ಹೆಲ್ಪ್‌-100 ಎನ್‌ಜಿಓದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಬುಕ್ ವಿತರಣೆ

ಕಾರಟಗಿ 02: ಪಟ್ಟಣದ ರಾಜೀವ್ ಗಾಂಧಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೆಂಗಳೂರು ಮೂಲದ ಹೆಲ್ಪ್‌-100 ಎನ್‌ಜಿಒ ತಂಡದಿಂದ ಸ್ಕೂಲ್ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿಗಳಾದ ನೋಟ್ ಬುಕ್, ಪೆನ್ನು ವಿತರಣೆಯನ್ನು ಜುಲೈ 02ರಂದು ಮಾಡಲಾಯಿತು.  

ಪಟ್ಟಣದ ರಾಜೀವ್ ಗಾಂಧಿ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ (720 ನೋಟ್ ಬುಕ್) ಮತ್ತು ಬ್ಯಾಗ್ 120 ಹಾಗೂ ಚಾಮತಿಪಟ್ಟಗೆ 120, ಪೆನ್, ಪೆನ್ಸಿಲ್ ಸಂಸ್ಥೆಯಿಂದ ವಿತರಣೆ ಮಾಡಿದರು.  ಬೆಂಗಳೂರಿನ ಸುಜನಾ ಎನ್ನುವವರು ಸ್ನೇಹಿತರೊಂದಿಗೆ ಹೆಲ್ಪ್‌ 100 ಎನ್‌.ಜಿ.ಓ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಬಡ ಮಕ್ಕಳಿಗೆ ಉಚಿತವಾಗಿ ಸರಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡುತ್ತಾ ಬಂದಿದ್ದು ಈ ಬಾರಿ ಕಾರಟಗಿಯ ಸರ್ಕಾರಿ ಶಾಲಾ ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.  

ಈ ವೇಳೆಯಲ್ಲಿ ಪುರಸಭೆ ಸದಸ್ಯ ರಾಮಣ್ಣ ನಾಯಕ, ಶಾಲಾ ಮುಖ್ಯೋಪಾಧ್ಯಾಯ ಕೇರು ಪವಾರ್, ಸಹ ಶಿಕ್ಷಕ ಅಶೋಕ್ ಹೊಸಮನಿ,ಲಕ್ಷ್ಮಣ್, ಮುರುಗೇಶ್,ವಿನಿತ್, ಚೇತನ್, ನೀಲ್ , ಪಾಲಕರು ಮತ್ತು ಶಾಲಾ ಸಿಬ್ಬಂದಿ ವರ್ಗ ಸೇರಿದಂತೆ ಉಪಸ್ಥಿತರಿದ್ದರು.