ವಿಜಯಪುರ

ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಲು ಮನವಿ

ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಲು ಮನವಿ

ಲೋಕದರ್ಶನ ವರದಿ 

ವಿಜಯಪುರ 15 : ಗೋ ಮಾತೆಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಉತ್ತರ ಕರ್ನಾಟಕ ಕಲಾವಿದರ ಕಲ್ಯಾಣ ವೇದಿಕೆ (ರಿ) ವತಿಯಿಂದ ಅಪರ ಜಿಲ್ಲಾಧಿಕಾರಿ ಡಾ. ಓದ್ರಾಮ ಅವರಿಗೆ ಮನವಿ ಸಲ್ಲಿಸಲಾಯಿತು.  ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಶಕ್ತಿಕುಮಾರ ಉಕುಮನಾಳ ಮಾತನಾಡಿ, ಹಿಂದೂ ಧರ್ಮದಲ್ಲಿ ಗೋ-ಮಾತೆಯನ್ನು ತಾಯಿ ಎಂದು ಪೂಝಿಸುತ್ತಾರೆ, ಗೃಹ ಪ್ರವೇಶಕ್ಕೆ ಗೋ-ಮಾತೆಯನ್ನು ಪೂಜೆ ಮಾಡಲು ಮನೆಗೆ ಕರೆತರುತ್ತಾರೆ, ಹೆತ್ತ ತಾಯಿಯ ಎದೆ ಹಾಲು ನಿಂತಾಗ ಹಸುವಿನ (ಗೋ-ಮಾತೆಯ) ಹಾಲನ್ನು ಮಗುವಿಗೆ ನೀಡುತ್ತಾರೆ. ಹಬ್ಬ ಹರಿದಿನಗಳಲ್ಲಿ ಗೋ- ಮಾತೆಯನ್ನು ಲಕ್ಷ್ಮೀ ಎಂದು ಪೂಜಿಸುತ್ತಾರೆ. ಹೀಗಿರುವಾಗ ಹಸುವನ್ನು ಮತ್ತು ಎತ್ತುಗಳನ್ನು (ಬಸವಣ್ಣಗಳನ್ನು) ಸಂತೆಗಳಲ್ಲಿ ಮಾರಿದಾಗ ತೆಗೆದುಕೊಂಡು ಹೋಗಿ ಅವುಗಳನ್ನು ಕೊಯ್ದು ತಿನ್ನುತ್ತಾರೆ. ಈಗ ದೇಶದಲ್ಲಿ ಮತ್ತು ರಾಜ್ಯದಲ್ಲಿ ಹಿಂದು ಪರ ಸಂಘಟನೆಗಳು ಗೋ ಹತ್ಯೆ ಮಾಡಬಾರದೆಂದು ಹಲವಾರು ಹೋರಾಟಗಳು ನಡೆದಿವೆ.

ಹಿಂದು-ಮುಸ್ಲೀಮರ ನಡುವೆ ಸಾಕಷ್ಟು ಜಗಳಗಳು ನೆಡದಿವೆ.  ಮುಸ್ಲೀಮರು ಹೇಳುತ್ತಾರೆ, ನೀವೂ ಗೋ ವನ್ನು ರಾಷ್ಟ್ರೀಯ  ಪ್ರಾಣಿಯನ್ನಾಗಿ ಘೋಷಣೆ ಮಾಡಿ ನಾವು ಕೋಯಿವುದನ್ನು ಮತ್ತು ತಿನ್ನುವುದನ್ನು ಬಿಡುತ್ತೇವೆ ಈಗಾಗಲೇ ಕೆಲವೊಂದು ಜಿಲ್ಲೆಯಲ್ಲಿ ಮಸ್ಮಲಮಾನರು ಸ್ವಯಂ ಪ್ರೇರಿತವಾಗಿ ಗೋರಕ್ಷಣೆಗಾಗಿ ಅವರೇ ಹೋರಾಟ ಹಮ್ಮಿಕೊಳ್ಳುತ್ತಿದ್ದಾರೆ. ಹಿಂದು ಪರ ಸಂಘಟನೆಗಳು ಶ್ರೀರಾಮಸೇನೆ, ಭಜರಂಗದಳ, ಮತ್ತು ಯಾವ ಹಿಂದು ಹೋರಾಟಗಾರ ಬಾಯಲ್ಲಿ ಕೂಡಾ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಿ ಎಂದು ಕೂಗು ಕೇಳಿ ಬಂದಿಲ್ಲ. ಕೆಲವೊಂದು ರಾಜಕಾರಣಿಗಳು ತಮ್ಮಸ್ಟಕ್ಕೆ ತಾವೇ ನಾನು ಹಿಂದು ಹುಲಿ ಎಂದು ಹೇಳಿಕೊಳ್ಳುವ ಅವರ ಬಾಯಲ್ಲಿಯೂ ಕೂಡಾ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಿ ಎಂದು ಎಲ್ಲಿಯೂ ಹೇಳಿಕೆ ಕೊಟ್ಟಿಲ್ಲ. ತಮ್ಮ ರಾಜಕೀಯ ಓಟಿಗಾಗಿ ಅಧಿಕಾರಕ್ಕಾಗಿ ಹಿಂದು ಮುಸ್ಲಿಂರ ಮಧ್ಯೆ ಜಗಳ ಹಚ್ಚಿ ಮೋಜು ನೋಡುತ್ತಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಹಿಂದುಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಬೇಕೆಂದು ವಿನಂತಿಸಿದರು.  


ಸುದ್ದಿ ಓದಿ