ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ 19 ರಂದು ಕೇಂದ್ರ ಸರ್ಕಾರದ ವಿರುದ್ಧ ಅಂಜುಮನ್-ಎ-ಇಸ್ಲಾಂ ಪ್ರತಿಭಟನೆ
ಗದಗ-17: ದೇಶದ ಕೋಟ್ಯಾಂತರ ಮುಸ್ಲಿಂ ಸಮುದಾಯದ ಜನರ ವಿರೋಧದ ನಡುವೆಯು ನಮ್ಮ ದೇಶದ ಸಂವಿಧಾನದ ವಿರುಧ್ದವಾಗಿ ಕರಾಳ ವಕ್ಫ್ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವುದನ್ನು ನಾವು ಖಂಡಿಸುತ್ತೇವೆ,ಒಂದು ಸಮುದಾಯವನ್ನು ಹತ್ತಿಕ್ಕುವ ಉದ್ದೇಶದಿಂದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದು ಬಲವಂತವಾಗಿ ಮುಸ್ಲಿಂ ಸಮಾಜದ ಮೇಲೆ ಈ ಕಾಯ್ದೆಯನ್ನು ಹೇರಲಾಗುತ್ತಿದೆ, ಕೊಡಲೇಕೇಂದ್ರ ಸರ್ಕಾರದೇಶದ ಮುಸ್ಲಿಂ ಸಮುದಾಯಕ್ಕೆ ಮಾರಕವಾಗಿರುವ ಕರಾಳ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಅಂಜುಮನ್-ಎ-ಇಸ್ಲಾಂ ಸಂಸ್ಥೆ ನೇತೃತ್ವದಲ್ಲಿ 19-04-2025 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಮಿಯತ್-ಎ-ಉಲ್ಲಮಾ ಗದಗ ಜಿಲ್ಲಾ ಘಟಕದ ಕಾರ್ಯದರ್ಶಿಯಾದ ಮೌಲಾನಾ ಮುಫ್ತಿ ಆರೀಫ ಕಾಶ್ಮಿ ಧಾರವಾಡ ಆವರು ಹೇಳಿದರು.
ಅಂಜುಮನ್ ಸಂಸ್ಥೆ ಕಾರ್ಯದರ್ಶಿ ಇಮ್ತಿಯಾಜ.ಆರ್.ಮಾನ್ವಿ ಮಾತನಾಡಿ ದೇಶದಲ್ಲಿರುವ ವಕ್ಫ್ ಆಸ್ತಿಗಳನ್ನು ಈ ಕಾಯ್ದೆ ಮುಖಾಂತರ ಕಬಳಿಸಿ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವ ಕೆಟ್ಟ ಉದ್ದೇಶವಾಗಿದೆ. ಸಂವಿಧಾನ ವಿರೋಧಿ ವಕ್ಫ್‌ಕಾಯ್ದೆ ವಿರೋಧಿಸಿ ಹಾಗೂ ಪ್ರವಾದಿ ಪೈಗಂಬರವರಕುರಿತು ಅವಹೇಳನಕಾರಿ ಮಾತನಾಡಿರುವ ಕೋಮುವಾದಿ ಬಸನಗೌಡ ಪಾಟೀಲ ಯತ್ನಾಳ ಮೇಲೆ ನಮ್ಮರಾಜ್ಯದ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಿನಾಂಕ: 19-04-2025 ರಂದು ಶನಿವಾರ 11-00 ಘಂಟೆಗೆ ಮುಳಗುಂದ ನಾಕಾದಲ್ಲಿರುವ ಶಾಹಿ ಈದ್ಗಾ ಮೈದಾನದಿಂದರಾ್ಯಲಿಯನ್ನು ಪ್ರಾರಂಭಿಸಿ ಟಿಪ್ಪುಸುಲ್ತಾನ ಸರ್ಕಲ್ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ವಕ್ಫ್‌ತಿದ್ದುಪಡಿಕಾಯ್ದೆಯನ್ನುಕೊಡಲೇ ಹಿಂಪಡೆಯಬೇಕೆಂದು ಮನವಿ ನೀಡಿ ಆಗ್ರಹಿಸಲಾಗುವುದೆಂದು ಹೇಳಿದರು.
ಅಂಜುಮನ್-ಎ-ಇಸ್ಲಾಂ ಸಂಸ್ಥೆ ಅಧ್ಯಕ್ಷರಾದ ಮಹ್ಮದಯುಸುಫ ನಮಾಜಿ, ಸಮಾಜದ ಮುಖಂಡರಾದ ಸೈಯದಖಾಲೀದ ಕೊಪ್ಪಳ, ಎಂ.ಬಿ.ನದಾಫ ವಕೀಲರು ಮಾತನಾಡಿ ಹೋರಾಟದಲ್ಲಿಗದಗ-ಬೆಟಗೇರಿಎಲ್ಲಾ ಜಮಾತಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸರ್ವ ಸದಸ್ಯರು, ಸಮಾಜದ ಹಿರಿಯರು ಮತ್ತುಯುವಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು, ಅಂಜುಮನ ಸಂಸ್ಥೆ ಉಪಾಧ್ಯಕ್ಷ ಬಾಬಾಜಾನ ಬಳಗಾನೂರ, ಜೂನಸಾಬ ಉಮಚಗಿ, ಎಂ.ಎಂ.ಮಾಳೆಕೊಪ್ಪ, ರಫೀಕ ಜಮಾಲಖಾನವರ, ಉಮರ ಫಾರುಖ ಹುಬ್ಬಳ್ಳಿ, ಅನ್ವರ ಶಿರಹಟ್ಟಿ, ಮಹ್ಮಮದ ಹನೀಫ ಶಾಲಗಾರ, ನಿಜಾ ಮುದ್ದಿನ ಕಾಟಾಪೂರ ಮುಂತಾದವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.