ಘಟಪ್ರಭಾ: ಸಂಭ್ರಮದ ಅಂಭಾ ಭವಾನಿ ಜಾತ್ರೆ
ಲೋಕದರ್ಶನ ವರದಿ
ಘಟಪ್ರಭಾ 30: ಸ್ಥಳೀಯ ಗೊಂದಳಿ ಗಲ್ಲಿಯಲ್ಲಿರುವ ಅಂಭಾ ಭವಾನಿ ಜಾತ್ರೆಯು ಮಂಗಳವಾರದಂದು ಅತೀ ವಿಜೃಂಭಣೆಯಿಂದ ಜರುಗಿತು.
ಮುಂಜಾನೆ ಅಂಭಾ ಭವಾನಿಗೆ ರುದ್ರಾಭಿಷೇಕ, ಮಹಾ ಪೂಜೆ ಜರುಗಿತು. ನಂತರ ಶ್ರೀ ಅಂಭಾ ಭವಾನಿಯ ಭಾವ ಚಿತ್ರದ ಭವ್ಯ ಮೇರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪಿತು. ನಂತರ ಮಹಾಪ್ರಸಾದ ಜರುಗಿತು.
ಈ ಸಂದರ್ಭದಲ್ಲಿ ಮರಾಠಾ ಗೊಂದಳಿ ಸಮಾಜದ ಹಿರಿಯರಾದ, ಬಾಳುಮಹಾರಾಜ ಬೋಸಲೆ, ಯಲಪ್ಪ ಗುರುವ, ಶಿವಾಜಿ ಗೊಂದಳಿ, ಮಾಣಿಕ ಬೀಸೆ, ಶಿವಾಜಿ ಬೋಸಲೆ, ಸಿದ್ದೇಶ್ವರ ಬೋಸಲೆ, ಯಮನೂರ ವಾಕೋಡೆ, ರಾಜು ಗೊಂದಳಿ, ಸುರೇಶ ಗುರುವ, ಸೇರಿದಂತೆ ಅನೇಕ ಗೊಂದಳಿ ಸಮಾಜದ ಬಾಂಧವರು ಇದ್ದರು. ಯುವಕರು ಅತೀ ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡು ಜೈಶಿವಾಜಿ, ಜೈ ಭವಾನಿ ಎಂಬ ಜೈಕಾರ ಕೂಗುತ್ತಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 