ಅಭಿವೃದ್ಧಿಗೆ ಚಿಕ್ಕ ಕುಟುಂಬ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಿ: ಬಾಗೋಡಿ

ಖಾನಾಪೂರ 11: ಸ್ಥಳೀಯ ಕಕ್ಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  

ವೈದ್ಯಾಧಿಕಾರಿ ಡಾ.ಪ್ರತಾಪ ಬಾಗೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಅಭಿವೃದ್ಧಿ ದೃಷ್ಟಿಯಿಂದ ಚಿಕ್ಕ ಕುಟುಂಬ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.  

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಿಠ್ಠಲ ಆವೋಜಿ ಮಾತನಾಡಿ ಮಿತ ಸಂತತಿ ಹೊಂದುವ ಕುಟುಂಬವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳವಣಿಗೆ ಹೊಂದುವುದರ ಜೊತೆಗೆ ಆರೋಗ್ಯವಂತ ಕುಟುಂಬವಾಗಲು ಸಹಾಯಕವಾಗುತ್ತದೆ. ಕುಟುಂಬ ಯೋಜನೆ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳ, ಶಸ್ತ್ರ ಚಿಕಿತ್ಸೆಗಳಾದ ನೋಸ್ಕಾಲ್ ಫೇಲ್ ವ್ಯಾಸಕ್ತೋಮಿ, ಲ್ಯಾಪ್ರೋಸ್ಕೊಪಿ ಕುರಿತು ತಿಳಿಸಿದರು.  

 ಆರೋಗ್ಯ ಕೇಂದ್ರದ ಸಿಬ್ಬಂದಿ ದೇವೇಂದ್ರ ಈಜಾರಿ, ವೆಂಕಟೇಶ್ ಕತ್ತಿ, ಮಂಜುನಾಥ ತಪಾಸ್ಕರ, ಇಸ್ಮಾಯಿಲ್ ಢಾಲಯತ್, ಗುರುಪಾದ ವಾಲಿ, ವಿಜಯಲಕ್ಷ್ಮಿ ತಿಗಡೋಳ್ಳಿ, ರೂಪಾ ಬಾಗಾಯಿ, ಸುಧಾ ಸಕ್ಕಪ್ಪನವರ, ವಿನೋದಿತಾ ಹವಳ, ಅಂಜನಾ ದಲಾಲ, ಪೂನಂ ನಾಯ್ಕ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.