ಹೊಳಗುಂದಿ ಯಲ್ಲಿ ಅಂಬೇಡ್ಕರ್ ಜಯಂತಿ
Ambedkar Jayanti in Holgundi
ಹೂವಿನಹಡಗಲಿ 19: ತಾಲ್ಲೂಕಿನ ಹೊಳಗುಂದಿ ಗ್ರಾಮದಲ್ಲಿ ಜೈ ಭೀಮ್ ಯೂತ್ಸ್ ಕ್ಲಬ್ ನಿಂದ ಶನಿವಾರ ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು ಕಳಸ ತಮಟೆ,ಡೊಳ್ಳು ನೊಂದಿಗೆ ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ಭಾವ ಚಿತ್ರ ಮೆರವಣಿಗೆ ಯಲ್ಲಿ ಸಿಪಿಐ ಮಲ್ಲಪ್ಪ ಹೂಗಾರ, ಪಿಎಸ್‌ಐ ಮಣಿಕಂಠ, ಪಂಚಾಯ್ತಿ ಪಿಡಿಒ ಮರಮೇಶಪ್ಪ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಇದೇ ವೇಳೆ ಚಿತ್ರಕಲಾ ಶಿಕ್ಷಕ ದ್ವಾರಕೀಶ್ ರೆಡ್ಡಿ, ಶಿಕ್ಷಕ ಕೊಟ್ರೇಶ ಮಾತನಾಡಿ ಸಂವಿಧಾನದ ಶಿಲ್ಪಿ ಯಾಗಿದ್ದ ಅಂಬೇಡ್ಕರ್ ಅವರು ಜಾತಿ ಪದ್ದತಿ ಮತ್ತು ಅಸ್ಪೃಶ್ಯತೆ ವಿರುದ್ದ ಹೋರಾಡಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ಒದಗಿಸಿಕೊಟ್ಟ ಮಹಾನ್ ನಾಯಕರಾಗಿದ್ದರು ಎಂದರು.
ನವೀನ ಕೃಷ್ಣಾ ಪ್ರಾಸ್ತಾವಿಕ ನಂತರ ದ್ವಾರಕೀಶ್ ಕ್ರಾಂತಿ ಗೀತೆಗಳನ್ನು ಹಾಡಿದರು, ಎ ಲಕ್ಷ್ಮಣ ನಿರ್ವಹಿಸಿದರು , ಎಸ್ ಬಿ ಗುರುಬಸವರಾಜ ಸ್ವಾಗತಿಸಿದರು, ಸಿ ಗುರುರಾಜ ವಂದಿಸಿದರು, ಜೈ ಭೀಮ್ ಯೂತ್ ಕ್ಲಬ್ ಅಧ್ಯಕ್ಷ ಎ ವಿಶ್ವನಾಥ,ರೈತ ಸಂಘದ ಎಂ.ಶಿವರಾಜ, ಗ್ರಾ.ಪಂ ಮಾಜಿ ಅಧ್ಯಕ್ಷ ಎ ದಡಾರ್ಪ,ಯಮುನಪ್ಪ, ದಲಿತ ಸೇನೆಯ ಸಿ ದುರುಗೇಶ್,ಬುಳ್ಳಪ್ಪ, ಎಂ ರಾಜಪ್ಪ,ಕೆ ಅಜ್ಜಪ್ಪ, ಎಂ ಸ್ವಾಮಿ, ಶಿವಕುಮಾರ,ಅಜ್ಜಯ್ಯ, ದೇವರಾಜ, ಎಂ ದುರುಗೇಶ, ಎಂ ಲೋಕೇಶ್,ಸಿ ಸಿದ್ದಲಿಂಗಸ್ವಾಮಿ,ಟಿ ಹನುಮಂತಪ್ಪ,ಶಾಂತಪ್ಪ, ರಾಜನಗೌಡ ಪಾಟೀಲ್,ಮಂಜುನಾಥ,ಮಹಾಂತೇಶ,ಗ ಣೇಶ,ಅಜಯ್,ನಿಂಗರಾಜ,ಪರಶುರಾ ಮ, ಹರ್ಷ, ಆದಿ, ಸಂತೋಷ, ಇತರರು ಇದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 