ಬಸವಶಾಂತಲಿಂಗ ಸ್ವಾಮಿ ಹುಟ್ಟು ಹಬ್ಬ ಆಚರಣೆ
Basavashantalinga Swamy's birthday celebration
ಹಾವೇರಿ 05: ಗೌರವ-ಸನ್ಮಾನಗಳು ವ್ಯಕ್ತಿಯ ಸ್ಥಾನಮಾನಗಳ ಜವಾಬ್ದಾರಿಯನ್ನು ಹೆಚ್ಚಿಸುತ್ತೇವೆ ಎಂದು ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮಿಗಳು ಹೇಳಿದರು. ನಗರದ ಶ್ರೀಮಠದಲ್ಲಿ ತಮ್ಮ ಹುಟ್ಟು ಹಬ್ಬದ ನಿಮಿತ್ತವಾಗಿ ಮಠದ ಸದ್ಭಕ್ತರಿಂದ ಗೌರವ ಸನ್ಮಾನ ಸ್ವೀಕರಿಸಿ ಅವರು ಹಿತವಚನದ ಮಾತನಾಡಿದರು.
ಹುಟ್ಟು ಹಬ್ಬದ ಆಚರಣೆ ಸಾಂಕೇತಿಕವಾಗಿರಲಿದ್ದು, ನಮ್ಮ ಬದುಕಿನಲ್ಲಿ ಒಂದು ವರ್ಷ ಕಳೆಯಿತು ಎಂಬ ಆತ್ಮವಲೋಕನ ಮಾಡಿಕೊಳ್ಳುವ ದಿನವಾಗಬೇಕಿದೆ. ಬದುಕಿಗೆ ಮುನ್ನುಡಿಯಾಗಬೇಕು. ಹುಟ್ಟು ಹಬ್ಬ ಪ್ರತಿಯೊಬ್ಬರಿಗೂ ಸ್ಮರಣೀಯ ದಿನವಾಗಿದೆ. ಉತ್ತಮ ಸಮಾಜಮುಖಿ ಕೆಲಸಗಳ ಹಾಗೂ ಮಹಾನ್ ನಾಯಕರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಸಮಾಜಮುಖಿ ವ್ಯಕ್ತಿಯಾಗಿ ಬೆಳೆಯುವ ಕೆಲಸ ಮಾಡಿದಾಗ ಹುಟ್ಟು ಹಬ್ಬ ಆಚರಣೆಗೆ ಅರ್ಥ ಬರಲಿದೆ. ಮಠದ ಸದ್ಭಕ್ತರು ನನ್ನ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದೀರಿ ಎಲ್ಲರಿಗೂ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಪರಶುರಾಮ ಹರ್ಲಾಪುರ, ಅಮ್ಮಾ ಸಂಸ್ಥೆ(ರಿ)ಯ ನಿಂಗಪ್ಪ ಆರೇರ, ಶ್ರೀ ಮಠದ ಸದ್ಭಕ್ತರು ಹಾಗೂ ಶಿಷ್ಯ ಬಳಗದವರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 