ದೇಶದ ಹಿತಕ್ಕಾಗಿ ಸಮಾಜದ ಒಳಿತಾಗಿ ಮುನ್ನಡೆಯಿರಿ: ಚಂದ್ರಶೇಖರ ಸ್ವಾಮೀಜಿ

ಮುಧೋಳ 21: ಸಮಾಜದ ಒಳಿತಿಗಾಗಿ, ನಾಡಿನ ಹಿತಕ್ಕಾಗಿ, ಹೆತ್ತವರಿಗೆ ಆಸರೆಯಾಗಿ ನಿಲ್ಲುವಂತ ವಿದ್ಯಾರ್ಥಿಗಳು  ಈ ದೇಶದ ಶಕ್ತಿ ಅಂತಹ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಬದುಕು ಕಟ್ಟಿಕೊಡುವ ನೈತಿಕ ಬಲದ ಶಿಕ್ಷಣ ನೀಡುತ್ತಾ ಯಾವೂದೇ ಫಲಾಪೇಕ್ಷವಿಲ್ಲದೆ ಸಮಾಜ ಗೌರವಿಸುವ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಿರುವ ತ್ರಿವೇಣಿ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು  ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಮಠದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು 

ಬುಧವಾರ ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಶ್ರೀ ಸಂಗಮನಾಥ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳ ಬೀಳ್ಕೊಡಿಗೆ, ಮಾತೃ ವಂದನಾ ಕಾರ್ಯಕ್ರಮ ನಿಮಿತ್ಯ ನಡೆದ ಅಮ್ಮನ ಕೈತುತ್ತು-2024ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಿಸ್ತು,ಸಮರಾ​‍್ಣ ಗುಣ ಅಳವಡಿಸಿಕೊಂಡು ವಿದ್ಯಾರ್ಥಿಗಳು ಸಮಾಜ ಪ್ರೀತಿಸುವ ವ್ಯಕ್ತಿಗಳಾಗಬೇಕು ಈ ನಿಟ್ಟಿನಲ್ಲಿ ತಾಯಂದಿರ ಪಾತ್ರ ಅತಿ ಮುಖ್ಯವಾಗಿದೆ.ಮಕ್ಕಳಿಗೆ ಕೈತುತ್ತು ನೀಡಿ ದೇಶಿಯ ಸಂಸ್ಕೃತಿಯನ್ನು ಕಲಿಸಿಕೊಟ್ಟರೆ ಮಕ್ಕಳು ಸಮಾಜದ ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆಯುತ್ತಾರೆ, ಇರಲು ಸ್ಥಳ,ಗಾಳಿ,ಜಲ,ಅನ್ನ ಕೊಟ್ಟ ದೇಶವನ್ನು ಪ್ರೀತಿಸುತ್ತಾ ಭಾಷೆಯನ್ನು ಬೆಳೆಸುತ್ತಾ ನಾಡಿನಲ್ಲಿ ಒಂದು ಶಕ್ತಿಯಾಗಿ ವಿದ್ಯಾರ್ಥಿಗಳು ಬೆಳಯಬೇಕು ಶ್ರೀ ಸಂಗಮನಾಥ ಶಾಲೆ ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದು ಇನ್ನೂ ಎತ್ತರೆತ್ತರಕ್ಕೆ ಬೆಳೆಯಲಿ ಎಂದು ಹೇಳಿದರು. 

ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳಿಗೆ ಶಿಕ್ಷಣವನ್ನು ಕೇವಲ ಅಂಕ ಗಳಿಸಲು ಮಾತ್ರವಲ್ಲ ನೈತಿಕ ಬಲದ ಮೇಲೆ ಬದುಕು ಕಟ್ಟಿಕೊಡಬೇಕು ಎನ್ನುವ ಸದುದ್ದೇಶದಿಂದ ಪ್ರತಿವರ್ಷ ಶಾಲೆಯಲ್ಲಿ ಅಳಿಸಿ ಹೋಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಮರೆತು ಹೊರಟಿರುವ ಅಮ್ಮನ ಕೈತುತ್ತುನ್ನು ನೆನಪಿಸಲು ಅಮ್ಮನ ಕೈತುತ್ತು, ತಾಯಂದಿರ ಪಾದಪೂಜೆ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದು ಇದರಿಂದ ಮಕ್ಕಳಲ್ಲಿ  ಹೆತ್ತವರು ಹಾಗೂ ಹಿರಿಯರಿಗೆ ಗೌರವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನ ಮಾಡುತ್ತಾ ಬಂದಿದ್ದೇವೆ. ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಬದಕು ಕಟ್ಟಿಕೊಡುವ ಶಿಕ್ಷಣ ನೀಡಲು ಸಂಸ್ಥೆ ಸಹಕಾರ ನೀಡುತ್ತಾ ಬಂದಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ನೂತನ ನ್ಯಾಯಾದೀಶ ಶೃತಿ ಬಿ.ತೇಲಿ ಮಾತನಾಡಿ ಕನ್ನಡ ಮಾಧ್ಯಮದಲ್ಲಿ ಕಲಿತು ಸಾಧನೆ ಮಾಡಬಹುದು ಎನ್ನಲು ನಾನೇ ಉದಾಹರಣೆ ನಿರಂತರ ಓದು ನಮ್ಮ ನೈತಿಕ ಬಲವನ್ನು ಹೆಚ್ಚಿಸುತ್ತದೆ ಸಾಧನೆಗೆ ರಹದಾರಿಯಾಗುತ್ತದೆ ಎಂದು ಹೇಳಿದರು. 

ತಾಲ್ಲೂಕಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ, ಅಡವಿಸಿದ್ದೇಶ್ವರ ಸಂಸ್ಥೆಯ ಆಧ್ಯಕ್ಷ ಚಿದಾನಂದ ಪಾಟೀಲ್, ಸಮಾಜ ಸೇವಕ ಪ್ರಭು ಅವಟಿ, ಆಡಳಿತಾದಿಕಾರಿ ವೆಂಕಟೇಶ ಗುಡೆಪ್ಪನವರ ಇದ್ದರು. 

ವರ್ಷಾ ನರೋಜಿ, ಭಾಗ್ಯ ಗಣಾಚಾರಿ ಸ್ವಾಗತಿಸಿ,ಪಲ್ಲವಿ ಬಸವನಾಳ, ರಶ್ಮಿ ಜಾದವ ನಿರೂಪಿಸಿ, ಸಿಂಜನಾ ವಾಘ್ಮೋರೆ, ತನುಶ್ರೀ ಗಾಯಕವಾಡದಿಂದ ಪ್ರಶಸ್ತಿ ವಿತರಣೆ ಶ್ರೀರಕ್ಷಾ ಗುಲಗಾಲಜಂಬಗಿ, ಆಶ್ವಿನಿ ಗಣಿ ವಂದಿಸಿದರು. 

ಇದೇ ಸಂದರ್ಭದಲ್ಲಿ ನೂತನವಾಗಿ ನ್ಯಾಯಾದೀಶರಾಗಿ ಆಯ್ಕೆಯಾದ  ಶೃತಿ ಬಿ.ತೇಲಿ ಅವರನ್ನು, ಶಾಲಾ ಆಯಾ ಹಾಗೂ ವಾಹನ ಚಾಲಕನ್ನು  ಶೇ.100 ಹಾಜರಾತಿ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕು. ಶಿಫಾ ಮೊಮೀನ್ ಹಾಗೂ ಸಂಗಡಿಗರಿಂದ ‘ಅಮ್ಮಾ ನಿನ್ನ ತೋಳಿನಲ್ಲಿ’ ಕಿರು ನಾಟಕ ಜನಮನ ಸೆಳೆಯಿತು.