ಸಹಕಾರಿ ಕ್ಷೇತ್ರ ಬೆಳೆದ ಹಾಗೆ ಜನ ಜಾಗೃತರಾಗುತ್ತಾರೆ: ಆರ್.ಎಮ್.ಬಣಗಾರ

ತಾಂಬಾ 17: ಸಹಕಾರಿ ಕ್ಷೇತ್ರ ಬೆಳೆದ ಹಾಗೆ ಜನ ಜಾಗೃತರಾಗುತ್ತಾರೆ. ಪರಸ್ಪರ ಸಹಕಾರದಿಂದ ಸಹಕಾರಿ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿವೃತ್ತ ಅಧಿಕಾರಿಗಳಾದ ಆರ್.ಎಮ್.ಬಣಗಾರ ಹೇಳಿದರು.

 ಗ್ರಾಮದ ಪ್ರ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ನಡೆದ ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು ಹಾಗೂ ಜಿಲ್ಲಾ ಸಹಕಾರ ಯುನಿಯನ್ ವಿಜಯಪುರ ಇವರ ಸಂಯೋಗದಲ್ಲಿ ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು ಸರಕಾರಕ್ಕೆ ಸಮನಾಗಿ ಕಾರ್ಯನಿರ್ವಹಿಸುವದು ಸಹಕಾರ ಕ್ಷೇತ್ರವಾಗಿದೆ. ಬಡಜನರ ಕ್ಷೇಮಾಭಿವೃದ್ಧಿಗೆ ಸಹಕಾರ ಕ್ಷೇತ್ರವನ್ನು ಬಲಪಡಿಸುವದು ಅಗತ್ಯವಾಗಿದೆ. ಸಹಕಾರ ಕ್ಷೇತ್ರದ ಮೇಲೆ ಜನರು ನಂಬಿಕೆ ಉಳಿಸಿಕೊಳ್ಳುವಂತೆ ಮಾಡಲು ಶ್ರಮಿಸಿದ ಮಹನೀಯರನ್ನು ನಾವೆಲ್ಲ ಸ್ಮರಿಸಬೇಕಿದೆ. ಸಹಕಾರಿ ಸಂಘದಲ್ಲಿ ಶೇ.3ರ ಬಡ್ಡಿ ದರದಲ್ಲಿ 10ಲಕ್ಷ ರೂಗಳನ್ನು ಹಾಗೂ ಶೇ.0 ಬಡ್ಡಿದರದಲ್ಲಿ 3ಲಕ್ಷ ರೂಗಳನ್ನು ಸಹಕಾರಿ ಸಂಘದಲ್ಲಿ ಕೋಡಮಾಡಲಾಗುವದು. ರೈತರು ಇದರ ಉಪಯೋಗ ಪಡಿದುಕೊಳ್ಳಬೇಕೆಂದರು.

ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಹಕಾರಿ ಯುನಿಯನ್ದ ಅಧ್ಯಕ್ಷರಾದ ಎಮ್.ಎಸ್.ಪಾಟೀಲ ಮಾತನಾಡಿ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆ ಇದ್ದರೆ ಮಾತ್ರ ಸಹಕಾರ ಕ್ಷೇತ್ರ ಅಭಿವೃದ್ದಿ ಸಾಧಿಸಲು ಸಾಧ್ಯ. ಸಹಕಾರ ಕ್ಷೇತ್ರ ಡಿಜಿಟಲೀಕರಣ ಆದಮೇಲೆ ಹೆಮ್ಮರವಾಗಿ ಬೆಳೆದಿದೆ. ನಮ್ಮ ಸಹಕಾರ ಸಂಘದಲ್ಲಿ ಕೊಟ್ಟಷ್ಟು ಯಾವ ಬ್ಯಾಂಕಿನಲ್ಲಿಯೂ ಸಾಲ ಕೊಡುವದಿಲ್ಲ. ಹೈನುಗಾರಿಕೆ ಕುರಿ ಸಾಗಾಣಿಕೆ ಮಾಡಲು ಇನ್ನುಮುಂದೆ ಸಾಲ ನೀಡಲಾಗುವದು. ಬಡವರು ಶ್ರೀಮಂತರು ಎನ್ನದೆ ಸಂಘದಲ್ಲಿ ಸದಸ್ಯರಿದ್ದರೆ 5ನೂರು ರೂಗಳಲ್ಲಿ ಯಶಸ್ವಿನಿ ಕಾರ್ಡ ಮಾಡಲಾಗುವದು. ಅದರಲ್ಲಿ 4ಜನರನ್ನು ಸೇರ್ಪಡೆ ಗೊಳಿಸಬಹುದು ತಾವು ಸರಕಾರದ ಲಾಭವನ್ನು ಪಡಿಯುವದರ ಜೊತೆಗೆ ಬೇರೆ ರೈತರಿಗೂ ದೊರೆಯುವಹಾಗೆ ಮಾಡಬೇಕೆಂದು ರೈತರಿಗೆ ಕರೆನೀಡಿದರು. ಅರವಿಂದ ಪೂಜಾರಿ ಮಾತನಾಡಿದರು. ಗುರುರಾಜ ಗೋಟ್ಯಾಳ, ಸಿದ್ದರಾಮಪ್ಪ ಕಲ್ಲೂರ, ರಾಚಪ್ಪ ಗಳೆದ ಕುಮಾರಿ ಎಸ್.ಕೆ.ಬಾಗ್ಯಶ್ರೀ, ಕೆ.ಬಿ.ಪಾಟೀಲ, ಎಸ್.ಎಸ್.ಕಾಪ್ಸೆ, ಡಿ.ಆರ್.ಹಿರೇಕುರಬರ, ಜಿ.ಎಸ್.ಹಿಪ್ಪರಗಿ, ಶ್ರೀದೇವಿ ತಳವಾರ, ಹಣಮಂತ ಕರನಿಂಗ ಉಪಸ್ಥಿತರಿದ್ದರು.

ಜಿಲ್ಲಾ ಸಹಕಾರ ಯುನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸವಿತಾ ಬಿಸನಾಳ ಸ್ವಾಗತಿಸಿದರು. ಎಸ್.ಎಸ್.ಬಿಸನಾಳ ನಿರುಪಿಸಿದರು. ನಾಗು ಗೊಂಗಿ ವಂದಿಸಿದರು.