ರಾಯರ ಆರಾಧನಾ ಮಹೋತ್ಸವದಲ್ಲಿ ರಥೋತ್ಸವ
Aradhana Mahotsava: Athani news
ಅಥಣಿ, 12 ; ಶ್ರೀ ರಾಯರ ಮಠದ ವಿಜ್ರಂಭಣೆಯ ಆರಾಧನಾ ಮಹೋತ್ಸವಕ್ಕೆ ತೆರೆ. ಅಥಣಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಕೊನೆಯ ದಿನದ ಅಂಗವಾಗಿ ಸಾವಿರಾರು ಭಕ್ತರ ಜಯ ಘೋಷ, ಭಕ್ತಿ ಗೀತೆಗಳ, ಭಜನೆ, ದಾಸರ ಪದಗಳ, ನಡುವೆ ರಥೋತ್ಸವ ವಿಜ್ರಂಭಣೆಯಿಂದ ನಡೆಯಿತು. ಮೂರು ದಿನಗಳ ಆರಾಧನಾ ಮಹೋತ್ಸವ ದಲ್ಲಿ ರಾಯರು ವೃಂದಾವನ ಸ್ವೀಕರಿಸಿದ ಆರಾಧನಾ ಮಹೋತ್ಸವದಲ್ಲಿ ವಿಜ್ರಂಭಣೆಯ ರಥೋತ್ಸವದ ಮೂಲಕ ಕೊನೆಗೊಂಡಿತು.
ಕೇದಿಗೆ, ಸೇವಂತಿ, ಮಲ್ಲಿಗೆ, ಗುಲಾಬಿ, ಕನಕಾಂಬರ, ಜಾಜಿ ಸೇರಿದಂತೆ ಅನೇಕ ವಿಧವಾದ ಹೂಗಳು, ಬಾಳೆಯ ದಿಂಡು, ತೆಂಗಿನ ಗರಿಗಳಿಂದ ಅಲಂಕೃತಗೊಂಡಿದ್ದ ರಥ ಭಕ್ತರ ಮನಸೂರೆ ಗೊಂಡಿತ್ತು. ಹೋಮ ಹವನಾದಿ, ಪೂರ್ಣಾಹುತಿ ನೀಡಿದ ನಂತರ ಪ್ರಾರಂಭಗೊಂಡ ರಥೋತ್ಸವ ತರುಣ ಭಕ್ತರ ಉತ್ಸಾಹ ಇಮ್ಮಡಿಗೊಳಿಸಿತ್ತು. ರಥಕ್ಕೆ ಟೆಂಗಿನ ಕಾಯಿ ಒಡೆದು ಉತ್ತತ್ತಿ, ಹಣ್ಣುಗಳನ್ನು ಅರ್ಿಸುತ್ತಿರುವುದು ಸಾಮಾನ್ಯವಾಗಿತ್ತು. ಪ್ರಮುಖವಾಗಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ಮುಂಬೈ, ಬೆಂಗಳೂರು, ವಿಜಯಪುರ, ಧಾರವಾಡ, ಹುಬ್ಬಳ್ಳಿ, ಪುಣೆ ಸೇರಿದಂತೆ ಅನೇಕ ಪ್ರಮುಖ ಸ್ಥಳಗಳಿಂದ ಭಕ್ತರ ದಂಡು ಕೊನೆಯ ದಿನದ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿತ್ತು.
ರಥೋತ್ಸವ ಪ್ರಾರಂಭವಾಗುತ್ತಿದ್ದಂತೆಯೇ ತರುಣ ಭಕ್ತರಿಂದ ವಾಸುದೇವ ಹರಿ ಎನ್ನುವ ಘೋಷಣೆ ಮುಗಿಲು ಮುಟ್ಟುವಂತಿತ್ತು. ಶ್ರೀ ವಿಷ್ಣುತೀರ್ಥ ಭಜನಾ ಮಂಡಳ, ಶ್ರೀ ಸುಧಾ ಭಜನಾ ಮಂಡಳದ ಸದಸ್ಯೆಯರಿಂದ , ಮಾತೆಯರು, ತರುಣ ಭಕ್ತರು ಸೇರಿದಂತೆ ಚಿಕ್ಕ ಮಕ್ಕಳಿಂದ ಕೋಲಾಟ, ಫುಗಡಿಯಾಟ ಆಕರ್ಷಣೀಯವಾಗಿತ್ತು.
ತರುಣ ಭಕ್ತರಿಂದ ಬಾರೋ ರಾಘವೇಂದ್ರಾ, ಊರಿಗೆ ಬಂದರೆ ರಾಘವೇಂದ್ರ ನಮ್ಮ ಕೇರಿಗೂ ಬಾ ರಾಘವೇಂದ್ರ, ಅಥಣಿಯೇ ಇಂದೆಮಗೆ ಮಂತ್ರಾಲಯ ಹೀಗೆ ಹತ್ತಾರು ಭಕ್ತಿ ಗೀತೆಗಳನ್ನು ಹಾಡಿ ಗಾಯನ ಸೇವೆ ಸಲ್ಲಿಸಿದರು.
ರಥೋತ್ಸವದ ನಂತರ ಸಾವಿರಾರು ಭಕ್ತರಿಗೆ ನಡೆದ ಅನ್ನಪ್ರಸಾದ ವಿತರಣೆಗೆ ನೂರಾರು ತರುಣ ಭಕ್ತರು ಟೊಂಕ ಕಟ್ಟಿ ನಿಂತಿದ್ದರು. ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮೂರು ದಿನಗಳ ಆರಾಧನಾ ಮಹೋತ್ಸವದ ಮೂರು ದಿನಗಳಲ್ಲಿ ಯಾವುದೇ ಭೇದ ಭಾವ ಇಲ್ಲದೆ 25 ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿ ಧನ್ಯರಾದರು. ಉತ್ಸವ ಸಮಿತಿ, ವಿಶ್ವಸ್ಥ ಮಂಡಳಿ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 