ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡುವಂತೆ ಪ್ರಾಂಶುಪಾಲರಿಗೆ ಮನವಿ
ಕೊಪ್ಪಳದ 12: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬರುವಂತಹ ಬಹುತೇಕ ವಿದ್ಯಾರ್ಥಿಗಳು ಬುಡ ಕುಟುಂಬದಿಂದ ಬಂದಿರುವಂತಹ ರಾಗಿದ್ದು, ಖರ್ಚುಗಳಿಗೂ ಸಹಿತ ತಮ್ಮ ಬಳಿ ಹಣ ಇರುವುದಿಲ್ಲ, ಪ್ರತಿ ಸೆಮಿಸ್ಟರ್ಗೂ 1300 ಎಂದರೆ ಬಡ ವಿದ್ಯಾರ್ಥಿಗಳಿಗೆ ಕಟ್ಟಲು ತೊಂದರೆ ಉಂಟಾಗುತ್ತದೆ, ಆದಕಾರಣಕ್ಕಾಗಿ ಎರಡನೇ ಸೆಮಿಸ್ಟರ್ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಕಾಲೇಜಿನ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.ವಿದ್ಯಾರ್ಥಿಗಳ ಬೇಡಿಕೆಗಳು: ಮೊದಲನೇ ಸೆಮಿಸ್ಟರ್ ಫಲಿತಾಂಶ ಬಿಡುಗಡೆಗೊಳಿಸಿ ಕಾಲೇಜಿನ ಪರೀಕ್ಷಾ ಶುಲ್ಕ ಕಡಿಮೆ ಮಾಡಬೇಕು ಈ ಸಂದರ್ಭದಲ್ಲಿ ಕಾಲೇಜಿನ ಎರಡನೇ ಸೆಮಿಸ್ಟರ್ನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.