ಬೆಂಗಳೂರು, ಜ.16 : ಚಿತ್ರದ ಆಡಿಷನ್ ಇದೆ ಎಂದು ಕರೆಯಿಸಿ ತಮ್ಮ ಮಗಳ ಮೇಲೆ ನೃತ್ಯ ಸಂಯೋಜಕನೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನೃತ್ಯ ಸಂಯೋಜಕ ಪವನ್ ಎಂಬುವವರ ವಿರುದ್ಧ ನಗರದ ಅನ್ನಪೂಣರ್ೆಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ನೃತ್ಯ ಸಂಯೋಜಕ ಪವನ್ ಅವರ ಬಳಿ ಯುವತಿ ನೃತ್ಯ ಕಲಿಯುತ್ತಿದ್ದರಿಂದ ಇಬ್ಬರಿಗೂ ಪರಿಚಯವಿತ್ತು. ಹೀಗಾಗಿ ಇದೇ ತಿಂಗಳ 12ರಂದು ಚಿತ್ರವೊಂದರಲ್ಲಿ ತಂಗಿಯ ಪಾತ್ರಕ್ಕೆ ಆಡಿಷನ್ ಇದೆ ಎಂದು ಕರೆ ಮಾಡಿ ಪವನ್, ಯುವತಿಯನ್ನು ಕರೆಸಿಕೊಂಡಿದ್ದನು.
ನಂತರ ತನ್ನ ಸ್ನೇಹಿತನನ್ನು ತೋರಿಸಿ ನಿದರ್ೆಶಕ ಎಂದು ಮಾತನಾಡಿಸಿ, ಬಳಿಕ ಯುವತಿಗೆ ಪ್ರಜ್ಞೆ ತಪ್ಪುವ ಔಷಧಿ
ಬೆರೆಸಿದ ನೀರು ಕುಡಿಸಿ, ಅತ್ಯಾಚಾರವೆಸಗಲಾಗಿದೆ ಎಂದು ಆಕೆಯ ಪೋಷಕರು ಪವನ್ ವಿರುದ್ಧ ಆರೋಪಿಸಿದ್ದಾರೆ.
ಸದ್ಯ ಅನ್ನಪೂಣರ್ೆಶ್ವರಿ ನಗರ ಪೊಲೀಸರು ನೃತ್ಯ ಸಂಯೋಜಕ ಪವನ್ ಅವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.