ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸೂಕ್ತ ವ್ಯವಸ್ಥೆ: ಕ್ಷೇತ್ರ ಶಿಕ್ಷಣಾಧಿಕಾರಿ ಮೋರಟಗಿ

ತಾಲೂಕಿನಲ್ಲಿ 21 ಪರೀಕ್ಷಾ ಕೇಂದ್ರಗಳ ಸ್ಥಾಪನೆ: ಪರೀಕ್ಷೆ ಬರೆಯಲಿರುವ ಒಟ್ಟು 7047 ವಿದ್ಯಾರ್ಥಿಗಳು  

ಅಥಣಿ 23: ತಾಲೂಕಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 7047 ವಿದ್ಯಾರ್ಥಿಗಳು 21 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದು ಇದರಲ್ಲಿ 3357 ಜನ ಗಂಡು ಮಕ್ಕಳು, 3690 ಜನ ಹೆಣ್ಣುಮಕ್ಕಳು ಇರಲಿದ್ದಾರೆ ಎಂದು ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಬಿ ಮೋರಟಗಿ ಅವರು ಮಾಹಿತಿ ನೀಡಿದರು.  

ಅವರು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಾಲೂಕಿನಾದ್ಯಂತ 21 ಪರೀಕ್ಷಾ ಕೇಂದ್ರಗಳಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕೆಮೆರಾ ಅಳವಡಿಸಲಾಗಿದೆ, ಸಿಸಿ ಟ್ಹಿವಿ ಫುಟೇಜ್ ಕಮೀಷನರ್ ಅವರೇ ಖುದ್ದಾಗಿ ನೋಡುತ್ತಾರೆ, ದಿನಾಂಕ 25 ರಿಂದ ಪ್ರಾರಂಭವಾಗುವ ಪರೀಕ್ಷೆಗಾಗಿ ಸುವ್ಯವಸ್ಥಿತ ಮತ್ತು ಶಾಂತಿಯುತವಾಗಿ ನಡೆಸುವ ವ್ಯವಸ್ಥೆ ಮಾಡಲಾಗಿದೆ, ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಮುತ್ತ ಸಾರ್ವಜನಿಕರ ಅನಧಿಕೃತ ಪ್ರವೇಶ ನಿಷೇಧಿಸಲಾಗಿದೆ, ಪರೀಕ್ಷಾ ಕೇಂದ್ರಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ಉಚಿತ ಬಸ್ ಟಿಕೇಟ್ ವ್ಯವಸ್ಥೆ ಮಾಡಲಾಗಿದೆ, ಬಂದೋ ಬಸ್ತಿಗಾಗಿ ಪೋಲಿಸ್ ಇಲಾಖೆ ಸಹಯೋಗದಲ್ಲಿ ವ್ಯವಸ್ಥೆ ಹಾಗೂ ಎಲ್ಲ ತರಹದ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದರು.  

ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಸೇರಿ ಶಾಂತ ರೀತಿಯಾಗಿ ಸುಗಮವಾಗಿ ಯಾವುದೇ ಅಹಿತಕರ ಘಟನೆ ಜರುಗದಂತೆ ಶಿಸ್ತಿನಿಂದ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡಲಾಗಿದೆ ಎಂದರು.  

ಸುದ್ದಿಗೋಷ್ಟಿಯಲ್ಲಿ  ಶಿಕ್ಷಣ ಸಂಯೋಜಕರಾದ ನಿರಂಜನ ಬಿರಾದಾರ, ಎಸ್‌.ಪಿ.ಸನದಿ, ಅಥಣಿ ಸಿ.ಆರಿ​‍್ಪ ಎನ್‌.ಎಮ್‌.ಹಿರೇಮಠ, ಜಿ.ಎ.ಕೋಷ್ಠಿ  ಉಪಸ್ಥಿತರಿದ್ದರು.