ಪೆಹಲ್ಗಾಮ್ ಹೀನ ಕೃತ್ಯ ಖಂಡಿಸಿ ಬಾರ್ ಅಸೋಶಿಯೇಶನ್ ಮನವಿ
ಬೆಳಗಾವಿ 24: ಜಮ್ಮು ಕಾಶ್ಮೀರ ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕರ ಹಿಂದೂ ಪ್ರವಾಸಿಗರ ನರಸಂಹಾರ ತೀವ್ರವಾಗಿ ಖಂಡಿಸಿ ಬೆಳಗಾವಿ ಬಾರ್ ಅಸೋಶಿಯೇಶನ್ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ನರೇಂದ್ರ ಮೋದಿಜಿಯವರಿಗೆ ಮನವಿ ಸಲ್ಲಿಸಿದರು.
ಈ ಕೃತ್ಯ ಮಾಡಿದ ಮಾನವೀಯತೆಯ ವಿರೋಧಿಗಳ ಮೇಲೆ ಪ್ರತಿಕಾರ ತೀರಿಸಿಕೊಳ್ಳಬೇಕು. ಶಾಂತಿ ನೆಲೆಸಿದ ಜಮ್ಮು ಕಾಶ್ಮೀರದಲ್ಲಿ ಮತ್ತೇ ಅಶಾಂತಿ ಉಂಟು ಮಾಡಲು ದೇಶದ ಸೌಹಾರ್ದತೆಯನ್ನು ಕದಡಲು ಹವಣಿಸುತ್ತಿರುವ ದುಷ್ಟ ಶಕ್ತಿಗಳನ್ನು ಸಂಪೂರ್ಣ ನಿರ್ನಾಮ ಮಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ದೇಶ ಹಿತಕ್ಕಾಗಿ, ಅಮಾಯಕ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿರುವ ದಾಳಿ ಹೇಯ ಕೃತ್ಯ. ಈ ಘಟನೆಯಲ್ಲಿ ಮಡಿದವರ, ಅವರ ಕುಟುಂಬದವರೊಂದಿಗೆ ನಾವಿದ್ದೇವೆ. ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ನಮ್ಮ ಸಂಪೂರ್ಣ ಬೆಂಬಲವಿರಲಿದೆ ಎಂದು ಬಾರ್ ಅಸೋಶಿಯೇಶನ್ ಮನವಿಯಲ್ಲಿ ತಿಳಿಸಿದೆ.
ಬಾರ್ ಅಸೋಶಿಯೇಶನ್ ಅಧ್ಯಕ್ಷ ಕಿವಡಸಣ್ಣವರ, ಜ. ಸೆಕ್ರೆಟರಿ ವಾಯ್. ಕೆ.ದಿವಟೆ ಸೇರಿದಂತೆ ಅಸೋಶಿಯೇಶನ್ ಪದಾಧಿಕಾರಿಗಳು ನ್ಯಾಯವಾದಿಗಳು ಉಪಸ್ಥಿತರಿದ್ದರು.