ಆಯುರ್ವೇದವೂ ಅಲೋಪತಿಗೆ ಸರಿಸಮಾನಾಗಿ ಬೆಳೆಯಬೇಕು

ಹಾವೇರಿ 27: ಆಯುರ್ವೇದದಲ್ಲಿ ಅಲೋಪತಿ ರೀತಿ ನಿರಂತರ ಸಂಶೋಧನೆ ಆಗಬೇಕು. ಆಯುರ್ವೇದವೂ ಅಲೋಪತಿಗೆ ಸರಿಸಮಾನಾಗಿ ಬೆಳೆಯಬೇಕು. ಆಯುರ್ವೇದಕ್ಕೆ ಉತ್ತೇಜನ ನೀಡಲು  ಬಿಜೆಪಿ ಅವಧಿಯಲ್ಲಿ ಆಯುಷ್ ಇಲಾಖೆಯನ್ನು ಆರಂಭಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ನಗರ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸಿಂದಗಿ ಶಾಂತವಿರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದರು. 

ತಾವೆಲ್ಲ ಭವಿಷ್ಯದ ವೈದ್ಯರಾಗುವವರಿದ್ದೀರಿ. ಈ ದೇಶ ಬೇರೆ ದೇಶಗಳಿಗಿಂತ ವಿಭಿನ್ನವಾಗಿದೆ. ಹಲವಾರು ಭಾಷೆ, ಸಮುದಾಯ, ಪ್ರದೇಶಗಳು ಇವೆ. ಇದರ ನಡುವೆ ವಿವಿಧ ವರ್ಗಗಳಲ್ಲಿ ಜನ ವಿಂಗಡಣೆಯಾಗಿದೆ.130 ಕೋಟಿ ಜನರಿಗೆ ಶಿಕ್ಷಣ ಆರೊಗ್ಯ ಕೊಡುವುದು ಅತ್ಯಂತ ಮುಖ್ಯವಾಗಿದೆ. 

ನಾವು ಮೊದಲ ನಾಲ್ಕು ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣ, ಆರೊಗ್ಯಕ್ಕೆ ಆದ್ಯತೆ ನೀಡಿದ್ದರೆ ನಾವು ಬಹಳ ಬದಲಾವಣೆ ಆಗುತ್ತಿದ್ದೇವು. ನಾವು ಅಂತಹ ಅವಕಾಶ ಕಳೆದುಕೊಂಡಿದ್ದೇವೆ. ಈ ದೇಶದಲ್ಲಿ ದಿನನಿತ್ಯ ಒಂದು ಮಗು ಹುಟ್ಟುತ್ತದೆ. ಈ ದೇಶದಲ್ಲಿ ಆಯುರ್ವೆದ ಅತ್ಯಂತ ಮಹತ್ವ ಪಡೆದಿದೆ. ನಮ್ಮದು ಅನ್ವೇಷಣೆ ರಹಿತವಾದ ಪರಂಪರೆ. ಒರಿಜಿನಲ್ ಇಂಟ್ಲಿಜನ್ಸ್‌ ನಮ್ಮ ಪರಂಪರೆಯಲ್ಲಿದೆ. ಸಂಶೋಧನೆ ನಮ್ಮ ಕುತೂಹಲ ಮಟ್ಡದಲ್ಲಿದೆ. ಭಾರತ, ಚೈನಾ ಬೆಳೆದಿರುವ ರೀತಿ ಬೇರೆ, ಬೇರೆ ದೆಶಗಳಷ್ಟು ಅಲೋಪತಿ ನಮ್ಮ ದೇಶದಲ್ಲಿ ಮಹತ್ವ ಪಡೆದಿಲ್ಲ. ನಮ್ಮ ದೇಶದಲ್ಲಿ ಆಯುರ್ವೇದದ ಬೇರು ಬಹಳ ಗಟ್ಡಿಯಾಗಿದೆ. ಮೋದಿಯವರು ಯೋಗಕ್ಕೆ ಅತ್ಯಂತ ಮಹತ್ವ ಕೊಟ್ಡಿದ್ದಾರೆ. ಆಯುರ್ವೇದದ ಬೆಳವಣಿಗೆಗೆ ಪ್ರತ್ಯೇಕವಾಗಿ 

 ಆಯುಷ್ ಇಲಾಖೆ  ತೆರೆದಿದ್ದಾರೆ.ಬಿ.ಎಸ್‌. ಯಡಿಯೂರ​‍್ಪ ಮುಖ್ಯಮಂತ್ರಿ ಆಗಿದ್ದಾಗ ದಿವಂಗತ ವಿ ಎಸ್‌. ಆಚಾರ್ಯ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ಆಯುಷ್ಯ ವೈದ್ಯರಿಗೆ ಮಾನ್ಯತೆ ನಿಡುವ ಕೆಲಸವನ್ನು ಮಾಡಿದರು ಎಂದು ಹೇಳಿದರು. 

ಆಯುರ್ವೇದದಲ್ಲಿ ಅಲೋಪತಿ ರೀತಿ ನಿರಂತರ ಸಂಶೋಧನೆ ಆಗಬೇಕು. ಅದನ್ನು ಸರ್ಕಾರ, ಐಎಂಎ ಒಪ್ಪಿಕೊಳ್ಳಬೇಕು.ಆಗ ಆಯುರ್ವೇದಕ್ಕೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ಅಲೋಪತಿಗೆ ಸಮನಾಗಿ ಆಯುರ್ವೇದ ಬೆಳೆಯಬೇಕು. ಇದರಿಂದ ಮಾನವ ಕುಲಕ್ಕೆ ದೊಡ್ಡ ಸಹಾಯವಾಗುತ್ತದೆ.  

ಕೆಳ ಹಂತದ ಸಮುದಾಯ, ಬಡವರು, ದೀನದಲಿತರು ಆಯುರ್ವೆದಕ್ಕೆ ಬರುತ್ತಾರೆ. ಶ್ರೀಮಂತ ಅಲೊಪತಿಗೆ ಬರುತ್ತಾರೆ. ಎಲ್ಲರಿಗೂ ಆಯುರ್ವೇದದ ಚಿಕಿತ್ಸೆ ದೊರೆಯುವಂತೆ ಆಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂಶೋಧನೆ ನಡೆಸಬೇಕು. ನೀವು ಈ ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡಿದರೆ, ಆ ನಿಟ್ಟಿನಲ್ಲಿ ದೊಡ್ಡ ಮಟ್ಟದ ಬೆಳವಣಿಗೆಗೆ ಕಾರಣವಾಗಲಿದೆ. ನಾನು ಆಯುರ್ವೇದಕ್ಕೆ ಅಗತ್ಯ ಬೆಂಬಲ ನೀಡಲು ಬದ್ದನಾಗಿದ್ದೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಆಸ್ಪತ್ರೆ ಆಡಳಿತಾಧಿಕಾರಿ ವಿ. ಎಚ್‌. ಕೆ. ಹಿರೇಮಠ,ಪ್ರಾಚಾರ್ಯರಾದ  ಚಂದ್ರಶೇಖರ ಗೌಡರ ಸೇರಿದಂತೆ ಅನೇಕರು ಹಾಜರಿದ್ದರು.