ಕಿತ್ತೂರು ಸೈನಿಕ ಶಾಲೆಗೆ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಭೇಟಿ

ಲೋಕದರ್ಶನ ವರದಿ 


ಕಿತ್ತೂರು 09: ವಿಧಾನಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿಯವರು ದಿ. 8 ಸೋಮವಾರದದಂದು ತಮ್ಮ ಕಛೇರಿಯ ಸಿಬ್ಬಂದಿವರರೊಂದಿಗೆ ಅನೀರೀಕ್ಷಿತವಾಗಿ ಕಿತ್ತೂರು ಸೈನಿಕ ಶಾಲೆಗೆ ಭೇಟಿಯಿತ್ತರು.  

ಶಾಲಾ ಪ್ರಾಚಾರ್ಯ ಕರ್ನಲ್ ಆರ್‌. ಎಸ್‌. ಖತ್ರಿ (ವಿಶ್ರಾಂತ), ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿವರ್ಗ ಅವರನ್ನು ಆದರದಿಂದ ಬರಮಾಡಿಕೊಂಡರು. ಶಾಲಾ ವಿದ್ಯಾರ್ಥಿನಿಯರು ಕೂಡಾ ಹೊರಟ್ಟಿಯವರೊಂದಿಗೆ ಚರ್ಚಿಸಿದರು. ಮಕ್ಕಳ ವಿವಿಧ ಚಟುವಟಿಕೆಗಳನ್ನು ಹಾಗೂ ಶಾಲಾ ಆವರಣದಲ್ಲಿರುವ ಹಲವಾರು ವಿಭಾಗಗಳನ್ನು ಪರಿಚಯಿಸಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಹಾಗೂ ಕೋವಿಡ್‌ನ ಸಂಕಷ್ಟ ಕಾಲದಲ್ಲಿಯೂ ಸಹ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿರುವ ಸಂಸ್ಥೆಯ ಚೇರಮನ್ನ ಡಾ. ಮಹೇಂದ್ರ ಎಸ್‌. ಕಂಠಿಯವರ ಕಾರ್ಯವನ್ನು ಶ್ಲಾಘಿಸಿದರು.  

ಸಂಸ್ಥೆಯು ತುಂಬಾ ಹಣಕಾಸಿನ ತೊಂದರೆ ಎದುರಿಸುತ್ತಿರುವುದನ್ನು ಮನಗಂಡು ತಾವು ಶಿಕ್ಷಣ ಸಚಿವರಿಗೆ ಹಾಗೂ ಮುಖ್ಯ ಮಂತ್ರಿಗಳೊಂದಿಗೆ ಮಾತನಾಡುವದಾಗಿ ಭರವಸೆಯಿತ್ತರು. ಮುಂಬರುವ ಚಳಿಗಾಲ ಅಧಿವೇಶನಕ್ಕೆ ಬೆಳಗಾವಿಗೆ ಬಂದಾಗ ಮತ್ತೆ ಶಾಲೆಗೆ ಭೇಟಿ ನೀಡುವದಾಗಿ ತಿಳಿಸಿದರು.