ಬೆಳಗಾವಿ

ವಿದ್ಯಾರ್ಥಿಗಳಲ್ಲಿ ಪೋಕ್ಸೋ ಕಾಯಿದೆಯ ಅರಿವು ಅಗತ್ಯ: ಹಿರೇಮಠ

ವಿದ್ಯಾರ್ಥಿಗಳಲ್ಲಿ ಪೋಕ್ಸೋ ಕಾಯಿದೆಯ ಅರಿವು ಅಗತ್ಯ: ಹಿರೇಮಠ

ಲೋಕದರ್ಶನ ವರದಿ 

ಬೆಳಗಾವಿ 12: ಬಾಲ್ಯವಿವಾಹವು ಮಕ್ಕಳ ಶಿಕ್ಷಣ ಆರೋಗ್ಯ ಮತ್ತು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಬಾಲ್ಯವಿವಾಹ ನಿರ್ಮೂಲನೆಗೆ ವಿದ್ಯಾರ್ಥಿಗಳು ಪೋಷಕರು ಹಾಗೂ ಸಮಾಜ ಒಗ್ಗೂಡಿ ಜಾಗೃತಿ ಮೂಡಿಸಬೇಕು.

ಇಂದಿನ ಆಧುನಿಕ ದಿನಮಾನದಲ್ಲಿ ಮಕ್ಕಳ ಮೇಲೆ ಹಲವಾರು ದೌರ್ಜನ್ಯ, ಅತ್ಯಾಚಾರ, ಕಿರುಕುಳದಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಆದಕಾರಣ ಮಕ್ಕಳಲ್ಲಿ ಪೋಕ್ಸೋ ಕಾಯಿದೆಯ ಅರಿವು ಅಗತ್ಯವಾಗಿದೆ ಎಂದು ನೇರ್ಲಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್ ಎಸ್ ಹಿರೇಮಠ ಅಭಿಪ್ರಾಯಪಟ್ಟರು. 

ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಶಕ್ತಿ ಸದನ ಹಿಡಕಲ್ ಡ್ಯಾಂ ಹಾಗೂ ರಿಬಿಲ್ಡ್‌ ಇಂಡಿಯಾ ಫಂಡ ಇವರ ಸಂಯುಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ ತಡೆ ಹಾಗೂ ಪೋಕ್ಸೋ ಕಾಯಿದೆ ಕುರಿತು ಹುಕ್ಕೇರಿ ತಾಲೂಕಿನ ನೇರ್ಲಿ, ಎಲಿಮುನ್ನೋಳಿ ಹಾಗೂ ಬೆಳವಿ ಪ್ರೌಢಶಾಲೆಗಳಲ್ಲಿ ಆಯೋಜಿಸಿದ್ದ ಬೀದಿನಾಟಕ ಜಾಗೃತಿ ಅಭಿಯಾನದಲ್ಲಿ ಅತಿಥಿಗಳಾಗಿ ಮಾತನಾಡಿದರು. 

ಅಭಿಯಾನದ ಎರಡನೇಯ ದಿನವಾದ 11 ಅಗಷ್ಟ 2026ರಂದು ಸರಕಾರಿ ಪ್ರೌಢಶಾಲೆ ನೆರ್ಲಿ, ಸರಕಾರಿ ಪ್ರೌಢಶಾಲೆ ಎಲಿಮುನ್ನೋಳ್ಳಿ ಹಾಗೂ ಸರಕಾರಿ ಪ್ರೌಢಶಾಲೆ ಬೆಳವಿ ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. 

ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ ದುಷ್ಪರಿಣಾಮಗಳು, ಬಾಲ್ಯವಿವಾಹ ನಿಷೇಧ ಕಾಯಿದೆಯ ಅಂಶಗಳು ಪೋಕ್ಸೋ ಕಾಯಿದೆ ಹಾಗೂ ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವ ವಿಧಾನಗಳ ಕುರಿತು  ಮಾಹಿತಿ ನೀಡಲಾಯಿತು ಇದರ ಜೊತೆಗೆ ಮಕ್ಕಳ ಸಹಾಯವಾಣಿ, ಮಹಿಳಾ ಸಹಾಯವಾಣಿ ಹಾಗೂ ತುರ್ತು ಸಂದರ್ಭಗಳಲ್ಲಿ ಬಳಸುವ ಸಹಾಯವಾಣಿಗಳ ಸಂಪೂರ್ಣ ಮಾಹಿತಿ ನೀಡಲಾಯಿತು. ರಂಗದರ್ಶಿನಿ ಕಲಾತಂಡ ದೂಳಗಣವಾಡಿ ಇವರಿಂದ ಬೀದಿನಾಟಕಗಳು ಜರುಗಿದವು. 

3 ಶಾಲೆಯ ಮುಖ್ಯೋಪಾದ್ಯಾಯರು, ಸಹಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಮಹಿಳಾ ಕಲ್ಯಾಣ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ