ವಿಶ್ವವಿದ್ಯಾಲಯದ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ : ಸಚಿವ ತಿಮ್ಮಾಪೂರ

ಜಮಖಂಡಿ 06: ಜಿಲ್ಲೆಯ ವಿಶ್ವವಿದ್ಯಾಲಯವು ವ್ಯಾಪಕವಾಗಿ ಹರಡಲು ಜಾಗೆಯ ಕೊರತೆ, ವಸತಿ ನಿಲಯ, ಶಿಕ್ಷಕರ ಕೊರತೆ, ವಿದ್ಯಾರ್ಥಿಗಳಿಗೆ ಬಸ್ಸಗಳ ಸೌಲಭ್ಯ, ಮೂಲಭೂತ ಸೌಕರ್ಯ, ಕುಡಿಯುವ ನೀರಿನ ಸಮಸ್ಯೆ, ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಆಲಿಸಿ ಸರ್ಕಾರದಿಂದ ವಿಶ್ವವಿದ್ಯಾಲಯದ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಆರ್,ಬಿ, ತಿಮ್ಮಾಪೂರ ಹೇಳಿದರು. 

ನಗರದ ವಿಶ್ವವಿದ್ಯಾಲಯದಲ್ಲಿ ನಡೆದ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟಣೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು,  

ವಿದ್ಯಾರ್ಥಿಗಳು ಸರಿಯಾದ ಮಾರ್ಗದರ್ಶನ ದಾರಿಯ ನೀಡಯದಿದ್ದರೆ. ದೇಶ ಗಂಡಾಂತರದಲ್ಲಿ ಸಿಲುಕಿದ ಹಾಗೆ. ಇಂದಿನ ದಿನಮಾನದಲ್ಲಿ ಆಹಾರ, ಗಾಳಿ, ನೀರು, ಬದಕು, ಜೀವನ, ರಾಜಕಾರಣ ಎಲ್ಲವೂ ಕಲುಷಿತಗೊಂಡಿದೆ. ಡಾ. ಅಂಬೇಡ್ಕರ್ ಅವರು ಮತ ಚಲಾಯಿಸುವ ಅದ್ಬುತ್ ಅಧಿಕಾರವನ್ನು ನೀಡಿದ್ದು ಸಮಗ್ರವಾಗಿ ಬಳಸಿಕೊಳ್ಳಿ.  ಸರಿಯಾಗಿ ಮತ ಚಲಾಯಿಸಿ ಸೂಕ್ತ ವ್ಯಕ್ತಿ ಆಯ್ಕೆ ಮಾಡಿ, ದೇಶದ ಅಭಿವೃದ್ಧಿ ನಿಮ್ಮ ಕೈಯಲ್ಲಿದೆ ಎಂದರು. 

ಸಚಿವ  ಆರ್,ಬಿ,ತಿಮ್ಮಾಪೂರ, 

ವಿದ್ಯಾಲಯಕ್ಕೆ ಕಟ್ಟಡ, ಶಿಕ್ಷಕರ, ಮೈದಾನದ ಕೊರತೆ ಗಮನಿಸಿದ್ದು ಕ್ರಮ ಕೈಗೊಳ್ಳುತ್ತೆನೆ. ಎನ್‌ಈಪಿ  ಶಿಕ್ಷಣ ಪದ್ದತಿಯಿಂದ ಅಂತಹ ಹೊಡೆತ ಏನು ಬೀಳುವುದಿಲ್ಲ. ಆದರೆ ಅದರ ಬಗ್ಗೆ ಚಿಂತನೆ ಮಾಡುತ್ತೇವೆ.  ವಿದ್ಯಾಲಯದ ಎದುರಿಗೆ ಇರುವ ಸ್ಮಶಾನದ ಬಾಗಿಲನ್ನು ಬದಲಿಸಿಲು ಅಧಿಕಾರಿಗಳ ಗಮನಕ್ಕೆ ತರುತ್ತೆನೆ.  ಸ್ಮಾರ್ಟ್‌ ಕ್ಲಾಸ್ ಒದಗಿಸುತ್ತೆನೆ, ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದ ಕಟ್ಟಕಡೆಯ ವ್ಯಕ್ತಿಗೂ ಸದೃಢವಾಗಿ ಜೀವನ ಸಾಗಿಸಲು ಯೋಜನೆ ರಚಿಸಿದ್ದು. ಇದರ ಲಾಭ ನಷ್ಟ ಪಕ್ಷಕ್ಕೆ ಬಿಡಿ. ಈಗಿನ ಶಿಕ್ಷಣ ಪದ್ಧತಿಯಲ್ಲಿ ಮುಖ್ಯವಾಗಿ ಪ್ರೀತಿ, ವಾತ್ಸಲ್ಯ ಕಡಿಮೆಯಾಗಿದ್ದು, ಕೇವಲ ಅಂಕಗಳಿಗಾಗಿ ಅಂಕಿ ಸಂಖ್ಯೆಗಳ ಬಗ್ಗೆ ಚಿಂತನೆ ಬದಲಾಗಬೇಕು. ಪಿಎಸ್‌ಐ ನಂತಹ ಹಗರಣ ತಡೆಗಟ್ಟಲು ಪರೀಕ್ಷಾ ಪದ್ಧತಿ ಬದಲಾಗಬೇಕು, ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು ಎಂದರು. 

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ತಂದೆಯವರ ಕಾಲದಲ್ಲಿ ನಿರ್ಮಾಣವಾದ ಕಟ್ಟಡ ಇಂದು ವಿಶ್ವವಿದ್ಯಾಲಯವಾಗಿ ತಲೆಎತ್ತಿ ನಿಂತಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಒಳ್ಳೆಯ ಗುಣಗಳನ್ನು, ಕೌಶಲ್ಯಗಳನ್ನು, ವ್ಯಕ್ತಿತ್ವವನ್ನು ಬೆಳಸಿಕೊಳ್ಳಬೇಕು. ಕೃಷಿ ಇಲಾಖೆಯ 35ಎಕರೆ ಜಾಗೆ ಖಾಲಿ ಬಿದ್ದಿದ್ದು. ಅದನ್ನು ವಿಶ್ವವಿದ್ಯಾಲಯಕ್ಕೆ ನೀಡುವ ಪ್ರಯತ್ನ ಮಾಡಿ ಎಂದು ಸಚಿವರ ಗಮನಕ್ಕೆ ತಂದರು. 

ಇದೇ ಸಂದರ್ಭದಲ್ಲಿ ಕುಲಸಚಿವ ಆನಂದ ದೇಶಪಾಂಡೆ, ಡಿವೈಎಸ್‌ಪಿ ಶಾಂತವೀರ ಈ, ಷಣ್ಮುಖ ಅಂಗಡಿ, ರಾಜು ಭಾಗವಾನ, ಬೆಳಗಲಿ, ಎನ್‌ಎಸ್‌ಯುಐ ಅಧ್ಯಕ್ಷ ವಿಜಯ ರೆಡ್ಡಿ, ವಿದ್ಯಾರ್ಥಿಗಳು, ಶಿಕ್ಷಕವೃಂದ ಇದ್ದರು.