ವಾರ್ಡನಲ್ಲಿಯ ಹಲವಾರು ಸಮಸ್ಯೆಗಳ ಕುರಿತು ಮುಖ್ಯಾಧಿಕಾರಿಗೆ ಮನವಿ
ಲೋಕದರ್ಶನವರದಿ
ಮಹಾಲಿಂಗಪೂರ : ನಗರದ ವಾಡರ್ೊಂದರಲ್ಲಿಯ ಅವ್ಯವಸ್ಥೆಯ ಕುರಿತು ಸುವರ್ಣ ಮಹಿಳಾ ಸಂಘದ ಸದಸ್ಯರು ಹಾಗೂ ಸ್ಥಳೀಯ ಮಹಿಳೆಯರು ಸೇರಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದ 15 ನೆಯ ವಾರ್ಡ ಕಾವೇರಿ ಪ್ಲಾಟ ಜನನಿಬೀಡ ಪ್ರದೇಶವಾಗಿದೆ. ಬೀದಿ ದೀಪಗಳ ವ್ಯವಸ್ಥೆಯೂ ಸರಿಯಾಗಿಲ್ಲ ರಾತ್ರಿ ಹೊತ್ತಲ್ಲಿ ಮಹಿಳೆಯರಿಗೆ, ವೃದ್ಧರಿಗೆ, ಚಿಕ್ಕಮಕ್ಕಳಿಗೆ ಬೆಳಕಿನ ಕೊರತೆಯಿಂದ ತಿರುಗಾಡಲು ತೊಂದರೆಯಾಗುತ್ತಿದೆ.ಕುಡಿಯುವ ನೀರಿಗಾಗಿ ತೊಂದರೆಯಾಗದಂತೆ ಬೋರವೆಲ್ಲ ವ್ಯವಸ್ಥೆಯನ್ನು ಮಾಡಿ ಪರದಾಟ ತಪ್ಪಿಸಬೇಕಾಗಿದೆ.
ಈ ಭಾಗದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ನಾಗರೀಕರು ಬಯಲು ಸವಚ್ಛಕ್ಕೆ ಮೊರೆ ಹೋಗಬೇಕಾಗಿದೆ.
ಅಲ್ಲಲ್ಲಿ ಚರಂಡಿಯೊಳಗೆ ನೀರು ನಿಂತು ಹಾಗೂ ರಸ್ತೆ ತುಂಬ ಹರಿದು ಸೊಳ್ಳೆಗಳ ಕಾಟ ಮಿತಿ ಮೀರಿರುವುದರಿಂದ ಸಾಂಕ್ರಾಮಿಕ ಹಾಗೂ ಡೆಂಗ್ಯುಯಂತ ರೋಗಗಳಿಗೆ ಜನತೆಗೆ ತುತ್ತಾಗುವ ಭಯ ಕಾಡುತ್ತಿದೆ.
ಈ ಎಲ್ಲ ಸಮಸ್ಯೆಗಳಿಗೆ ಪುರಸಭೆ ಬೇಗ ಸ್ಪಂದಿಸಿ ಆಗುತ್ತಿರುವ ತೊಂದರೆ ನಿವಾರಿಸಲು ಸಂಘದ ಅಧ್ಯಕ್ಷೆ ಸುವರ್ಣ ಆಸಂಗಿ ಸ್ಥಳೀಯ ಮಹಿಳೆಯರಾದ ಲೀಲಾ ಕಲಾಲ,ಅನಿತಾ ಮುಳ್ಳುರ, ಸೀಮಾ ಮೂಡಲಗಿ, ಸವಿತ ಮುಗರ್ೊಡ್ ಕೋರಿದ್ದಾರೆ.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 