ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ಜಾಗೃತಿ ಜಾಥಾ

ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ಜಾಗೃತಿ ಜಾಥಾ Awareness rally against drug abuse and trafficking

ಲೋಕದರ್ಶನ ವರದಿ 

ಧಾರವಾಡ  25 : ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಎಲ್ಲಾ ಫಾರ್ಮಸಿ ಕಾಲೇಜುಗಳು ಹಾಗೂ ಕೆಮಿಸ್ಟ್‌ ಮತ್ತು ಡ್ರಗ್ಗಿಸ್ಟ್‌ ಅಸೋಸಿಯೇಷನ್ ಸಹಯೋಗದೊಂದಿಗೆ ಇಂದು (ಜೂ.25) ಬೆಳಿಗ್ಗೆ ಧಾರವಾಡದ ಕೆಸಿಡಿ ಕಾಲೇಜಿನಿಂದ ಜುಬಿಲಿ ಸರ್ಕಲ್ ವರೆಗೆ ಜಾಗೃತಿ ಜಾಥಾವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ, ಉಪ ಪೊಲೀಸ್ ಆಯುಕ್ತೆ ಶ್ರುತಿ ಎನ್‌.ಎಸ್‌., ಉಪ ಪೊಲೀಸ್ ಅಧೀಕ್ಷಕ ವಿನೋದ್ ಮುಕ್ತೆದಾರ ಸೇರಿದಂತೆ ಅಸಂಗಿ, ಅಜಯ್ ಮುದುಗಲ್, ನೀಲಿಮಾ ಕೊಟ್ಟಣ ಸೇರಿದಂತೆ ಇತರರು ಇದ್ದರು.