ಬಸವ ಪಥದಲ್ಲಿ ಸಾಗಬೇಕು ಲಿಂಗಾಯತರೆಲ್ಲ ಒಂದೇ ಎಂಬ ಭಾವನೆ ಮೂಡಿಸಬೇಕು ಅರವಿಂದ ಜತ್ತಿ

ಸಿರುಗುಪ್ಪ 16: ನಾವೆಲ್ಲರೂ ಬಸವ ಪಥದಲ್ಲಿ ಸಾಗಬೇಕು ಲಿಂಗಾಯತರೆಲ್ಲ ಒಂದೇ  ಎಂಬ ಭಾವನೆಯನ್ನು ಮೂಡಿಸ ಬೇಕು ಎಂದು ಭಾರತದ ಮಾಜಿ ರಾಷ್ಟ್ರಪತಿ ಬಿ.ಡಿ ಜತ್ತಿ ಯವರ ಸುಪುತ್ರ ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿ ಅವರು ಹೇಳಿದರು ನಗರದ ಎಸ್ ವಿ ಎಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ರಾಜ್ಯಮಟ್ಟದ 17ನೇ ಶರಣ ತತ್ವ ಕಮ್ಮಟದಲ್ಲಿ ಜರುಗಿದ ಭೂವಿಗೆ ಭಕ್ತಿ ಪಥವ ತೋರ ಬಂದಾತನಯ್ಯ ಬಸವಣ್ಣ ಎಂಬ ವಿಷಯದ ಬಗ್ಗೆ ಅವರು ಸರ್ವರನ್ನು ಉದ್ದೇಶಿಸಿ ಮಾತನಾಡುತ್ತಾ ಒಳಪಂಗಡಗಳ ಹೆಸರಿನಲ್ಲಿ ಪ್ರತ್ಯೇಕವಾಗಿರದೆ ಲಿಂಗಾಯತರೆಲ್ಲ ಒಂದೇ ಎಂಬ ಭಾವ ಮೂಡಬೇಕು ಸರ್ಕಾರದವರು ಮಹನೀಯರ ಜಯಂತಿಗಳನ್ನು ಒಂದು ಜಾತಿಗೆ ಸೀಮಿತ ಗೊಳಿಸುತ್ತಿರುವುದು ಸರಿಯಲ್ಲ ಇದು ಸಮಾಜ ಒಡೆಯುವ ಪ್ರಯತ್ನವಾಗುತ್ತದೆ ನಾವೆಲ್ಲರೂ ಒಳಪಂಗಡಗಳನ್ನು ಬಿಟ್ಟು ಬಸವಣ್ಣ ತೋರಿದ ಬಸವ ಪಥದಲ್ಲಿ ಸಾಗಬೇಕು ಒಂದೇ ಲಿಂಗಾಯತ ಎನ್ನುವ ಭಾವನೆ ಹೊಂದಬೇಕು ಸರಳವಾದ ಬಸವ ತತ್ವಗಳು ನಮಗೆ ದೊರೆತಿರುವುದು ನಮ್ಮೆಲ್ಲರ ಪುಣ್ಯವಾಗಿದೆ ಪ್ರತಿಯೊಬ್ಬರು ಲಿಂಗ ಧರಿಸಿದಾಗ ಲಿಂಗ ಪ್ರಭೇ ಅರಳಿ  ಬಸವ ಪಥದ ಅರಿವು ಮೂಡುತ್ತದೆ ಲಿಂಗ ಭಾವದ ಕಡೆಗೆ ಸಾಗಿದಾಗ ಸಿಗುವ ಸುಖ ಅನಂತವಾಗಿರುತ್ತದೆ ಎಂದು ಅವರು ಕರೆ ನೀಡಿದರು ಶರಣೆ ಸಿಂಧು ಕಾಡದಿ ಅವರು ಮಾತನಾಡಿದರು ಚಂದ್ರಶೇಖರ್ ಹಳ್ಳದ ಬಸವ ಬಳಗದ ಕಲಾವಿದರಿಂದ ವಚನ ಗಾನ ನಡೆಯಿತು ಬಸವ ಬಳಗದ ದಾವಣಗೆರೆ ಅಧ್ಯಕ್ಷ ಹುಚ್ಚಪ್ಪ ಮಾಸ್ತರ್ ಎನ್ ಎಂ ಶಿವಪ್ರಕಾಶ್, ಡಾ ಗಂಗಮ್ಮ, ಪ್ರಮುಖರಾದ ಉಂತಗಲ್ಲು ಅಮರೇಶಪ್ಪ, ಮಲ್ಲಿಕಾರ್ಜುನ ಸ್ವಾಮಿ, ಟಿ ಧರಪ್ಪ ನಾಯಕ, ಎ ಅಬ್ದುಲ್ ನಬಿ, ಆರ್ ಸಿ ಪಂಪನಗೌಡ, ದೊಡ್ಡನಗೌಡ, ಬಳ್ಳಾರಿ ವೀರಶೈವ ವಿದ್ಯಾ ವರ್ಧಕ ಸಂಘದ ರಾಮನಗೌಡ, ಬಸವ ಬಳಗದವರು ಸೇರಿದಂತೆ ಸಾವಿರಾರು ಜನ ಇದ್ದರು .