ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ನೇಮಕ

ಮೂಡಲಗಿ 06: ದಲಿತ ಸಂಘರ್ಷ ಸಮಿತಿಯ ಕರ್ನಾಟಕ ಸಂಘಟನೆಯ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಪುರುಷ/ಮಹಿಳಾ ಸಂಘಟನೆಯ ಪದಾಧಿಕಾರಿಗಳ ನೇಮಕ ಸಭೆ ಗುರ್ಲಾಪೂರ ಪ್ರವಾಸಿ ಮಂದಿರದಲ್ಲಿ ಜರುಗಿತು.  

ಸಭೆಯಲ್ಲಿ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತ ಸಂಚಾಲಕರಾಗಿ-ಶಾನೂರ ಮ ಶಿರಹಟ್ಟಿ, ಅಲ್ಪಸಂಖ್ಯಾತರ ಜಿಲ್ಲಾ ಸಂಘಟನಾ ಸಂಚಾಲಕ-ಅಬ್ದುಲಸಾಬ್ ಅ ಮುಲ್ಲಾ, ರಮಜಾನ್ ಲಾ.ಬಿಜಾಪೂರ,  ಗೋಕಾಕ ತಾಲೂಕಾ ಸಂಚಾಲಕ-ಗಜೇಂದ್ರ ಪ.ಮಾದರ,  ಅಲ್ಪಸಂಖ್ಯಾತ ಗೋಕಾಕ ತಾಲೂಕಾ ಸಂಚಾಲಕ-ಅಬ್ದುಲ್‌ರೌಫ ನೂ ಖಾಜಿ, ಗೋಕಾಕ ತಾಲೂಕಾ ಮಹಿಳಾ ಘಟಕದ ಸಂಚಾಲಕಿ-ರೇಣುಕಾ ಪ್ರ ಹರಿಜನ, ಸಂಘಟನಾ ಸಂಚಾಲಕಿ-ಶಿವಲಿಂಗವ್ವಾ ಜೋ ಸನದಿ, ಮೂಡಲಗಿ ತಾಲೂಕಾ ಘಟಕಕ್ಕೆ ಯಲ್ಲಪ್ಪಾ ದುಂಡಪ್ಪಾ ಬಾಳವ್ವಗೋಳ,  ಮೂಡಲಗಿ ತಾಲೂಕಾ ಸಂಚಾಲ-ಬಸಪ್ಪ ಭೀಮಪ್ಪ ತಳವಾರ- ಮೂಡಲಗಿ ತಾಲುಕಾ ಸಂಘಟನಾ ಸಂಚಾಲಕರಾಗಿ ಮಂಜುನಾಥ ರ ಬಂಗೆನ್ನವರ, ಬಸವರಾಜ ಲ ತಳವಾರ, ಮಹಿಳಾ ಘಟಕದ ಸಂಚಾಲಕಿಯರಾಗಿ ಯಶೋಧಾ ಗಸ್ತಿ, ಸಂಘಟನಾ ಸಂಚಾಲಕರಾಗಿ-ದೀಪಾ ಲ.ತಳವಾರ, ವಿದ್ಯಾಶ್ರೀ ಮಾದರ, ಮೂಡಲಗಿ ತಾಲೂಕಾ ಅಲ್ಪಸಂಖ್ಯಾತರು ಸಂಚಾಲಕರಾಗಿ ಸೈಯದ ರಾ ಮಂಟೂರ, ಅಲ್ಪಸಂಖ್ಯಾತರ ಸಂಘಟನಾ ಸಂಚಾಲಕರಾಗಿ ಮದರಸಾಬ್ ನ ಜಕಾತಿ, ಉಸ್ಮಾನ ಮದಭಾವಿ, ಮಹಮ್ಮದ್ ಗುಡವಾಲೆ, ಶಮಶದ್ಧೀನ್ ಮುಲ್ಲಾ, ಖಚಾಂಚಿಯಾಗಿ ಹಸನಸಾಭ ಮುಗುಟಖಾನ, ಸದಸ್ಯರಾಗಿ ಅಬ್ಬಾಸ ರಾಮದುರ್ಗ, ಆದಂಸಾಬ ಗಡ್ಡೇಕರ, ಮಕ್ತಮ ಮದಭಾಂವಿ, ಮಹಿಬೂಬ ಮನಗೂಳಿ, ರಾಜು ಐಹೊಳೆ ಆಯ್ಕೆಗೊಂಡರು.  

ಸಭೆಯಲ್ಲಿ ರಾಜ್ಯ ಸಂಚಾಲಕ ಲಕ್ಕಪ್ಪ ತೆಳಗಡೆ ಮಾತನಾಡಿ, ಸಂಘಟನೆ ದೈಯೋದ್ದೇಶಗಳನ್ನು ವಿವರಿಸಿದ ಅವರು ಬರುವ ದಿನಗಳಲ್ಲಿ ಸಂಘಟನೆ ಬಲಿಷ್ಟಗೊಳಿಸುವಲ್ಲಿ ಪದಾಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ.  ಪ್ರತಿಯೊಬ್ಬರು ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಶಿಸ್ತು, ಸಮಯ ಪಾಲನೆ ಮಾಡಿ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು ಎಂದರು.  

ರಾಜ್ಯ ಸಂಚಾಲಕ ಬಾಳೇಶ ಬನಟ್ಟಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ.ಅಂಬೇಡ್ಕರ ಅವರುಸಂವಿಧಾನವನ್ನು ರಚಣೆ ಮಾಡುವುದರ ಮೂಲಕ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಮುದಾಯಗಳು  ಎಲ್ಲ ರಂಗಗಳಲ್ಲಿ ಪ್ರಗತಿ ಹೊಂದಲು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಡಾ.ಅಂಬೇಡ್ಕರ ಅವರ ವಿಚಾರಧಾರೆಗಳು ಸಮಾಝಕ್ಕೆ ಪ್ರಸ್ತುತವಾಗಿವೆ. ಪ್ರತಿಯೊಬ್ಬರು ಅಂಬೇಡ್ಕರ ಅವರ ಆಶಯಗಳನ್ನು ಈಡೇರಿಸಲು ಮುಂದಾಗಬೇಕು  

ಬೆಳಗಾವಿ ವಿಭಾಗೀಯ ಮಹಿಳಾ ಘಟಕ ಸಂಚಾಲಕಿ ಗೀತಾ ಸಣ್ಣಕ್ಕಿ ಮಾತನಾಡಿ, ಸಮಾಜದಲ್ಲಿ ಸರಕಾರಿ ಸೌಲಭ್ಯಗಳಿಂದ ವಂಚಿತರಾದವರಿಗೆ ಸೌಲಭ್ಯವನ್ನು ಕಲ್ಪಿಸಲು ಪದಾಧಿಕಾರಿಗಳು ಶ್ರಮಿಸಬೇಕು ಎಂದರು.  

ಈ ಸಮಯದಲ್ಲಿ ಬೆಳಗಾವಿ ವಿಭಾಗೀಯ ಅಲ್ಪಸಂಖ್ಯಾತ ಘಟಕದ ಸಂಚಾಲಕ  ಅಲ್ಲಾಭಕ್ಷ ಮುಲ್ಲಾ, ಬೆಳಗಾವಿ ಜಿಲ್ಲಾ ಸಂಚಾಲಕ ಆನಂದ ಲ ತಾಯವ್ವಗೋಳ, ಬೆಳಗಾವಿ ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ ಸಣ್ಣಕ್ಕಿ ಮತ್ತಿತರರು ಇದ್ದರು.