ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸುವಂತೆ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಕೆ

ಲೋಕದರ್ಶನವರದಿ

ಶಿಗ್ಗಾವಿ : ಪಟ್ಟಣದ ಪ್ರವಾಸಿ ಮಂದಿರದ ಹತ್ತಿರ ನೂತನ ಶಿಕ್ಷಣ ಸಚಿವರಾದ ಸನ್ಮಾನ ಸುರೇಶಕುಮಾರ ಅವರಿಗೆ ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಅರುಣ ಹುಡೇದಗೌಡ್ರ ಮತ್ತು ಕಾರ್ಯದಶರ್ಿ ರಮೇಶ ಹರಿಜನ ನೇತೃತ್ವದಲ್ಲಿ  ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸುವಂತೆ ಮತ್ತು ಬಹಳ ದಿನಗಳಿಂದ ಪರಿಹಾರವಾಗದೆ ಈ ಕೆಳಕಂಡ ಸಮಸ್ಯಗಳನ್ನು ಪರಿಹರಿಸಿ ಕೊಡುವು ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಕಠಿಣ ಬದ್ಧರಾಗಿದ್ದಿರಿ ಎಂಬ ಸಂದೇಶವನ್ನು ಶಿಕ್ಷಣ ಇಲಾಖೆಗೆ ನೀಡುತ್ತಿರಿ ಎಂಬ ಆಶಾವಾದದೊಂದಿಗೆ ಶಿಕ್ಷಣ ಮಂತ್ರಿಗಳಿಗೆ ಮನವಿಯನ್ನು ನೀಡಿದರು.

   ಸಕರ್ಾರಿ ನೌಕರರನ್ನು ಇಬ್ಬಾಗ ಮಾಡುತ್ತಿರುವ ಹಾಗೂ ನೌಕರರ ಕುಟುಂಬದ ಅವಲಭಿಂತರ ಮರಣ ಶಾಸನವಂತಿರುವ ನೂತನ ಪಿಂಚಣಿ ಯೋಜನೆಯನ್ನು ಚಳಿಗಾಲದ ಅಧೀವೆಶನದಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತನಲ್ಲಿ ಚಚರ್ಿಸಲು ಅವಕಾಶ ಕೋರಿ ರದ್ದುಗೋಳಿಸಬೇಕೆಂದು ಸಂಘವು ತಮ್ಮಲ್ಲಿ ಮನವಿ ಮಾಡುಕೊಳ್ಳುತ್ತದೆ,  ಪ್ರಾಥಮಿಕ ಹಾಗೂ ಫ್ರೌಢ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಅನಿಯಮಿತವಾಗಿ, ಹಲವಾರು ವರ್ಷಗಳಿಂದ ವೇತನ ಬಟವಣೆಯಾಗುತ್ತಿದೆ. ಇದು ಅನುದಾನದ ಕೊರತೆ. ವಿಶೇಷವಾಗಿ ಖಖಂ ಹಾಗೂ ಖಒಖಂ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ವೇತನವು ವೇಳೆಗೆ ಸರಿಯಾಗಿ  ಬಟವಣೆಯಾಗುತ್ತಿಲ್ಲ. ಖಖಂ ಮತ್ತು ಖಒಖಂ ಯೋಜನೆಗಳಾಗಿದ್ದು ಪೂರ್ವ ನಿಗಧಿಯಾಗಿ ವರ್ಷಕ್ಕೆ ಬೇಕಾಗಿರುವ ಅನುದಾನವನ್ನು ಆಥರ್ಿಕ ವರ್ಷದ ಮೊದಲೇ ಆಯಾ ಲೆಕ್ಕ ಶೀರ್ಷಕೆಅಡಿಯಲ್ಲಿ ಮುಂಗಡವಾಗಿ ನೀಡಬೇಕೆಂದು ಸಂಘವು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತದೆ,  ರಾಜ್ಯದ ಹಲವಾರು ಸಕರ್ಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾಚಾರ್ಯರ ಹುದ್ದೆಗಳು ಖಾಲಿ ಇದ್ದು ಇದರಿಂದ ಶೈಕ್ಷಣಿಕ ತೊಂದರೆಯಾಗುತ್ತಿದ್ದು ಕೊಡಲೇ ಪ್ರಾಚಾರ್ಯರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಬೇಕೆಂದು ಸಂಘವು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತದೆ, ಪಾಠ ಬೋಧನೆಯಲ್ಲಿ ಬೋಧನೆಯು ಪರಿಣಾಮಕಾರಿಯಾಗಲು ಪೀಠೋಪಕರಣಗಳ ಅವಶ್ಯಕವಾಗಿದ್ದು ಹಾಗಾಗಿ ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಫ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಶಿಕ್ಷಕರಿಗೆ ರೂ 2500/- ಪಾಠೋಪಕರಣಗಳ ತಯಾರಿಕಾ ಅನುದಾನ ಬಿಡುಗಡೆಮಾಡಬೇಕೆಂದು ಸಂಘವು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತದೆ.

  ರಾಜ್ಯದ ಹಲವಾರು ಪ್ರಾಥಮಿಕ ಮತ್ತು ಫ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇದ್ದು ಇದನ್ನು ಸಹಶಿಕ್ಷಕರು ಹೆಚ್ಚುವರಿಯಾಗಿ ನಿಭಾಯಿಸುತ್ತಿದ್ದಾರೆ, ಹಾಗಾಗಿ 2000-2001ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಪ್ರಭಾರ ಪ್ರಧಾನ ಗುರುಗಳಾಗಿ ಕಾರ್ಯನಿರ್ವಹಿಸುತ್ತಿರುವ ಸಹ ಶಿಕ್ಷಕರಿಗೆ ಕನರ್ಾಟಕ ಸೇವಾ ನಿಯಮಾವಳಿಗಳ ನಿಯಮ 32 ಮತ್ತು 68ರ ಅಡಿಯಲ್ಲಿ ಪ್ರಭಾರ ಭತ್ಯ ಮಂಜೂರ ಮಾಡಲು ಇಲಾಖೆಗೆ ಸೂಕ್ತ ನಿದರ್ೇಶನ ನೀಡಬೇಕೆಂದು ಸಂಘವು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತದೆ.

  ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ವಿಭಾಗದಿಂದ ಫ್ರೌಢ, ಫ್ರೌಢ ವಿಭಾಗದಿಂದ ಪದವಿ ಪೂರ್ವ ಕಾಲೇಜುಗಳಿಗೆ ಬಡ್ತಿಹೊಂದಿರುವ ಶಿಕ್ಷಕರನ್ನು, ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಎಲ್ಲ ಸೇವೆಯನ್ನು ಪರಿಗಣಿಸಿ ಅವರಿಗೆ 10,15,20,25,30 ವರ್ಷಗಳ ಸ್ವಯಂ ಚಾಲಿತ ಬಡ್ತಿಯನ್ನು ನೀಡಲು ಇಲಾಖೆಗೆ ಸೂಕ್ತ ನಿದರ್ೇಶನ ನೀಡಬೇಕೆಂದು ಸಂಘವು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತದೆ , ದಿ. : 01-08-2008ರ ನೇಮಕಾತಿಹೊಂದಿ ಫ್ರೌಢಶಾಲಾ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ ರೂ 400/- ಮತ್ತು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ರೂ 500/- ವಿಶೇಷ ಭತ್ಯಯನ್ನು ಮಂಜೂರಮಾಡಿ 6ನೇ ವೇತನ ಆಯೋಗದ ಶಿಫಾರಸ್ಸಿನನ್ವಯ ದಿ.:01-07-2017ರಿಂದ ಪೂವರ್ಾನ್ವಯವಾಗಿ ಒಂದು ವಿಶೇಷ ವಾಷರ್ಿಕ ಬಡ್ತಿ ನೀಡುವುದು , ಶೇ 20ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳು ಇರುವ ತಾಲೂಕಗಳಿಂದ ವಗರ್ಾವಣೆ ಇಲ್ಲ ಎಂಬ ಅಂಶ ಅವೈಜ್ಞಾನಿಕವಾಗಿದ್ದು ಕಾರಣ ಕಾಯ್ದೆಯಲ್ಲಿರುವ ಶೇ 20ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳಿರುವ ತಾಲೂಕಿನಿಂದ ವಗರ್ಾವಣೆಗೆ ಅವಕಾಶ ಇಲ್ಲ ಎಂಬ ನಿಯಮ ತೆಗೆದು ಘಟಕದೊಳಗೆ ಹಾಗೂ ಘಟಕದ ಹೊರಗೆ ವಗರ್ಾವಣೆ ತಿದ್ದುಪಡಿ ಮಾಡಿ ಶಿಕ್ಷಕರ ಸ್ನೇಹಿ ವಗರ್ಾವಣೆ ಮಾಡಲು ಸಂಘವು ತಮ್ಮಲ್ಲಿ ವಿನಂತಿಸಿಕೊಳ್ಳುತ್ತದೆ, ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6 ರಿಂದ 8ನೇ ತರಗತಿಗೆ ಬಡ್ತಿ ನೀಡಿ ನಂತರ 6 ರಿಂದ 8ನೇ ತರಗತಿ ಹೊಸ ಶಿಕ್ಷಕರನ್ನು ನೇಮಕ ಮಾಡಲು ಸೂಕ್ತ ನಿದರ್ೇಶನ ನೀಡಬೇಕೆಂದು ಸಂಘವು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತದೆ.