ಅದ್ಧೂರಿಯಾಗಿ ನೆರವೇರಿದ ಬಸವೇಶ್ವರ ರಥೋತ್ಸವ

ಅದ್ಧೂರಿಯಾಗಿ ನೆರವೇರಿದ ಬಸವೇಶ್ವರ ರಥೋತ್ಸವ  Basaveshwara Chariot Festival Celebrated Grandly

ಲೋಕದರ್ಶನ ವರದಿ 

ಯರಗಟ್ಟಿ 09: ಜಾತ್ರೆ ಮತ್ತು ಧಾರ್ಮಿಕ ಉತ್ಸವಗಳು ಸರ್ವ ಭಕ್ತರನ್ನು ಒಂದೆಡೆ ಸೇರುವಂತೆ ಮಾಡಿ, ದೇವರ ಧ್ಯಾನದಲ್ಲಿ ತಲ್ಲೀನಗೊಳಿಸುತ್ತವೆ ಎಂದು ನೇಸರಗಿ ಮಲ್ಲಾಪೂರ ಗಾಳೇಶ್ವರಮಠದ ಚಿದಾನಂದ ಸ್ವಾಮೀಜಿ ಹೇಳಿದರು. ಸಮೀಪದ ಸುಕ್ಷೇತ್ರ ಜಾಲಿಕಟ್ಟಿ ಜೀವಾಪೂರ ಗ್ರಾಮದಲ್ಲಿ ಶ್ರಾವಣದ ನಿಮಿತ್ಯ ಹಮ್ಮಿಕೊಂಡಿದ್ದ ಬಸವೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಗುರುವಿನ ಮಾರ್ಗ ಅನುಸರಿಸಿ ಸಾಮರಸ್ಯದ ಬದುಕು ಸಾಗಿಸಬೇಕು ಎಂದರು. ಬೆಳಿಗ್ಗೆ ಶ್ರೀಬಸವೇಶ್ವರ ದೇವರಿಗೆ ರುದ್ರಾಭಿಷೇಕ, ಪುಷ್ಪಾರ್ಚನೆ, ಬಿಲ್ವಾರ್ಚನೆ, ಪಂಚಾಮೃತ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ದೇವರಿಗೆ ನೈವೇದ್ಯ, ಕಾಣಿಕೆ ಸಮರ​‍್ಿಸಿ ದರ್ಶನ ಪಡೆದರು. 

  ಸಾಯಂಕಾಲ ಬಸವೇಶ್ವರ ರಥೋತ್ಸವವು ಅಪಾರ ಭಕ್ತರ ಮಧ್ಯೆ ಹರಹರ ಮಹಾದೇವ ಘೋಷಣೆಯೊಂದಿಗೆ ಜರುಗಿತು. ಅನೇಕ ಭಕ್ತರು ಹೂ ಮಾಲೆಗಳಿಂದ ಅಲಂಕರಿಸಿದ ರಥೋತ್ಸವಕ್ಕೆ ತೆಂಗಿನಕಾಯಿ, ಉತ್ತತ್ತಿ ಹಾಗೂ ಬಾಳೆಹಣ್ಣು ಅರ​‍್ಿಸಿ ತಮ್ಮ ಭಕ್ತಿ ಮೆರೆದರು. ಮುಖಂಡ ಸಂಗಯ್ಯ ಹಿರೇಮಠ, ಬಸಯ್ಯ ಗೌಡರ, ಮಲನಾಯ್ಕ ನಾಯ್ಕರ, ಮಲ್ಲಿಕಾರ್ಜುನ ಯಡಳ್ಳಿ, ಮಹಾದೇವಯ್ಯ ಪೂಜೇರ, ಮಲ್ಲಪ್ಪ ಬಡಿಗೇರ, ಬಾಲನಾಯ್ಕ ಕಡಬಿ, ಬಸಪ್ಪ ಬಂಡ್ರೊಳ್ಳಿ, ಶಿವಾನಂದ ಅಟಿಗಲ್ಲಮಠ, ಈರಣ್ಣ ಕಂಬಾರ, ವೈ.ಎಫ್‌.ನಾಯ್ಕರ, ನೀಲಕಂಠ ಕಂಬಾರ, ಮಹಾಂತೇಶ ಗೌಡರ, ಸಿದ್ದಯ್ಯ ಪೂಜೇರ, ಉಳವಯ್ಯ ಗೌಡರ, ಮಲ್ಲಿಕಾರ್ಜುನ ಅಂಗಡಿ, ವೇಂಕನ್ನ ಯರಡ್ಡಿ, ರಮೇಶ ನರಿ, ಮುತ್ತನಗೌಡ ನಾಯ್ಕರ, ಶಿವಪ್ಪ ಕುರಿ, ಬಸಪ್ಪ ಅಂಗಡಿ, ಬಸವರಾಜ ಕಡಬಿ ಸೇರಿದಂತೆ ಇತರರಿದ್ದರು.