ಅದ್ದೂರಿಯಾಗಿ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ: ಭಾವಚಿತ್ರಕ್ಕೆ ಪೂಜೆ

ಉಗರಗೋಳ 21: ಸಂತೋಷ, ಖುಷಿ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಒಳಗಿರುವ ಅಕ್ಷಯಪಾತ್ರೆ. ಅದು ಎಂದಿಗೋ ಬರಿದಾಗುವುದಿಲ್ಲ. ತನ್ನಲ್ಲಿರುವ ಜ್ಞಾನದ ಖುಷಿಯನ್ನು ಇತರರೊಂದಿಗೆ ಹಂಚುವ ಮೂಲಕ ಇನ್ನೊಬ್ಬರ ಮೊಗದಲ್ಲಿ ಸಂತೋಷವನ್ನು ಕಾಣುವವನೇ ನಿಜವಾದ ಜ್ಞಾನಿ ಎಂದು ರೇಣುಕಾ ಯಲ್ಲಮ್ಮಾ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ ಹೇಳಿದರು. 

ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ರವಿವಾರ ರಂದು ದೇವಸ್ಥಾನದ ಆವರಣದಲ್ಲಿ ನಿಜಶಿವಶರಣ ಅಂಬಿಗರ ಚೌಡಯ್ಯನವರ ಪೋಟೊಕ್ಕೆ ಪೂಜೆ ಮಾಡಿ ಅದ್ದೂರಿಯಾಗಿ ಜಯಂತೋತ್ಸವವನ್ನು ಆಚರಿಸಲಾಯಿತು. 

ಅಂಬಿಗರ ಚೌಡಯ್ಯನವರು ಅಂತರಂಗದಲ್ಲಿ ಮಾನವಿಯ ಮೌಲ್ಯಗಳನ್ನು ಬೆಳಸಿಕೊಂಡಿದ್ದ ಶರಣರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ ಎಂದರು. 

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ವಾಯ್‌. ವಾಯ್‌. ಕಾಳಪ್ಪನವರ, ದೇವಸ್ಥಾನ ಅಧೀಕ್ಷಕಿ ನಾಗರತ್ನಾ ಚೋಳಿನ, ರೇಣುಕಾ ಶಿಂತ್ರಿ, ಮೌಳೇಶ ಸುಣಗಾರ, ಪಕ್ಕೀರ​‍್ಪ ಯಕ್ಕುಂಡಿ, ಶಿವಣ್ಣಾ ಬಡಿಗೇರ, ಚಂದ್ರ ಹಿರೇಕೆಂಚಣ್ಣವರ, ಅನೀಲ ಗುಡಿಮನಿ, ಜಿ ಜಿ ರೆಣ್ಕೀಗೌಡ್ರ, ಪಂಡಿತ ಯಡೂರಯ್ಯ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.