ಬಸವಣ್ಣನವರು ಒಂದು ಶಕ್ತಿ: ಡಾ. ಎಸ್.ಪಿ. ತಳವಾರ
Basavanna is a force: Dr. S.P. Talawara
ಲೋಕದರ್ಶನ ವರದಿ
ಕಾಗವಾಡ 23: ಒಂದು ಶಕ್ತಿಯಾಗಿದ್ದ ಬಸವಣ್ಣನವರು ಸಮಾನತೆಯ ಸಮಾಜ ಕಟ್ಟಲು ಮುಂದಾದವರು. ಜಿಡ್ಡುಗಟ್ಟಿದ ಸಮಾಜಕ್ಕೆ ಚೈತನ್ಯ ತಂದುಕೊಟ್ಟ ಶಕ್ತಿಯಾಗಿದ್ದರು ಎಂದು ಪ್ರಾಚಾರ್ಯ ಡಾ. ಎಸ್.ಪಿ. ತಳವಾರ ತಿಳಿಸಿದ್ದಾರೆ.
ಅವರು, ಸೋಮವಾರ ದಿ. 20 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಬಸವಣ್ಣನವರು ಪ್ರತಿಪಾದಿಸಿದ ವಿಚಾರಗಳು ಇಂದಿನ ಭಾರತೀಯ ಸಂವಿಧಾನದ ಮೂಲಭೂತ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯದ ಅಡಿಪಾಯವಾಗಿವೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೊ. ಜೆ.ಕೆ. ಪಾಟೀಲ ಮಾತನಾಡಿ, 12ನೇ ಶತಮಾನದ ಮಹಾನ ಸಮಾಜ ಸುಧಾರಕ, ತತ್ವಜ್ಞಾನಿ ಮತ್ತು ವಚನಕಾರ ಬಸವಣ್ಣನವರು ಸಾಮಾಜಿಕ ಸಮಾನತೆ, ಲಿಂಗ ತಾರತಮ್ಯದ ನಿರ್ಮೂಲನೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಕ್ರಾಂತಿಕಾರಿ ನಾಯಕರು. ಅವರು ಇಷ್ಟಲಿಂಗ ಪೂಜೆಯನ್ನು ಪರಿಚಯಿಸಿ, ಅನುಭವಮಂಟಪದ ಮೂಲಕ ಜ್ಞಾನಪ್ರಸಾರ ಮಾಡಿದರು. ಕಾಯಕವೇ ಕೈಲಾಸ ಎಂಬ ತತ್ವದಡಿ ಕಾಯಕ ಮಹತ್ವವನ್ನು ಸಾರಿದರು ಎಂದು ತಿಳಿಸಿದರು.
ಈ ವೇಳೆ ಪ್ರೊ. ಆರ್.ಎಸ್. ನಾಗರಡ್ಡಿ, ಪ್ರೊ. ಎಸ್.ಎಸ್. ಫಡತರೆ, ಪ್ರೊ. ಬಿ.ಡಿ. ದಾಮನ್ನವರ, ಪ್ರೊ ಎನ್.ಎಂ. ಬಾಗೇವಾಡಿ, ಪ್ರೊ .ಎ.ಎ. ಪಾಟೀಲ ಸೇರಿದಂತೆ ಸಮಸ್ತ ಬೋಧಕ- ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 