ಬಿಜೆಪಿ ಅಭ್ಯರ್ಥಿ ಚಿಕ್ಕ ರೇವಣ್ಣ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಕೆ

ಲೋಕದರ್ಶನ ವರದಿ 

ರಾಮದುರ್ಗ: ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಅವರು ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಬೃಹತ್ ರೋಡ್ ಶೋ ನಡೆಸಿ ಪುನಃ ಬುಧವಾರ ನಾಮಪತ್ರ ಸಲ್ಲಿಸಿದರು. 


    ಆರಂಭದಲ್ಲಿ ಪಟ್ಟಣದ ಶ್ರೀವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿಸುವ ಮೂಲಕ ರೋಡ್ ಶೋ ಆರಂಭಿಸಿದರು. 

ತೆರೆದ ವಾಹನದಲ್ಲಿ ನಾಮಪತ್ರ ಸಲ್ಲಿಸಲು ತೆರಳಿದ ವೇಳೆ ಚಿಕ್ಕರೇವಣ್ಣ ಅವರಿಗೆ ಸಂಸದೆ ಮಂಗಲಾ ಅಂಗಡಿ, ಉತ್ತರ​‍್ರದೇಶ ರಾಜ್ಯಸಭಾ ಸದಸ್ಯೆ ಸಂಗೀತಾ ಯಾದವ್, ಭಾರತಿ ಮಗದುಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ, ಲಕ್ಷ್ಮಣ ತಪಸಿ, ಮಲ್ಲಿಕಾರ್ಜುನ ಕೊಪ್ಪದ, ಸಿದ್ದು ಮೇತ್ರಿ, ಭವ್ಯ ಚಿಕ್ಕರೇವಣ್ಣ ಮತ್ತಿತರರು ಸಾಥ್ ನೀಡಿದರು. 


   ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನದಿಂದ ದಿನಕ್ಕೆ ತಮಗೆ ಹಾಗೂ ಬಿಜೆಪಿ ಪಕ್ಷಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ತಮ್ಮ ಬೆಂಬಲ ಸೂಚಿಸಿದ್ದಾರೆ. ಇಂತಹ ಜನರ ಮಧ್ಯೆ ನಾನಿರುವುದು ಧನ್ಯ. ಜನರ ಸೇವೆಯನ್ನು ನಾನು ಪ್ರಾಮಾಣಿಕವಾಗಿ ಕಳೆದ 4 ವರ್ಷಗಳಿಂದ ಮಾಡುತ್ತ ಬಂದಿದ್ದೇನೆ. ನನಗೆ ವಿಶ್ವಾಸವಿದೆ ಈ ಬಾರಿ ಮತ್ತೆ ರಾಮದುರ್ಗದಲ್ಲಿ ಕಮಲ ಅರಳುವುದು ನಿಶ್ಚಿತ ಎಂದು ಹೇಳಿದರು. 

ಚಿಕ್ಕರೇವಣ್ಣ ನಾಮಪತ್ರ ಸಲ್ಲಿಸುವ ವೇಳೆ ತಾಲೂಕಿನ ವಿವಿಧೇಡೆಯಿಂದ ಬಂದ 20 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಉಪಸ್ಥಿತರಿದ್ದು, ಬಿಜೆಪಿಗೆ ಜೈ, ಚಿಕ್ಕರೇವಣ್ಣ ಅವರಿಗೆ ಜೈ ಎಂದು ಘೋಷಣೆಗಳನ್ನು ಕೂಗಿದರು.