ಶಿಗ್ಗಾವಿ 10 : ತಾಲೂಕಿನಲ್ಲಿ ಮಾರಾಟಗಾರರಿಗೆ ತರಬೇತಿ ಹಮ್ಮಿಕೊಳ್ಳಲಾಗಿದ್ದು ರೈತರು ಜಮೀನುಗಳನ್ನು ಬಿತ್ತನಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಸಮಯಕ್ಕೆ ಸರಿಯಾಗಿ ಹಾಗೂ ಸದರಿ ತರಬೇತಿಗೆ ತಾಲೂಕಿನ ಎಲ್ಲಾ ಕೃಷಿ ಪರಿಕರ ಮಾರಾಟಗಾರರು ಭಾಗವಹಿಸಿ ರಸಗೊಬ್ಬರ ದಾಸ್ತಾನು ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡುವದರ ಜೊತೆಗೆ ಕೃಷಿ ಪರಿಕರ ಮಾರಾಟದಲ್ಲಿ ಯಾವುದೇ ಲೋಪ ದೋಷವಾಗದಂತೆ ಎಚ್ಚರ ವಹಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ(ಜಾರಿದಳ) ವಿ ಕೆ ಶಿವಲಿಂಗಪ್ಪ ಹೇಳಿದರು.
ತಾಲೂಕಿನ ಕೃಷಿ ಪರಿಕರ ಹಾಗೂ ರಸಾಯನಿಕಗೋಬ್ಬರ ಮಾರಾಟಗಾರರು ವಿವಿಧರೈತ ಮುಖಂಡರುಗಳ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗುಣ ಮಟ್ಟದ ಕೃಷಿ ಪರಿಕರಗಳನ್ನು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಲು ಮಾರಾಟಗಾರರು ಎಲ್ಲಾ ಪೂರ್ವ ತಯಾರಿ ಮಾಡಿಕೊಳ್ಳಬೇಕು ಸರ್ಕಾರ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡುವದರ ಜೋತೆಗೆ ರೈತರು ಕೂಡಾ ಖರೀದಿಸಿದ ಬಿತ್ತನೆ ಬೀಜಗಳ ರಶೀದಿಯನ್ನು ಕಾಯ್ದಿಟ್ಟು ಕೊಳ್ಳಬೇಕು ಎಲ್ಲಾ ಮಾರಟಗಾರರು ತಮ್ಮ ಅಂಗಡಿಗಳಲ್ಲಿ ಕೃಷಿ ಪರಿಕರಗಳ ದರಪಟ್ಟಿ ಪಲಕವನ್ನು ಅಳವಡಿಸಬೇಕು,
ರೈತರು ಅಧೀಕೃತವಾಗಿ ಕೃಷಿ ಇಲಾಖೆಯಿಂದ ಪರವಾನಿಗೆ ಹೊಂದಿದ ಅಂಗಡಿಗಳಲ್ಲಿ ತಮ್ಮ ಆಧಾರಕಾರ್ಡ ಸಂಖ್ಯೆ ನಮೂದಿಸಿ ಪಿಓಎಸ್ ಉಪಕರಣದ ಮೂಲಕ ರಸಗೊಬ್ಬರ ಬಿತ್ತನೆ ಬೀಜ ಖರೀದಿಸಬೇಕು. ರೈತರು ಕೇವಲ ಒಂದೇ ಬಗೆಯರಸಗೊಬ್ಬರಕ್ಕೆ ಅವಲಂಬಿತರಾಗಬಾರದು, ಗಂದಕ ಹಾಗೂ ಪೋಟ್ಯಾಷ್ ಅಂಶಗಳಿರುವ 20:20:0:13, 10:26:26, 19:19:19, ಲಘು ಪೋಷಕಾಂಶಗಳು ಮತ್ತು ವಿವಿಧ ಕಾಂಪ್ಲೇಕ್ಸ್ ರಸಗೊಬ್ಬರಗಳನ್ನು ಬಳಸುವದರಿಂದ ಬೆಳೆಗಳಿಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಸಾದ್ಯ ಎಂದು ಶಿಗ್ಗಾವಿ ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶಿ ಗೆಜ್ಜಿ ತಿಳಿಸಿದರು.
ಸದರಿ ತರಬೇತಿಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಛೇರಿ ಹಾವೇರಿ, ಡಾ.ಶಿದ್ದಗಂಗಮ್ಮ ಬೇಸಾಯ ಶಾಸ್ತ್ರತಜ್ಞರು ಕೆವಿಕೆ ಹನುಮನಮಟ್ಟಿ, ತಾಲೂಕಿನ ವಿವಿಧ ಕೃಷಿ ಪರಿಕರ ಮಾರಾಟಗಾರರು ಮತ್ತು ಕೃಷಿ ಇಲಾಖೆ ಶಿಗ್ಗಾವಿ ಸಿಬ್ಬಂದಿಗಳು ಹಾಗೂ ರೈತ ಮುಖಂಡರು ಕಾರ್ಯಕ್ರಮದಲ್ಲಿದ್ದರು.