ಆಯುಷ್ಮಾನ್ ಭವಃ: ಆರೋಗ್ಯ ಮೇಳ ಕಾರ್ಯಕ್ರಮ

ಕಂಪ್ಲಿ12 ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಯುಷ್ಮಾನ್ ಭವಃ ಕಾರ್ಯಕ್ರಮದಡಿ ಆರೋಗ್ಯ ಮೇಳ ಕಾರ್ಯಕ್ರಮ ಜರುಗಿತು. ಆಡಳಿತ ವೈದ್ಯಾಧಿಕಾರಿ ಡಾ.ರವೀಂದ್ರ ಕನಕೇರಿ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ,ಪ್ರತಿಯೊಬ್ಬರು  ಯಾವುದೇ ರೋಗ ಲಕ್ಷಣದ ಬಗ್ಗೆ ಆಲಕ್ಷಿಸಬಾರದು. ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿ ಆರೋಗ್ಯ ಮೇಳದಲ್ಲಿ 477ಕ್ಕು ಅಧಿಕ ರೋಗಿಗಳನ್ನು ತಪಾಸಿಸಲಾಗಿದ್ದು, ಇದರಲ್ಲಿ 312ರೋಗಿಗಳನ್ನು ತಜ್ಞ ವೈದ್ಯರು ತಪಾಸಿಸಿ ಸೂಕ್ತ ಚಿಕಿತ್ಸೆ ನೀಡಿದರು. 8ಜನ ಅಂಗಾಂಗ ದಾನಕ್ಕೆ, 300ಜನ ಅಬಾ ಕಾರ್ಡ್‌ಗಳಿಗಾಗಿ ಹೆಸರು ನೋಂದಾಯಿಸಿಕೊಂಡರು. ವೈದ್ಯರಾದ ಡಾ.ವೀರೇಶ್, ಡಾ.ಮಲ್ಲೇಶಪ್ಪ, ಡಾ.ಭರತ್ ಪದ್ಮಶಾಲಿ, ಡಾ.ಸ್ವಾತಿ ಪಾಟೀಲ್, ಬಳ್ಳಾರಿಯ ವಿಮ್ಸ್‌ ತಜ್ಞ ವೈದ್ಯರಾದ ಡಾ.ಭಾಗ್ಯಲಕ್ಷ್ಮಿ, ಡಾ.ಮಿಥುನ್ ಸುತ್ರಾವೇ, ಡಾ.ಸುನಿಲ್‌ಕುಮಾರ್, ಡಾ.ಕಾರ್ತೀಕ್, ಡಾ.ಉದಯಕುಮಾರ್, ಡಾ.ಐಶ್ವರ್ಯ, ಡಾ.ವೀರೇಶ್, ಬಿಎಚ್‌ಇಒ ಕೆ.ಶೋಭಾ, ನೇತ್ರಾಧಿಕಾರಿ ಪ್ರಕಾಶಗೌಡ, ಸಿಬ್ಬಂದಿ ನಾಗರಾಜ, ದೇವಣ್ಣ, ಎನ್‌ಸಿಡಿ ಮತ್ತು ಪ್ರಾಯೋಗಾಲಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿದ್ದರು.