ಸುಧಾಕರ ದೈವಜ್ಞ
ಶಿಗ್ಗಾವಿ: ಎಟಿಎಂ ಕೇಂದ್ರಗಳು ಇರುವುದು ಬಡವರಿಗೋ ಅಥವಾ ಶ್ರೀಮಂತರಿಗೋ ಗೊತ್ತಿಲ್ಲ ಏಕೆಂದರೆ ಎಟಿಎಂ ಕೇಂದ್ರದ ಸೇವೆಗಳನ್ನು ನೋಡಿದಾಗ ಗೊತ್ತಾಗುತ್ತದೆ ಇದರ ಸೇವೆ ಕಡು ಬಡವರು ನಿರ್ಗತಿಕರು ಮತ್ತು ಸಾಮಾನ್ಯ ಜನರಿಗಲ್ಲ ಎಂದು ನೊಂದ ಫಲಾನುಭವಿಗಳು ಹೇಳುತ್ತಾರೆ.
ಹಣ ಯಾರಿಗೆ ಬೇಡ ಹೇಳಿ ಎಲ್ಲರಿಗೂ ಬೇಕು ಆದರೆ ಬ್ಯಾಂಕ ಎಟಿಎಂ ನಂಬಿ ಜನರು ಹಳ್ಳಿಯಿಂದ ಸಂತೆ ಮಾಕರ್ೆಟಗೆ ಬಂದರೆ ಮಾತ್ರ ಜನರು ಖಾಲಿ ಕೈಯಲ್ಲಿ ಮರಳಿ ಊರಿಗೆ ಹೋಗುವ ಪರಿಸ್ಥಿತಿ ಶಿಗ್ಗಾಂವ ತಾಲೂಕಿನ ಜನರ ಪಾಲಿಗೆ ಬಂದಾಗಿದೆ ಆದರೆ ಬ್ಯಾಂಕಗಳು ಮಾತ್ರ ಇದರ ಬಗ್ಗೆ ತೆಲೆ ಕೆಡಸಿಕೊಳ್ಳದೆ ಸುಮ್ಮನೆ ಕೈ ಚೆಲ್ಲಿ ಕುಳಿತಿವೆ.
ಎಟಿಎಂ ಕೇಂದ್ರಗಳನ್ನು ತೆರೆದಿರುವ ಉದ್ದೇಶ ಗ್ರಾಮೀಣ ಜನರಿಗೆ ಯಾವುದೇ ತರಹದ ಸೌಲಭ್ಯಗಳು ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳು ಲಭ್ಯವಾಗುವುದಿಲ್ಲವಾದ್ದರಿಂದ ಪಟ್ಟಣದ ಪ್ರದೇಶದಲ್ಲಿ ಎಲ್ಲಾ ತರಹದ ಸೌಲಭ್ಯಗಳು ಸಿಗುತ್ತವೆ ಎಂದು ಎಟಿಎಂ ಸ್ಥಾಪಿಸಿದ್ದಾರೆ.
ಜನರು ಏನಾದರು ಬ್ಯಾಂಕ ಮ್ಯಾನೇಜರಗೆ ಪ್ರಶ್ನೇ ಮಾಡಿದರೆ ಬರುವ ಉತ್ತರ ಒಂದೆ ಸರ್ವರ್ ಇಲ್ಲಾ ,ಎಟಿಎಂ ನಿರ್ವಹಣೆ ಏಜನ್ಸಿದಾರರು ಹಣ ಹಾಕುತ್ತಾರೆ ನಮ್ಮ ಎಟಿಎಂ ಗಳು ಇವೆ ಆದರೆ ಸರ್ವರ್ ಪ್ರಾಬ್ಲಂ ಇದೆ , 2000 ನೋಟಗಳು ಇವೆ ತೆಗೆದುಕೊಳ್ಳಿ 500 ರೂ ನೋಟಗಳು ಖಾಲಿಯಾಗಿವೆ ನಿಮ್ಮ ಬ್ಯಾಂಕ ಬ್ಯಾಲನ್ಸ್ ಕಡಿಮೆ ಇದ್ದರೆ ನಾವು ಏನ ಮಾಡಲಿಕ್ಕೆ ಆಗುತ್ತೆ ಅಂತಾರೆ ? ಆದರೆ ಹಳ್ಳಿಗಳಿಂದ ಬರುವ ಜನರು ಬ್ಯಾಂಕ ಎಟಿಎಂ ನಂಬಿಕೊಂಡು ಬಂದು ಬರಿ ಕೈಯಲ್ಲಿ ಮರಳಿ ಊರಿಗೆ ಹೋಗುವುದು ಖಚಿತ ಪ್ರತಿ ಬುಧವಾರ ಸಂತೆ ದಿನವಾಗಿದ್ದರಿಂದ ಹಳ್ಳಿಗಳಿಂದ ಜನರು ಸಂತೆ ಮಾಡಲಿಕ್ಕೆ, ಮನೆಗೆ ಬೇಕಾದಂತಹ ದಿನಸಿ ವಸ್ತಗಳು, ಹಾಗೂ ದಿನ ಬಳಕೆ ವಸ್ತುಗಳು ಖರೀದಿ ಮಾಡಲು ಬಂದು ಎಟಿಎಂ ಬಂದ ಎಂಬ ಸಂದೇಶ ನೋಡಿ ಮರಳಿ ತಮ್ಮ ಸ್ಥಾನಕ್ಕೆ ಹೋಗಬೇಕಾದಂತಹ ಪರಸ್ಥಿತಿ ತಾಲೂಕಿನ ಸಾರ್ವಜನಿಕರದ್ದಾಗಿದೆ ಇದೆ ರೀತಿ ಮುಂದುವರೆದರೆ ಬ್ಯಾಂಕನಲ್ಲಿ ಹಣ ಇಡದೆ ಜನರು ತಮ್ಮ ಬಳಿಯಲ್ಲಿ ಹಣ ಇರಿಸಿಕೊಳ್ಳುವಂತಾಗಿದೆ.
ತಾಲೂಕಿನ ಜನಸಂಖ್ಯೆ ಪ್ರಮಾಣ ಹೆಚ್ಚಿಗೆ ಇದ್ದು ಸ್ಥಳೀಯ ಎಟಿಎಂಗಳ ಸಂಖ್ಯೆ ಕಡಿಮೆ ಇದ್ದು ಅದು ಕೂಡಾ ಸಮಸ್ಯೆ ಹೆಚ್ಚಾಗಲಿಕ್ಕೆ ಕಾರಣವಾಗಿದೆ ಮತ್ತು ತಾಲೂಕಿನ ಸುತ್ತಮತ್ತಲೂ ಪ್ರವಾಸಿ ತಾಣಗಳ ಸಂಖ್ಯೆ ಹೆಚ್ಚಾಗಿದ್ದು ದೂರದ ಊರುಗಳಿಂದ ಬರುವ ಪ್ರವಾಸಿಗರಿಗೆ ದೊಡ್ಡ ತೆಲೆನೋವಾಗಿ ಹೋಗಿದೆ ಹೀಗೆ ಆದರೆ ಬ್ಯಾಂಕಗಳ ವ್ಯವಹಾರ ಮಾಡುವವರು ಬ್ಯಾಂಕಿನ ಸಹವಾಸ ಕಡಿಮೆ ಮಾಡುವ ವಿಚಾರಗಳು ತಾಲೂಕಿನ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ ಈಗಲಾದರು ರಾಷ್ಟ್ರೀಯ ಬ್ಯಾಂಕಗಳು ಎಚ್ಚೆತ್ತು ಕೊಳ್ಳದಿದ್ದರೆ ಅಥವಾ ಪರಿಹಾರ ಕಂಡುಕೊಳ್ಳದೆ ಇದ್ದಲ್ಲಿ ಬ್ಯಾಂಕಗಳು ಮುಂದೆ ಒಂದು ದಿನ ದೊಡ್ಡ ಮಟ್ಟದ ಸಮಸ್ಯೆಗಳನ್ನು ಅನುಭವಿಸ ಬೇಕಾಗುತ್ತದೆ.
ಸರತಿ ರಜೆಗಳು ಸಾಲು ಸಾಲು ಬಂದಾಗ ಸಾರ್ವಜನಿಕರ ಗೋಳು ಯಾರಿಗೆ ಹೇಳತಿರದು ಏಕೆಂದರೆ ಎಟಿಎಂನಲ್ಲಿ ಟೆಂಡರ ಪಡೆದ ಸಂಸ್ಥೆಯ ಸಿಬ್ಬಂದಿಗಳು ಹಾಕಿದ ಹಣ ಎರಡು ಗಂಟೆಯಲ್ಲಿ ಖಾಲಿಯಾಗಿ ಬಿಡುತ್ತದೆ ನಂತರ ಸಾರ್ವಜನಿಕರಿಗೆ ಗೋಳು ಅವಾಗ ಅಲ್ಲಿದ್ದ ಸಿಬ್ಬಂದಿ ಹಣವಿಲ್ಲ ಅಥವಾ ನೋಕ್ಯಾಶ್ ಅಂತ ಲೇಬಲ್ ಹಚ್ಚಿ ಬಿಟ್ಟರೆ ಮುಗಿಯಿತು ಇಲ್ಲಿ ತೊಂದರೆ ಅನುಭವಿಸುವವರು ಸಾಮಾನ್ಯ ಜನರು ಹೊರತು ಶ್ರೀಮಂತರಲ್ಲ ಇದರ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕರು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮವನ್ನು ಕೈಗೊಳ್ಳಬೇಕು ಅಂದಾಗ ಮಾತ್ರ ಬ್ಯಾಂಕಿನ ಸೇವೆ ಸಾಮಾನ್ಯ ಜನರಿಗೆ ತಲುಪಿದಂತಾಗುತ್ತದೆ.
ಎಟಿಎಂ ಕೇಂದ್ರದಲ್ಲಿ ಎರಡು ಹಣ ತೆಗೆಯುವ ಯಂತ್ರಗಳಿರುತ್ತವೆ ಆದರೆ ಕಾರ್ಯನಿರ್ವಹಿಸುವುದು ಒಂದು ಎಟಿಎಂ ಮಾತ್ರ ಕೇಳಿದರೆ ಇಲ್ಲ ಅದು ದುರಸ್ತಿಯಲ್ಲಿದೆ ಅಥವಾ ಅದರಲ್ಲಿ ಹಣವಿಲ್ಲ ಅಥವಾ ಅದರಲ್ಲಿ ಪ್ರಿಂಟ್ ರೋಲ್ ಖಾಲಿಯಾಗಿದೆ ಎಂದು ನಾನಾ ತರಹದ ಉತ್ತರಗಳನ್ನು ಹೇಳುತ್ತಾರೆ ಹಾಗಾದರೆ ಇಂತಹ ಎಟಿಎಂ ಕೇಂದ್ರಗಳು ನಮಗೆ ಬೇಡ ಅವಶ್ಯಕತೆಯಿಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ.