಹಾಗೂ ಸಾಧನೆಗೆ ಬೆನ್ನಲಾಗಿ ನಿಂತಿರುವ ಸಕರ್ಾರದ ಉಪಕಾರ್ಯದಶರ್ಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರ ಧರ್ಮಪತ್ನಿ ಸ್ವರ್ಣಲತಾ ಭಂಡಾರೆ ದಂಪತಿಗಳನ್ನು ವೇದಕೆ ಮೇಲೆ ನೆನಪಿನ ಕಾಣಿಕೆ ನೀಡಿ ಶಾಲು, ಫಲಪುಷ್ಪವನು ನೀಡಿ ಗೌರವಿಸಲಾಯಿತು. ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಭಂಡಾರೆಯವರು ಮೇಲಿನಂತೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಮುಂದೆ ಮಾತನಾಡುತ್ತ ಅವರು ವಿಶ್ವಖ್ಯಾತಿ ಪಡೆದರುವ ನೆಪೋಲಿಯನ್ ಬೋನಾಪಾರ್ಟ, ಅಡಾಲ್ಫ್ ಹಿಟ್ಲರ್, ಲೂಯಿಸ ಪಾಶ್ಚರ್, ಜೊಸೇಫ್ ಸ್ಟಾಲಿನ್ ಅಲ್ಲದೇ ಅಮೇರಿಕದ 16 ನೇ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ ಮುಂತಾದವರು ನಮ್ಮ ಸಮಾಜದಿಂದ ಬಂದವರೆಂಬುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಲೆದರ್ ಆಟರ್ಿಜನ್ಸ ಅಸೋಸಿಯೇಶನ್ಸ ಆಫ್ ಕರ್ನಾಟಕದ ಅಧ್ಯಕ್ಷ ಸಂತೋಷ ಹೊಂಗಲ ಮಾತನಾಡಿ ಚಮರ್ೋದ್ಯಗವನ್ನು ಪ್ರೋತ್ಸಾಹಿಸುವ ಹಾಗೂ ಚರ್ಮಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿವರ್ಷ ಚಮರ್ೋದ್ಯೋಗದಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಗೆ 'ಚರ್ಮಶ್ರೀ' ಪ್ರಶಸ್ತಿಯನ್ನು ನೀಡಿ ಅವರಿಗೆ ನೆನಪಿನ ಕಾಣಿಕೆ, ಶಾಲು ಹೊದಿಸಿ ಸನ್ಮಾಸುವ ಕಾರ್ಯವನ್ನು ನಮ್ಮ ಸಂಸ್ಥೆ ಹನ್ನೊಂದು ವರ್ಷಗಳಿಂದ ಮಾಡುತ್ತ ಬಂದಿದೆ. ಈ ವರ್ಷ ಮಾರುತಿ ಭಂಡರೆಯವರ ಚಮರ್ೊದ್ಯಗದಲ್ಲಿ ಸಲ್ಲಿಸಿರುವ ವಿಶೇಷ ಸೇವೆಯನ್ನು ಗಮನಿಸಿ 'ಚರ್ಮಶ್ರೀ' ಪ್ರಶಸ್ತಿ ನೀಡಿ ಗೌರಸಲು ತುಂಬ ಅಭಿಮಾನವೆನಿಸುತ್ತಿದೆ ಎಂದರು.
ಗುರುವರ್ಯ ಪರಶುರಾಮ ನಂದಿಹಳ್ಳಿ, ಅಪ್ಪಾಸಾಬ ಮನಗೂಳಿ, ರವಿ ಶಿಂದೆ, ಶಿವರಾಜ ಸೌದಾಗರ, ವಾಯ್. ಬಿ. ಚೌಗಲೆ, ಘನಶ್ಯಾಮ ಭಾಂಡಗೆ, ಸುನಿತಾ ಹೊಂಗಲ, ಸುಖದೇವ ಸೌದಾಗರ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಭಾರತಿ ಸಾಬಣ್ಣವರ ಸ್ವಾಗತಿಸಿ ಪರಚಯಿಸಿದರು. ಕುಮಾರ ವಂದಿಸಿದರು. ಗಜಾನನ ಸಾಬಣ್ಣವರ ನಿರೂಪಿಸಿದರು.