ಬಿಜೆಪಿಯಿಂದ ಬೃಹತ್ ಧರಣಿ ಸತ್ಯಾಗ್ರಹ 3ನೇ ದಿನ
BJP's massive sit-in protest enters third day
ಲೋಕದರ್ಶನ ವರದಿ
ವಿಜಯಪುರ 20: ಸಚಿವ ಬಿ.ನಾಗೇಂದ್ರ ರಾಜೀನಾಮೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ನಗರದಲ್ಲಿ ನಡೆಯುತ್ತಿರುವ ಬೃಹತ್ ಧರಣಿ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ಸತ್ಯಾಗ್ರಹದ ನೇತೃತ್ವವನ್ನು ಬಿಜೆಪಿ ನಗರ ಘಟಕ ನೇತೃತ್ವದಲ್ಲಿ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಶೆಟ್ಟಿ ಮಾತನಾಡಿ, ಸಿದ್ಧರಾಮಯ್ಯನವರ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಮತ್ತೆ ಹೊರಳಿ ಅವರನ್ನೇ ಮಂತ್ರಿ ಮಾಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದರು. ಜಿಲ್ಲೆಯ ಬರಗಾಲ ಪರಿಸ್ಥಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಗಂಭೀರವಾಗಿ ತೆಗೆದುಕೊಂಡಿರುವುದಿಲ್ಲ. ಬರಗಾಲ ವೀಕ್ಷಣೆಯನ್ನು ಬರಿ ಕಾಟಾಚಾರಕ್ಕೆ ವೀಕ್ಷಣೆ ಮಾಡಿದ್ದಾರೆ. ಇಂಡಿಯಲ್ಲಿ ಉಸ್ತುವಾರಿ ಸಚಿವ ಅವರ ಜೊತೆ ಅಲ್ಲಿಯ ಶಾಸಕ ಭಾಗವಹಿಸಿಲ್ಲ. ಅಲ್ಲಿಯ ಶಾಸಕರೇ ಸಾತ ನೀಡುತ್ತಿಲ್ಲ.
ಇದು ಅಭಿವೃದ್ಧಿಗೆ ಕುಂಟಿತವಾಗುತ್ತದೆ ಎಂದರು. ವಯಕ್ತಿಕ ಭಿನ್ನಾಭಿಪ್ರಾಯಗಳು ಅಭಿವೃದ್ಧಿಗೆ ಮಾರಕವಾಗದಿರಲಿ ಎಂದರು. ರೈತರ ಸಮಸ್ಯೆಯನ್ನು ವಿಧಾನ ಸಭೆಯಲ್ಲಿ ಸಮರ್ಥವಾಗಿ ಪ್ರಸ್ತಾಪಿಸಿ ಜಿಲ್ಲೆಗೆ ವಿಶೇಷ ಬರ ಪರಿಹಾರ ಪ್ಯಾಕೇಜ್ ತರಲು ಮುಂದಾಗಬೇಕು. ಕೇವಲ ಭರವಸೆಗಳಿಗೆ ಸೀಮಿತವಾಗದೇ ರೈತರ ಸಂಕಷ್ಟ ನಿವಾರಣೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರು ಮಾತನಾಡಿ, ಎಸ್.ಸಿ ಮತ್ತು ಎಸ್.ಟಿ.ಜನಾಂಗದ ಅಭಿವೃದ್ಧಿಗೆ ಇಟ್ಟ ವಾಲ್ಮೀಕಿ ನಿಗಮದಲ್ಲಿನ ಹಣ ಭ್ರಷ್ಟಾಚಾರವಾಗಿದ್ದನ್ನು ಅಂದಿನ ಸಿಎಂ ಸಿದ್ಧರಾಮಯ್ಯನವರೇ ಸದನದಲ್ಲಿ ಒಪ್ಪಿಕೊಂಡಿದ್ದು ಅಂತಹ ಕಳಂಕಿತ ಶಾಸಕ ಬಿ.ನಾಗೇಂದ್ರರನ್ನು ಮಂತ್ರಿಯನ್ನಾಗಿ ಮಾಡಿರುವುದು ಸಂವಿಧಾನಬದ್ಧವಲ್ಲ ಎಂದು ಆರೋಪಿಸಿದರು.
ಪಾರ್ಲಿಮೆಂಟದಲ್ಲಿ ಸದನ ನಡೆಯುತ್ತಿರುವಾಗ ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾಕ್ರೋಜ್ ಜನತಾ ಪಾರ್ಟಿ ಕೆಲವು ಗೂಂಡಾಗಳ ಜತೆಗೂಡಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ವಿದ್ಯಾರ್ಥಿಗಳ ಹೆಸರು ಹೇಳಿ ತಮ್ಮ ಬೇಳೆ ಬೆಯಿಸುವ ಸಲುವಾಗಿ ಕೇಂದ್ರದ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡಿರುವದು ನಾಚಿಗೇಡಿನ ಸಂಗತಿ ಎಂದು ಕಿಡಿ ಕಾರಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ರವೀಂದ್ರ ಲೋಣಿ, ಉಮೇಶ ವಂದಾಲ ಮಾತನಾಡಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 