ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ  All India Farmers' Agricultural Workers' Organization

ಧಾರವಾಡ 16 : ಧಾರವಾಡ / ಹುಬ್ಬಳ್ಳಿ  ಖರೀದಿ ಕೇಂದ್ರದಲ್ಲಿ ಕಡಲೆ ಖರೀದಿಯನ್ನು  ಚೀಲ ಇಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿ ಸ್ಥಗಿತಗೊಳಿಸಿರುವುದನ್ನು ಈ ಕೂಡಲೇ ಪ್ರಾರಂಭಿಸಲು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ  ಪ್ರತಿಭಟನೆ ಮಾಡಿ ಅಪಾರ ಜಿಲ್ಲಾಧಿಕಾರಿಗಳಾದ  ಶ್ರೀಮತಿ ಗೀತಾ ಸಿ ಡಿ ಅವರಿಗೆ  ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ  ಜಿಲ್ಲಾಧ್ಯಕ್ಷರಾದ  ದೀಪಾ ಧಾರವಾಡ, ಕಾರ್ಯದರ್ಶಿ ಶರಣು  ಗೋನವಾರ, ಜಿಲ್ಲಾ ಸಮಿತಿ ಸದಸ್ಯರಾದ  ರಾಣಪ್ಪ ಸಾವಂತನೂರ, ಬಸವರಾಜ ಹೊಗೆಣ್ಣವರ, ಮಂಜುನಾಥ ತಿಮ್ಮಾಪುರ, ಶಂಕ್ರ​‍್ಪ ಮುಂತಾದವರು ಇದ್ದರು.

ರೈತರ ಬದುಕು ದಿನದಿಂದ ದಿನಕ್ಕೆ ಹೀನಾಯ ಪರಿಸ್ಥಿತಿ ತಲುಪುತ್ತಿದೆ. ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ಸರಕಾರದ ಆಸರೆ ಇಲ್ಲದೆ ರೈತರು ಕಂಗಲಾಗಿದ್ದಾರೆ.  ಸರಿಯಾದ ಸಮಯಕ್ಕೆ ಬೀಜ,ಗೊಬ್ಬರ ಸಿಗದೇ ಹಾಗೂ ಹೀಗೂ ಬೆಳೆದಂತ ಬೆಳೆಗಳಿಗೆ ಖರೀದಿ ಕೇಂದ್ರದಲ್ಲಿ ಖರೀದಿ ಮಾಡಲು ನೊಂದಣಿ ಮಾಡಿಸಿದರು ಕ್ಷುಲ್ಲಕ ಕಾರಣ ನೀಡಿ ಖರೀದಿಯೂ ಸರಿಯಾಗಿ ನಡೆಯುತ್ತಿಲ್ಲ. ಈ ಬಾರಿ ಧಾರವಾಡ ಜಿಲ್ಲೆಯಾದ್ಯಂತ ಕಡಲೆ ಬೆಳೆಯನ್ನು ಬೆಳೆದ ರೈತರು ಫೆಬ್ರವರಿ ತಿಂಗಳಲ್ಲೇ ಖರೀದಿ ಕೇಂದ್ರಗಳಲ್ಲಿ ಹೆಸರನ್ನು ನೋಂದಾಯಿಸಿದ್ದಾರೆ.

ಹೆಸರನ್ನು ನೋಂದಾಯಿಸಿ ಖರೀದಿಯನ್ನು ಮಾರ್ಚ್‌ ತಿಂಗಳಲ್ಲೇ ಪ್ರಾರಂಭ ಮಾಡಿದ್ದರೂ,ಕಳೆದ ಎರಡು ತಿಂಗಳಲ್ಲಿ ಮೂರು ಬಾರಿ ಖರೀದಿಯನ್ನು  ಚೀಲ ಇಲ್ಲ ಎನ್ನುವ ಕುಂಟು ನೆಪ ನೀಡಿ  ಸ್ಥಗಿತಗೊಳಿಸಿದ್ದಾರೆ. ಇದು ಸರ್ಕಾರದ ರೈತರ ಮೇಲೆ ಇರುವ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಹೇಳಲು ನಾವು ವಿಷಾದಿಸುತ್ತೇವೆ. ನೋಂದಣಿ ಮಾಡಿಸಿದಾಗಲೇ ಎಷ್ಟು ಚೀಲಬೇಕು ಎನ್ನುವುದರ ವಿವರ ಪಡೆಯದೆ ಅದನ್ನು ಸರಿಯಾಗಿ ಸರಬರಾಜು ಮಾಡದೆ ಸರ್ಕಾರ ದಿವ್ಯ ನಿರ್ಲಕ್ಷವನ್ನು ತೋರಿದೆ. ತಿಂಗಳಗಟ್ಟಲೆ ನೊಂದಣಿ ಮಾಡಿಸಿದ ರೈತರು ಮನೆಯಲ್ಲೇ ಕಾಳುಗಳನ್ನು ಶೇಖರಿಸಿ ಕಾಯುತ್ತಿದ್ದಾರೆ.

ಅಷ್ಟೇ ಅಲ್ಲದೆ ಕಡಲೆ, ಹುಳಕಾಟ ದಿಂದಾಗಿ ಹಾಳಾಗುತ್ತಿದೆ. ಇನ್ನು ಏಪ್ರಿಲ್ 29 ಖರೀದಿ ಮಾಡುವ ಕೊನೆಯ ದಿನವನ್ನು ನಿಗದಿಪಡಿಸಿದೆ. ಇದರಿಂದಲೂ ರೈತರು ಖರೀದಿ ನಡೆಯುತ್ತದೋ ಇಲ್ಲವೋ ಎನ್ನುವ ಆತಂಕದಲ್ಲಿದ್ದಾರೆ. ಆದ್ದರಿಂದ ಕೂಡಲೇ ಮಾನ್ಯ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ. ಬೇಡಿಕೆಗಳು1. ಈ ಕೂಡಲೇ ಖರೀದಿ ಕೇಂದ್ರದಲ್ಲಿ ಕಡಲೆ ಯನ್ನು ಖರೀದಿ ಮಾಡಬೇಕು.

2. ನೊಂದಣಿ ಮಾಡಿಸಿದ ರೈತರ ಪಾಳೆ ಪ್ರಕಾರ ಕಡಲೆಯನ್ನು ಖರೀದಿ ಮಾಡಬೇಕು.3. ನೋಂದಾಯಿಸಿದ ಎಲ್ಲಾ ರೈತರ ಬೆಳೆಯನ್ನು ಖರೀದಿ ಮಾಡಲೇಬೇಕು.4. ಈಗಾಗಲೇ ಖರೀದಿ ಮಾಡಿರುವ ಕಡಲೆ ಬೆಳೆಯ ಹಣವನ್ನು ಕೂಡಲೇ ರೈತರ ಖಾತೆಗೆ ಜಮ ಮಾಡಬೇಕು.5. ಖರೀದಿಯ ಕೊನೆಯ ದಿನಾಂಕವನ್ನು ವಿಸ್ತರಿಸಬೇಕು. ವಂದನೆಗಳೊಂದಿಗೆ ಸುದ್ದಿ ಇವರಿಂದ  ಹನುಮೇಶ ಜಿಲ್ಲಾ ಸಮಿತಿ ಪರವಾಗಿಅ