ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ಶಿರಹಟ್ಟಿ ಮಂಡಳದ ವಿವಿಧ ಪದಾಧಿಕಾರಿಗಳ ನೇಮಕ

ಶಿರಹಟ್ಟಿ 01: ಪಟ್ಟಣದ ಶಬ್ಬೀರ ಕಾಲೋನಿಯಲ್ಲಿರುವ ಶಾಸಕರ ಗೃಹ ಕಚೇರಿಯಲ್ಲಿ ಶಿರಹಟ್ಟಿ ತಾಲೂಕಾ ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ಶಿರಹಟ್ಟಿ ಮಂಡಳದ ವಿವಿಧ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಸೋಮವಾರ ಜರುಗಿತು. 

ಶಾಸಕರುಗಳಾದ ಎಸ್‌.ವ್ಹಿ ಸಂಕನೂರು ಹಾಗೂ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿಯವರ ನೇತೃತ್ವದಲ್ಲಿ ನಡೆದ ಈ ಅಲ್ಪ ಸಂಖ್ಯಾತರ ಮೋರ್ಚಾ ಶಿರಹಟ್ಟಿ ಮಂಡಳದ ವಿವಿಧ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿ ಅಲ್ಪ ಸಂಖ್ಯಾತರ ಶಿರಹಟ್ಟಿ ಮಂಡಳದ ಅಧ್ಯಕ್ಷರನ್ನಾಗಿ ಅಕ್ಬರಸಾಬ ಯಾದಗಿರಿ, ಉಪಾಧ್ಯಕ್ಷರಾಗಿ ಅನ್ವರಸಾಬ ಶಿಗ್ಲಿ, ಉಪಾಧ್ಯಕ್ಷರುಗಳಾಗಿ ಮಹಮ್ಮದಹನೀಫ್ ಗೋನಾಳ, ಮಹಮ್ಮದಲಿ ಕುದರಿ, ಕುಬೇರ ಜಗ್ಗಣ್ಣವರ, ಹುಸೇನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾಗಿ ವಸಂತ ಪಾಟೀಲ, ದಾವಲಸಾಬ ನಧಾಫ್, ಬಾಬಾಜಾನ್ ಅಣ್ಣಿಗೇರಿ, ಸಾಗರ ಹಿರೇಗೌಡ್ರ, ಶರೀಫಸಾಬ ದೋಬಿ, ಖಜಾಂಚಿಯಾಗಿ ಮುಜಾಪರ್ ಕೊರವಗೇರಿ, ಸದಸ್ಯರುಗಳಾಗಿ ಆಶೀಪ್ ಶಿಗ್ಲಿ, ಸಲೀಂ ಮಾಳೆಕೊಪ್ಪ, ವಿನಾಯಕ ಈಟಿ, ರಫೀಕ ವಾಲಿಕಾರ, ಗುಲಾಬ್ ಮಕಾಂದಾರ, ಸಮೀರ್ ನಧಾಫ್, ಶರೀಫ್‌ಸಾಬ ಬಿಸಗತ್ತಿ, ಮಾಬುಸಾಬ ಕನಕವಾಡ, ರಾಜೇಸಾಬ ನಧಾಫ್, ಚಾಂದುಸಾಬ ನಧಾಪ್, ಮೈನು ಮುಂಡರಗಿ, ಬಾಪುಗೌಡ ಪಾಟೀಲ, ವಿನಯಕುಮಾರ ಪಾಟೀಲ್, ಖಲಂದರ್ ಕುರಿ ಇವರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 

 ಈ ಸಂದರ್ಭದಲ್ಲಿ ಜಾನು ಲಮಾಣಿ, ಫಕ್ಕೀರೇಶ ರಟ್ಟಿಹಳ್ಳಿ, ಬಸವರಾಜ ಪಲ್ಲೇದ, ನಾಗರಾಜ ಲಕ್ಕುಂಡಿ, ಯಲ್ಲಪ್ಪ ಇಂಗಳಗಿ, ಹರ್ಷು ಕಪ್ಪತ್ತನವರ, ಬಸವರಾಜ ವಡವಿ, ಬಸವರಾಜ ತುಳಿ, ಶಿವಯ್ಯ ಮಠಪತಿ, ಸುಧೀರ ಜಮಖಂಡಿ, ಸುರೇಶ ಹವಳದ, ಬಸನಗೌಡ ಪಿಡ್ಡನಗೌಡ್ರ, ನಂದಾ ಪಲ್ಲೇದ, ವಿಜಯಕ್ಕ ತಳವಾರ, ಸೇರಿದಂತೆ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಭಾಗದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.