ಅಪರಿಚಿತ ಮಹಿಳೆಯ ಶವದ ವಾರಸುದಾರರ ಪತ್ತೆಗೆ ಮನವಿ
Appeal to find heirs of unidentified woman's body
ಅಪರಿಚಿತ ಮಹಿಳೆಯ ಶವದ ವಾರಸುದಾರರ ಪತ್ತೆಗೆ ಮನವಿ
ಕೊಪ್ಪಳ 18 : ತಳಕಲ್ ರೈಲ್ವೇ ನಿಲ್ದಾಣದಲ್ಲಿ ಅಕ್ಟೋಬರ್ 14 ರಂದು ಸುಮಾರು 45 ರಿಂದ 50 ವರ್ಷದ ಅಪರಿಚಿತ ಮಹಿಳೆಯು ಯಾವುದೋ ರೈಲು ಗಾಡಿಗೆ ಸಿಕ್ಕು ಮೃತಪಟ್ಟಿದ್ದು, ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರುವುದಿಲ್ಲ. ಈ ಬಗ್ಗೆ ಗದಗ ರೈಲ್ವೇ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ: 40/2025 ಕಲಂ: 194 ಬಿ.ಎನ್.ಎಸ್.ಎಸ್. ಅಡಿ ಪ್ರಕರಣ ದಾಖಲಾಗಿದೆ.
ಮೃತ ಮಹಿಳೆಯ ಚಹರೆ:
ಮೃತ ಮಹಿಳೆಯು ಅಗಲವಾದ ಮುಖ, ಅಗಲವಾದ ಮೂಗು, ಸಾದಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಸುಮಾರು 5.1 ಅಡಿ ಎತ್ತರವಿದ್ದು, ತಲೆಯಲ್ಲಿ ಸುಮಾರು 7-8 ಇಂಚಿನಷ್ಟು ಕಪ್ಪು, ಬಿಳಿ ಮಿಶ್ರಿತ ಕೂದಲು ಇರುತ್ತವೆ. ಮೃತರ ಮೈಮೇಲೆ ಒಂದು ನೀಲಿ ಕಲರಿನ ಬ್ಲೌಸ್, ಒಂದು ಹಳದಿ ಬಣ್ಣದ ಲಂಗ, ಗುಲಾಬಿ ಬಣ್ಣದ ಸೀರೆ ಧರಿಸಿದ್ದಾರೆ.
ಮೇಲ್ಕಂಡ ಚಹರೆ ಪಟ್ಟಿಗೆ ಹೋಲಿಕೆಯಾಗುವಂತಹ ಮಹಿಳೆ ಕಾಣೆಯಾಗಿದ್ದಲ್ಲಿ, ಸಂಬಂಧಿಕರು ಹಾಗೂ ವಾರಸುದಾರರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಗದಗ ರೈಲ್ವೇ ಪೊಲೀಸ್ ಠಾಣೆ ದೂ.ಸಂ: 08372-278744, ಮೊ.ಸಂ: 9480802128, ಇ-ಮೇಲ್: ರಚಿಜಚಿರಡಿಟಥಿಅಠಿ.ರಠ.ಟಿ ಅಥವಾ ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ: 080-22871291 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗದಗ ರೈಲ್ವೇ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 